ಸ್ವಾಭಿಮಾನದ ದಿನ: ಅಂಬೇಡ್ಕರ್ ಜಯಂತಿ ದಿನ.

ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ತುಮಕೂರು ಇಲ್ಲಿ ನಡೆದ ಅಂಬೇಡ್ಕರರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕರು, ಕತೆಗಾರರು, ಸಾಂಸ್ಕೃತಿಕ ಚಿಂತಕರು ಆದ ಗುರು ಪ್ರಸಾದ್ ಕಂಟಲಗೆರೆ ರವರು ಮಾತನಾಡುತ್ತಾ

ಶೋಷಿತರ, ಧ್ವನಿಯಿಲ್ಲದವರ, ದಬ್ಬಾಳಿಕೆಗೆ ಗುರಿಯಾದವರ, ಮಾತನಾಡಲು ಬಾಯಿ ಕಳೆದುಕೊಂಡ ಜನರು ತಿರುಗಿ ಬಿದ್ದು ಮಾತನಾಡಿದ ದಿನ, ಮಾತನಾಡುವ ಹಕ್ಕು ಪಡೆದ ದಿನವೇ ಅಂಬೇಡ್ಕರ್ ಜಯಂತಿ ಆಚರಣೆ ದಿನ ಎಂದು ಅಭಿಪ್ರಾಯಪಟ್ಟರು.


ಕ್ರಾಂತಿಯ ಹೆಜ್ಜೆಗೆ ಮೊದಲು ಅಡಿಯಿಟ್ಟವರು, ಹೋರಾಟದ ಬೀಜ ಬಿತ್ತಿದವರು ಅಂಬೇಡ್ಕರ್ ರವರು.
ಧರ್ಮಾಂಧತೆ, ಧರ್ಮದ ಕೇಡು, ಸಮಾಜವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯುತ್ತದೆ. ಕ್ರೈಸ್ತ, ಜೈನ, ಬೌದ್ಧ, ಮುಸ್ಲಿಂ ಧರ್ಮದಲ್ಲಿನ ಜನರು ನಾವು ಇಂತ ಧರ್ಮದವರು ಎಂದು ಹೇಳುವಂತೆ ಹಿಂದೂ ಧರ್ಮದಲ್ಲಿ ಜಾತಿಯನ್ನು ಉಲ್ಲೇಖಿಸಿ ಹೇಳಿಕೊಳ್ಳುವ ಜನರೇ ಅಧಿಕವಾಗಿದ್ದಾರೆ. ಕ್ರಾಂತಿಯನ್ನು ಎಲ್ಲರೂ ಮಾಡುವಂತಿಲ್ಲ, ಶೂದ್ರರ ಕೈಯಲ್ಲಿ ಆಯುಧಗಳಿಲ್ಲದ ಕಾರಣ ಕ್ರಾಂತಿ ಮಾಡುವ ಹಕ್ಕಿಲ್ಲ ಎಂಬುದನ್ನು ಸಮಾಜ ಸಾರುತ್ತದೆ.

ಸಹ ಪ್ರಾಧ್ಯಾಪಕರಾದ ಡಾ ಕೆ ಎಸ್ ಸಿದ್ದರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಂಶುಪಾಲರಾದ ಪ್ರೊ. ಬಿ.ಎಸ್ ಲತಾ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಾಪಕರಾದ ಡಾ ಮಾರುತಿ ಎನ್ ಎನ್ ರವರು ಸ್ವಾಗತಿಸಿ, ಪ್ರಶಿಕ್ಷಣಾರ್ಥಿ ಲಹರಿಶ್ರೀ ವಂದಿಸಿದರು, ಪ್ರಶಿಕ್ಷಣಾರ್ಥಿ ಜ್ಯೋತಿಕಾ ನಿರೂಪಣೆ ಮಾಡಿದರು. ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!