ನಮ್ಮ ದೇಶವು ಸದ್ಯದಲ್ಲಿಯೇ ಆರ್ಥಿಕ ತುರ್ತು ಪರಿಸ್ಥಿತಿಯತ್ತ ಸಾಗುತ್ತಿದೆ ಎಂಬ ಸಂಶಯ ವ್ಯಕ್ತಪಡಿಸಿದ ಮಾಜಿ ಶಾಸಕ ಕೆ.ಎನ್.ಆರ್.

ತುಮಕೂರು_ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ ಆತನ ವಿರುದ್ಧ ಇಂದು ಹಲವರು ಹಲವು ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

ತುಮಕೂರಿನಲ್ಲಿ  ಖಾಸಗಿ ಹೋಟೆಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಸರ್ಕಾರ ಇಂದು ಹಲವು ಕೋಮುವಾದವನ್ನು ಸೃಷ್ಟಿ ಮಾಡುವ ಸಲುವಾಗಿ ಕೇವಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡು ಹಿಜಾಬ್ ವಿವಾದ, ಹಲಾಲ್ ವಿವಾದ, ಮಾವಿನಹಣ್ಣು ವಿವಾದ, ದೇವಸ್ಥಾನದ ಆವರಣದಲ್ಲಿ ವ್ಯಾಪಾರ  ನಿಷೇದ ಮುಂತಾದ ವಿವಾದಗಳನ್ನು ಸೃಷ್ಠಿ ಮಾಡುವ ಮೂಲಕ ಜನರಲ್ಲಿ ವೃಥಾ ಸುಮ್ಮನೆ ಗೊಂದಲ ಸೃಷ್ಠಿಸುವುದರೊಂದಿಗೆ ಸಮುದಾಯಗಳ ನಡುವೆ ವೈಷಮ್ಯವನ್ನು ಹುಟ್ಟಿಹಾಕುವ ಕೆಲಸ ಮಾಡುತ್ತಿರುವುದಲ್ಲದೇ  ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಹಿಂದು ವಿರೋಧಿಯಾಗಿರಲಿಲ್ಲ ಆತ ಒಬ್ಬ ಅಪ್ರತಿಮ ದೇಶಭಕ್ತ ಅದರಲ್ಲಿ ಯಾವುದೇ ಅನುಮಾನವಿಲ್ಲ ನಾಲ್ಕು ಬಾರಿ ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟಿಷರ ವಿರುದ್ಧ ಸೋತ ಕಾರಣ ಬ್ರಿಟಿಷರಿಗೆ  ಯುದ್ಧದ ಸಮಯದಲ್ಲಿ ಆದ ನಷ್ಟವನ್ನು ಭರಿಸಲು  ವಿಫಲರಾದ ಕಾರಣ ತನ್ನ ಇಬ್ಬರು ಮಕ್ಕಳನ್ನು 6 ತಿಂಗಳ ಕಾಲ ಬ್ರಿಟಿಷರಿಗೆ  ಒತ್ತೆಯಾಳು (ಜೀತಕ್ಕೆ) ಈಡುತ್ತಾನೆ ಆರು ತಿಂಗಳ ನಂತರ ಹಣ ನೀಡಿ ತನ್ನ ಮಕ್ಕಳನ್ನು ವಾಪಸ್ ಕರೆದುಕೊಂಡು ಬಂದ ಟಿಪ್ಪು ವಿರುದ್ಧ ಇಂದು ಹಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಎಷ್ಟು ಮಾತ್ರ ಸರಿ ಎಂದು ತಮ್ಮ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾದ ಬೆಂಗಳೂರಿನ ಅರಮನೆ ಆವರಣದಲ್ಲಿ ಇರುವ ವೆಂಕಟೇಶ್ವರನ ದೇವಸ್ಥಾನದ ಜೊತೆಗೆ ಹಲವಾರು ದೇವಸ್ಥಾನಗಳನ್ನು ಜೀರ್ಣೋಧ್ಧಾರ ಮಾಡಿರುವುದಲ್ಲದೇ ಟಿಪ್ಪು ಹಿಂದೂ ಸಮುದಾಯವನ್ನು ವಿರೋಧ ಮಾಡುವುದಾದರೆ ಅಂದು ದೇವಸ್ಥಾನವನ್ನು ಕಟ್ಟಲು ಯಾಕೆ ಅವಕಾಶ ಕೊಟ್ಟಿದ್ದರು , ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಹೇಗೆ ನಿರ್ಮಾಣ ಮಾಡಲು ಬಿಟ್ಟಿದ್ದರು ನಂತರ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಚ್ಚೆ ಲಿಂಗವನ್ನು ದಾನವಾಗಿ ನೀಡಿದ್ದು ಅದಕ್ಕೆ ಇಂದೂ ಸಹ ನಿತ್ಯ ಪೂಜೆ ನೆರವೇರುತ್ತದೆ ಎಂದು ಹೇಳಿದರು.

ಪೇಶ್ವರು ದಂಡೆತ್ತಿ ಬಂದಾಗ ಶೃಂಗೇರಿ ಮಠ ಹಾಳು ಮಾಡಲು ಮುಂದಾದ ಕಾರಣ ಅಂದು ಟಿಪ್ಪುಸುಲ್ತಾನ್ ತನ್ನ ಸೈನ್ಯದ ಮೂಲಕ ಹೋರಾಡಿ ಶೃಂಗೇರಿ ಮಠವನ್ನು ಕಾಪಾಡಿದರು ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ಸಹ ಸಲಾಂ ಆರತಿ ಮಾಡುತ್ತಿದ್ದು ಆಗ ಕೇಸರಿ ಶಾಲು ಹಾಕಿದ್ದ ಸಂಘಟನೆಗಳು ಎಲ್ಲಿ ಇದ್ದವು ಎಂದು ಪ್ರಶ್ನೆ ಮಾಡಿದ್ದಾರೆ.

ಇಂದಿನ ಯುವ ಪಡೆಯ ಮೂಲಕ ತಪ್ಪು ಸಂದೇಶವನ್ನು ನೀಡಿ ಸಮಾಜ ಒಡೆಯುವ ಕೆಲಸವನ್ನು ಇಂದು ಬಿಜೆಪಿ ಸರ್ಕಾರ ಹಿಂದೂಪರ ಸಂಘಟನೆಗಳು ಮೂಲಕ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡುತ್ತಾ, ದೇಶದಲ್ಲಿ ಪ್ರಸ್ತುತ ತುರ್ತು ಪರಿಸ್ಥಿತಿ ಬರುವ ಸಂದರ್ಭ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಅದಕ್ಕೆ ಕಾರಣ ಬಿಜೆಪಿ ಪಕ್ಷದವರು ಪ್ರತಿ ನಿತ್ಯ ದಿನಬಳಕೆ ವಸ್ತುಗಳು, ಪೆಟ್ರೋಲಿಯಂ ಧರ ಏರಿಕೆ ಮಾಡುತ್ತಿರುವ ಕಾರಣ ನಮ್ಮ ದೇಶವೂ ಶ್ರೀಲಂಕ ಮಾದರಿಯಾದರೂ ಅಚ್ಛರಿ ಪಡಬೇಕಾಗಿಲ್ಲ ಎಂದರು, ಜನರು ಇಂತಹ ಕೋಮು ಸಂಘರ್ಷಕ್ಕೆ ಮುಂದಾಗದೇ ಬೆಲೆ ಏರಿಕೆಯನ್ನು ತಡೆಯುವಂತೆ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿ ಹುಲಿಕುಂಟೆ ಮಠ್, ದೇವರಾಜ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!