ಅಂಚೆ ನೌಕರರ ಒಕ್ಕೂಟ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘಟನೆಗಳಿಂದ ಎರಡು ದಿನದ ಮುಷ್ಕರ

167 ವರ್ಷಗಳ ಇತಿಹಾಸವಿರುವ ಅಂಚೆ ಇಲಾಖೆಯು ನಿಷ್ಟೆ ನಿಪುಣತೆ ನಿಖರತೆಗೆ ಹೆಸರಾಗಿರುವ ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ದಾಪುಗಾಲು ಇಟ್ಟಿದೆ ಇದು ನಿಜಕ್ಕೂ ದುರಾದೃಷ್ಟ ಕರ ಸಂಗತಿ.
ಕೋವಿಡ್ ಸಮಯದಲ್ಲಿ ಒಂದು ದಿನವೂ ರಜೆಯು ಪಡೆಯದೆ ಕೊರೋನ ವಾರಿಯರ್ಸ್ ಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದ್ದು  ಸಾಕಷ್ಟು ಅಂಚೆ ಸಿಬ್ಬಂದಿಗಳು‌ ಮೃತ ಪಟ್ಟಿದ್ದಾರೆ. ಈ ಇಲಾಖೆಯ ಉಳಿವೀಗಾಗಿ ಅಂಚೆ ಸಿಬ್ಬಂದಿಯಾದ ನಾವು ತೀವ್ರ ಹೋರಾಟ ಮಾಡುವ ಅನಿವಾರ್ಯತೆ ಮತ್ತು ‌ಬದ್ಧತೆ ನಮ್ಮೆಲ್ಲರ ಮೇಲಿದೆ ಎಂದು ಸಂಘಟಕರಾದ  ಕೆ‌ ಶ್ರೀನಿವಾಸ ಮನವರಿಕೆ ಮಾಡಿದರು.
2004ರಿಂದ ಈಚೆಗೆ ನೇಮಕವಾದ ಯಾವ  ಇಲಾಖೆಯ ನೌಕರರಿಗೂ ಪಿಂಚಣಿ ಸೌಲಭ್ಯ ಇಲ್ಲವಾಗಿದ್ದು ಹೊಸ ಪಿಂಚಣಿ ನೀತಿಯನ್ನು ಜಾರಿಗೆ ತರಲಾಗಿದೆ‌. ಇದು ಸರಿ ಇಲ್ಲವೆಂದು ಬೇರೆ ರಾಜ್ಯಗಳಲ್ಲಿ ಹಳೆ‌ ಪಿಂಚಣಿ ಯನ್ನು ಮರು ಜಾರಿ ಮಾಡಿರುತ್ತಾರೆ ಹಾಗೆಯೇ ಅಂಚೆ ನೌಕರರಿಗೂ ಸಹ ಹಳೆ ಪಿಂಚಣಿ ಜಾರಿಯಾಗಬೇಕೆಂದು ಹರಿಪ್ರಸಾದ್ ಟಿ ಪಿ ಯವರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಿಸುತ್ತಿದ್ದರು ಇನ್ನು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದಿರುವುದು ದುರಾದೃಷ್ಟ ಕರವಾಗಿದೆ.
ಗ್ರಾಮೀಣ ಅಂಚೆ ನೌಕರರಿಗೆ ನಾಲ್ಕು ಗಂಟೆ ಕೆಲಸ ಅವಕಾಶ ಕಲ್ಪಿಸಿದ್ದರು ಸಹ ಹೆಚ್ಚುತ್ತಿರುವ ಜನಸಂಖ್ಯೆ ಗೆ ಅನುಗುಣವಾಗಿ ಬ್ಯಾಂಕಿಂಗ್, ಪೋಸ್ಟಲ್, ಐಪಿಪಿಬಿ ಮತ್ತು‌ ಎಈಪಿಎಸ್ ಸೇವೆಗಳನ್ನು ನೀಡಲಾಗುತ್ತಿದೆ ಇದರ  ಜೊತೆಗೆ ‌ಸಾಮಾಜಿಕ ಭದ್ರತಾ ಪಿಂಚಣಿ ಯನ್ನು ಹಾಗೂ ಇತರೆ ಸೇವೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ನೀಡುತ್ತಿದ್ದಾರೆ. ಕಾನೂನು ಪ್ರಕಾರ ನಾಲ್ಕು ಗಂಟೆ ಕೆಲಸ ಮಾಡುವ ಜಾಗದಲ್ಲಿ ಎಂಟು ಗಂಟೆ ಕೆಲಸ ಮಾಡುತಿದ್ದಾರೆ. ಕೂಡಲೇ ಜಿ ಡಿ ಎಸ್ ಕಂಡಕ್ಟ್ ‌ಆಂಡ್ ಎಂಗೆಜ್ಮೆಂಟ್ ರೂಲ್ಸನ್ನು ಹಿಂಪಡೆಯಬೇಕು ‌1898 ಭಾರತೀಯ ಅಂಚೆ ಕಾಯ್ದೆ ಗೆ ತಿದ್ದುಪಡಿ ತಂದು ಗ್ರಾಮೀಣ ಅಂಚೆ ನೌಕರರ ನನ್ನು ಕೇಂದ್ರ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು‌ ಎಂದು ನಿತೀಶ್ ರವರು ಆಗ್ರಹಿಸಿದ್ದಾರೆ.
ನರೇಗಾ ಅಡಿಯಲ್ಲಿ ಗ್ರಾಮೀಣ ಅಂಚೆ ಕಛೇರಿಗಳನ್ನು ತೆಗೆದು ಈಗಿರುವ ಆರೈಸಿಟಿ ಡಿವೈಜ್ ಬಿಟ್ಟು ಡೆಕ್ಸ್ ಟಾಪ್ ಪ್ರಿಂಟರ್ ಜೊತೆಗೆ ಭಾರತ್ ನೆಟ್ ಯೋಜನೆಯ ಮುಖಾಂತರ ಈಗೀರುವ ನೆಟ್ವರ್ಕ್ ಸಮಸ್ಯೆ ಯನ್ನು ಬಗೆ ಹರಿಸಬೇಕ ಹಾಗೂ ಕಮಲೇಶ್ ಕಮಿಟಿಯ ಶಿಫಾರಸ್ಸಿನಂತೆ‌ ನೀಡಬೇಕಿದ್ದ 12-24-36 ರಾ ಜೇಷ್ಠತಾ ಬಡ್ತಿಯನ್ನು ನೀಡಬೇಕೆಂದೂ ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಅದ್ಯಕ್ಷರಾದ ಶಾಂತಯ್ಯನವರು ಆಗ್ರಹಿಸಿದ್ದಾರೆ. ಇನ್ನಿತರ ಇತರ 25 ಬೇಡಿಕೆಗಳ ಜಾರಿಗಾಗಿ ಎಲ್ಲಾ ಅಂಚೆ ಇಲಾಖೆಯ ಫೆಡರೆಷನ್ಗಳು ಆಗ್ರಹಿಸಿದವು.

Leave a Reply

Your email address will not be published. Required fields are marked *

error: Content is protected !!