ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ಗಳು ಹೆಚ್ಚಿನ ಅವಕಾಶಗಳು, ಬೇಡಿಕೆಯನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ತುಮಕೂರಿನ ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜು ಬಡ ವಿದ್ಯಾರ್ಥಿಗಳು ಪ್ಯಾರಾ ಮೆಡಿಕಲ್ ಕೋರ್ಸ್ ಸೇರಲು ಅನುಕೂಲವಾಗುವಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪ್ರವೇಶಾತಿ ಪರೀಕ್ಷೆ ಹಾಗೂ ಉಚಿತ ಕೌನ್ಸೆಲಿಂಗ್‌ನ್ನು ಜೂ.26 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದೆ ಎಂದು ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಶ್ರೀದೇವಿ ಪ್ಯಾರಾ ಮೆಡಿಕಲ್ ಕಾಲೇಜು ಇಂತಹ ಅವಕಾಶಗಳನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೃಷ್ಟಿಸಿ ಕೊಡಬೇಕೆಂದು ಸ್ಕಾಲರ್‌ಶಿಪ್‌ನೊಂದಿಗೆ ಪ್ರವೇಶ ಏರ್ಪಡಿಸಿದೆ. ಟೆಸ್ಟ್ನಲ್ಲಿ ಮೊದಲ 5 ರ‍್ಯಾಂಕ್ ಪಡೆದರೆ 1,20,000 ರೂ ಸ್ಕಾಲರ್ ಶಿಪ್, 6 ರಿಂದ 15 ನೇ ರ‍್ಯಾಂಕ್ ಗಳಿಸಿದವರಿಗೆ 60,000, ರೂ 16 ರಿಂದ 25 ರ‍್ಯಾಂಕ್ ಗಳಿಸಿದರವರಿಗೆ 30,000 ರೂ 26 ರಿಂದ 50 ನೇ ರ‍್ಯಾಂಕ್‌ಗಳಿಸಿದವರಿಗೆ 15,000 ರೂ 51 ರಿಂದ ಮುಂದಿನ ರ‍್ಯಾಂಕ್‌ಗಳಿಸಿದವರಿಗೆ 9 ಸಾವಿರ ರೂ. ಸ್ಕಾಲರ್ ಶಿಪ್ ನೀಡಲಾಗುವುದು.
ಸ್ಕಾಲರ್‌ಶಿಪ್ ಪಡೆದವರು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿದ್ದರೆ 3 ವರ್ಷ 3 ತಿಂಗಳ ಡಿಪ್ಲೋಮಾ, ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾಗಿದ್ದರೆ 2 ವರ್ಷ 3 ತಿಂಗಳ ತರಬೇತಿ, ಪಿ.ಯು.ಸಿ.ಯಲ್ಲಿ ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮೆಡಿಕಲ್ ರೆಕಾರ್ಡ್, ಟೆಕ್ನಾಲಜಿ ಡಿಪ್ಲೋಮಾವನ್ನು ಕಾಲೇಜಿನಲ್ಲಿ ಪರಿಚಯಿಸಲಾಗಿದೆ ಎಂದರು.
ಶ್ರೀದೇವಿ ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಮಾತನಾಡುತ್ತಾ ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಸ್ಥೆಯ ಅಧ್ಯಕ್ಷರು, ಸರ್ಕಾರ ಸ್ಕಾಲರ್ ಶಿಪ್‌ಗಳ ಜೊತೆಗೆ ವಿಶೇಷವಾಗಿ ಸಂಸ್ಥೆಯ ಸ್ಕಾಲರ್‌ಶಿಪ್ ಕೊಡುವ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆ, ಹೊರ ಜಿಲ್ಲೆ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಮುಖ್ಯಸ್ಥರು ಹಾಗೂ ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯರವರು ಮಾತನಾಡುತ್ತಾ ಪ್ಯಾರಾ ಮೆಡಿಕಲ್ ವ್ಯಾಸಂಗಕ್ಕೆ ಶ್ರೀದೇವಿ ವೈದ್ಯಕೀಯ ಕಾಲೇಜಿನ ಪ್ರಾಯೋಗಾಲಯಗಳು, ಆಸ್ಪತ್ರೆಯ ವಿವಿಧ ವಿಭಾಗಗಳು ಬಳಸಿಕೊಳ್ಳಲಾಗುತ್ತಿದೆ. ವಿವಿಧ ಹಿರಿಯ ತಜ್ಞ ವೈದ್ಯರಿಂದ ವಿಶೇಷ ವಿಚಾರ ಸಂಕಿರರ್ಣಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪತ್ಯೇಕ ಹಾಸ್ಟೆಲ್ ಸೌಲಭ್ಯವಿರುತ್ತದೆ. ಡಿಜಿಟಲ್ ಗ್ರಂಥಾಲಯ ಮತ್ತು ಸುಸಜ್ಜಿತ ಕೌಶಲ್ಯ ಪ್ರಯೋಗಾಲಯಗಳನ್ನು ಬಳಸಿಕೊಂಡು ಉತ್ತಮ ತಂತ್ರÀಜ್ಞಾನ ತರಬೇತಿಗಳನ್ನು ನೀಡಲಾಗುತ್ತದೆ. ನಮ್ಮಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶದ ವಿವಿಧ ಆಸ್ಪತೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕಾಗಿ ತೆರಳಿರುತ್ತಾರೆ. ನಮ್ಮ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಸರ್ಕಾರದಿಂದ ಹಮ್ಮಿಕೊಳ್ಳುವ ಎಲ್ಲಾ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಲೊಳ್ಳಲಾಗುತ್ತಿವೆ ಎಂದು ತಿಳಿಸಿದರು.
ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣರವರು ಮಾತನಾಡುತ್ತಾ ಉತ್ತಮ ತಂತ್ರಜ್ಞನರನ್ನು ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿ ಶ್ರೀದೇವಿ ವೈದ್ಯಕೀಯ ಸಂಸ್ಥೆಯು ಹೆಚ್ಚು ಹೆಚ್ಚು ಅವಿಷ್ಕಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ನೈಪುಣಿತೆಯನ್ನು ಪಡೆಯುವುದಕ್ಕಾಗಿ ವಿಶೇಷ ಸುಸುಜ್ಜಿತ ಪ್ರಾಯೋಗಾಲಯಗಳನ್ನು ರಚಿಸಲಾಗಿದೆ. ನಮ್ಮ ಸಂಸ್ಥೆಗಳಲ್ಲಿ ಭೌತಿಕ ವಿಚಾರದ ಜೊತೆಗೆ ಹೆಚ್ಚು ಹೆಚ್ಚು ಪ್ರಾಯೋಗಿಕ ತಂತ್ರಜ್ಞತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಸಿ.ಪಿ.ಚಂದ್ರಪ್ಪರವರು ಮಾತನಾಡುತ್ತಾ ನಮ್ಮ ವಿದ್ಯಾರ್ಥಿಗಳಿಗೆ ವಿಶೇಷವಾದ ರೀತಿಯಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಹೆಚ್ಚು ಸದೃಢರಾಗಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಜೂ.24 ನೋಂದಣಿಗೆ ಕಡೆ ದಿನವಾಗಿದ್ದು, ಈಗಾಗಲೇ ನೂರಕ್ಕೂ ಅಧಿಕ ಮಂದಿ ನೋಂದಾಯಿಸಿದ್ದಾರೆ. ಹೆಚ್ಚಿನ ವಿವರಕ್ಕೆ ಮೊ.8073836235, 9686114872, 9449863468 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ರಾಮಕೃಷ್ಣರವರು ಭಾಗವಹಿಸಿದ್ದರು.
ಪೋಟೋ ಕ್ಯಾಷ್ಷನ್:
ನಗರದ ಶಿರಾರಸ್ತೆಯ ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಸ್ಕಾಲರ್‌ಶಿಪ್ ಪರೀಕ್ಷೆ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲರಾದ ಡಾ.ಸಿ.ಪಿ.ಚಂದ್ರಪ್ಪ ಮುಂತಾದವರು ಪ್ರತಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.