ತುಮಕೂರು : ಇತ್ತೀಚಿನ ದಿನಗಳಲ್ಲಿ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾದದ್ದು, ಪ್ರತಿ ಒಬ್ಬ ವ್ಯಕ್ತಿ ಕುಟುಂಬ, ಬಡಾವಣೆ, ಹಳ್ಳಿ, ನಗರ, ರಾಜ್ಯ ಹಾಗೂ ದೇಶದ ಪ್ರಗತಿ ಮತ್ತು ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ ಮಹಿಳೆ ತಮ್ಮ ಮಕ್ಕಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಬಲ್ಲರು, ಮಹಿಳೆಯನ್ನು ಯಾವುದೇ ಕಾರಣಕ್ಕೂ ತಾತ್ಸಾರ ಮನೋಭಾವದಲ್ಲಿ ಕಾಣುತ್ತಿದ್ದ ಸಮಾಜದಲ್ಲಿ ಸಾಧಿಸುವ ಚೈತ್ಯನ್ಯವಾಗಿ ಮಹಿಳೆ ಸಂಘಟನೆಯಾಗಿ ಆರ್ಥಿಕವಾಗಿ ಮತ್ತು ಸದೃಢತೆಯಿಂದ ಮುನ್ನಡೆಯುತ್ತಿದ್ದಾರೆ. ಸ್ತ್ರೀಯರು ಪುರುಷರಿಗಿಂತ ವಿಭಿನ್ನರು ಹಾಗೂ ಎಲ್ಲಾ ವಿಷಯಗಳಲ್ಲೂ ಪುರುಷಗಿಂತ ಒಂದು ಕೈ ಮೇಲು ಎಂದು ಶ್ರೀದೇವಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಶ್ರೀದೇವಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಾತನಾಡುತ್ತಾ ಪುರುಷ ಯಾವುದೇ ಸಾಧನೆ ಮಾಡಬೇಕಾದರೆ ಅಲ್ಲಿ ಒಬ್ಬ ಮಹಿಳೆಯ ಅಸ್ತಿತ್ವ ಅಗತ್ಯ, ಮಹಿಳೆ ಇಲ್ಲದಿದ್ದರೆ ಪುರುಷನ ಜೀವನ ಶೂನ್ಯ ಆದಿಕಾಲದಿಂದಲೂ ಸಹ ಮಹಿಳೆಯರು ಪುರುಷರಿಗೆ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಹಕಾರವನ್ನು ನೀಡುತ್ತಲೇ ಬಂದಿದ್ದಾರೆ, ಸ್ತ್ರೀ ಜೊತೆಗಿಲ್ಲದಿದ್ದರೆ ಪುರುಷ ಸಾಧಿಸುವುದು ಬಹಳ ಕಷ್ಟ ಇಡೀ ಸಂಸಾರದ ಹೊಣೆಯನ್ನು ಹೊತ್ತ ಮಹಿಳೆ ಸಂಸಾರವನ್ನು ಯಾವುದೇ ರೀತಿಯಾದ ಕಷ್ಟವಿಲ್ಲದೆ ನಡೆಸುತ್ತಾಳೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‌ರವರು ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. ಇದೇ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ವೈದ್ಯರಾದ ಡಾ.ಶಿಲ್ಪ, ಡಾ.ಭಾವನ, ಡಾ.ಸೌವ್ಯ, ಡಾ.ದಿವ್ಯ, ಡಾ.ಪವಿತ್ರ, ಶ್ರೀದೇವಿ ಆಸ್ಪತ್ರೆಯ ಹೆಚ್.ಆರ್.ಎಕ್ಸಿಕ್ಯೂಟಿವ್ಸ್ ಜಯಲಕ್ಷ್ಮಿ, ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.