ತುಮಕೂರು: ಜಿಲ್ಲೆಯ 48 ವ?ದ ರೈತರೋರ್ವರಿಗೆ ಸಿದ್ಧಾರ್ಥ ಹಾರ್ಟ್ ಸೆಂಟರ್‌ನಲ್ಲಿ ನಡೆಸಲಾದ ಕೀ ಹೋಲ್ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವಿದೇಶಿ ಗುಣಮಟ್ಟದ ಉಪಕರಣಗಳನ್ನು ಬಳಸಿ ಮಾಡಲಾದ ಶಸ್ತ್ರಚಿಕಿತ್ಸೆ ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲಾಗಿದೆ. ತುಮಕೂರು ಜಿಲ್ಲೆ ಬೆಳ್ಳಾವಿ ಹೋಬಳಿಯ ಅಸಲೀಪುರ ಗ್ರಾಮದ ೪೮ವ?ದ ರೈತ ಶಿವಕುಮಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ.
ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ದಾಟಿದ್ದು, ಕರ್ನಾಟಕದ ಬೆಂಗಳೂರಿನ ಆಯ್ದ ಕೆಲವು ಆಸ್ಪತ್ರೆಗಳನ್ನು ಹೊರತುಪಡಿಸಿ ಬೇರಲ್ಲೂ ಮಾಡಲಾಗದ ಶಸ್ತ್ರಚಿಕಿತ್ಸೆಯನ್ನು ತಜ್ಞ ವೈದ್ಯ ಡಾ.ತಮೀಮ್ ಅಹಮ್ಮದ್ ಅವರ ನೇತೃತ್ವದ ತಂಡ ಮಾಡಿದೆ. ಇದು ಆಸ್ಪತ್ರೆಯ ಮತ್ತೊಂದು ಮೈಲಿಗಲ್ಲಾಗಿದೆ.
ಹಾರ್ಟ್ ಬೀಟ್ಸ್ ಮೂಲಕ ಒಂದು ಶ್ವಾಸಕೋಶದ ಉಸಿರಾಟದೊಂದಿಗೆ ಬೈಪಾಸ್ ಸರ್ಜರಿ ಮಾಡಿದ್ದು ಚಿಕಿತ್ಸೆ ಯಶಸ್ವಿಯಾಗಿದೆ. ಅರ್ಧ ಘಂಟೆಯಲ್ಲಿಯೇ ರೋಗಿ ಚೇತರಿಸಿಕೊಂಡಿದ್ದು ಐಸಿಯು ನಿಂದ ಹೊರಗೆ ಬಂದಿದ್ದಾರೆ. ಈಗ ಸಾಮಾನ್ಯರಂತೆ ನಡೆದಾಡುತ್ತಿದ್ದಾರೆ, ಆಪರೇ?ನ್ ಆದ ಅನುಭವವೇ ಇಲ್ಲದಂತೆ ಸಾಮಾನ್ಯವಾಗಿದ್ದಾರೆ.
ವೈದ್ಯರ ತಂಡ ಇಂತಿದೆ:
ಆಸ್ಪತ್ರೆಯ ಪ್ರಮುಖ ವಿಭಾಗವಾದ ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮೇಲ್ವಿಚಾರಕರಾದ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್, ಡಾ.ವಾಸುದೇವ್ ಬಾಬು, ಡಾ. ತವೂರ್, ಡಾ.ನವೀನ್, ಡಾ.ಸುರೇಶ್, ಡಾ. ಆಶಿತ ಕಾಮತ್, ವಿವೇಕ್, ಮತ್ತು ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ನೇತೃತ್ವದ ತಂಡ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಸಫಲವಾಗಿದೆ.
ವೈದ್ಯ ಡಾ.ತಮೀಮ್ ಅಹಮದ್ ಮಾತನಾಡಿ, (ಒIಅS ಅಥವಾ ಏeಥಿhoಟe ಊeಚಿಡಿಣ Suಡಿgeಡಿಥಿ) ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ. ಸಾಮಾನ್ಯವಾಗಿ ೭-೮ ಇಂಚು ಹೃದಯ ಭಾಗದಲ್ಲಿ ಇದರಲ್ಲಿ ೪ ಇಂಚಿನ? ಭಾಗ ಮಾತ್ರ ಕತ್ತರಿಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸುಮಾರು ಒಂದು ವಾರದೊಳಗೆ ರೋಗಿ ಗುಣಮುಖನಾಗಿ ಸಹಜ ಸ್ಥಿತಿಗೆ ಮರಳುತ್ತಾರೆ ಎಂದರು.
ಆಪರೇ?ನ್ ನಡೆದ ರೀತಿ:
ಶ್ರೀ ಸಿದ್ಧಾರ್ಥ ಆಸ್ಪತ್ರೆಯಲ್ಲಿ ನಡೆದ ಈ ಆಪರೇ?ನ್ ವಿಶೇ?ತೆಯಿಂದ ಕೂಡಿದೆ. ಹೃದಯದ ಎಲಬನ್ನು (ಮೂಳೆ) ಕತ್ತರಿಸಿ ಮಾಡಬೇಕಾದ ಶಸ್ತ್ರಚಿಕಿತ್ಸೆಗೆ ಬದಲಿ ಮಾರ್ಗ ಅನುಸರಿಸಿ ಮಾಡಲಾಗಿದೆ. ಅಂದರೆ ಇಲ್ಲಿ ರೋಗಿಯ ಗುಣಲಕ್ಷಣಗಳನ್ನು ಪರಿಶೀಲಿಸಿದ ನಂತರ ’ಕೀ ಹೊಲ್’ ಆಪರೇ?ನ್ ನಡೆಸಲಾಗಿದೆ. ಒಂದು ಕಡೆ ಹಾರ್ಟ್ ಬಿಟ್ ಮಾಡತ್ತಿರುವಾಗಲೇ ಇನ್ನೊಂದು ಕಡೆ ಒಂದೇ ಶ್ವಾಸಕೋಶದಲ್ಲಿ ಉಸಿರಾಡುವಂತ ಪರಿಸ್ಥಿತಿಯಲ್ಲಿ ರೈತ ಶಿವಕುಮಾರ್ ಅವರಿಗೆ ಸರ್ಜರಿ ಮಾಡುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದ್ದಾರೆ.
ಚಿಕಿತ್ಸೆಗೆಂದು ಬಂದ ೪೮ ವ?ದ ಶಿವಕುಮಾರ್ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಹಾರ್ಟ್ ಆಟ್ಯಾಕ್ ಆಗಿದನ್ನು ಖಚಿತಪಡಿಸಿಕೊಂಡು ???ಂಜಿಯೋಗ್ರಾಮ್ ಮಾಡಿದಾಗ ಹೃದಯದಲ್ಲಿ ಎರಡು ಹೋಲ್‌ಗಳು ಬ್ಲಾಕ್‌ಗಳಾಗಿದ್ದು, ಬೈಪಾಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬೈಪಾಸ್ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖರಾಗುತ್ತಾರೆ ಎಂದು ನಮ್ಮ ತಂಡ ನಿರ್ಧಾರ ತೆಗೆದುಕೊಂಡಿತು. ಆಗ ಈ ವ್ಯಕ್ತಿಗೆ ಸ್ಪೆ?ಲ್ ’ಕೀ ಹೋಲ್’ ಆಪರೇ?ನ್ (Keyhole Heart Surgery) ಮಾಡಬೇಕು ಅಂತ ತಿರ್ಮಾನಿಸಲಾಯಿತು. ಬೋನ್ ಕಟ್ ಮಾಡಬೇಕು ಅಂತ ತೀರ್ಮಾನ ಮಾಡಿದಾಗ, ಅದನ್ನು ಮಾಡದೆ ಬೈಪಾಸ್ ಆಪರೇ?ನ್ ಅಂದರೆ ಯಾವುದೇ ಬೋನ್ ಕಟ್ ಮಾಡದೆ ಆಪರೇ?ನ್ ಮಾಡುವ ಯೋಜನೆ ರೂಪಿಸಿ, ವಿದೇಶದಿಂದ ಆಪರೇ?ನ್‌ಗೆ ಬೇಕಾದ ಉಪಕರಣಗಳನ್ನು ತಂದು ವಿನೂತನ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನ ಮೇಲ್ವಿಚಾರಕರಾದ ಹಾಗೂ ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ವಿವರಿಸಿದರು.
ಈ ರೀತಿಯ ಆಪರೇ?ನ್ ಸಾಮಾನ್ಯವಾಗಿ ಕರ್ನಾಟಕದ ಐದು ಕಡೆ ಆಗಬಹುದು. ಅದು ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಮಾತ್ರ. ಸುಮಾರು ೮ ಲಕ್ಷ ರೂಪಾಯಿ ಹಣ ಖರ್ಚಾಗಬಹುದು ಎಂದು ಅಂದಾಜಿಸಿದರು. ವಿದೇಶಿ ಗುಣಮಟ್ಟದ ಸಾಧನ-ಸಲಕರಣೆಗಳ ವೆಚ್ಚ ಹೆಚ್ಚಿರುತ್ತದೆ. ಆದ್ದರಿಂದ ದುಬಾರಿ ಶಸ್ತ್ರಚಿಕಿತ್ಸೆ ಇದಾಗಿದೆ. ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಆಪರೇ?ನ್ ಮಾಡಲಾಗಿದೆ. ಇದು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾರ್ಡಿಯಾಕ್ ಫ್ರಾಂಟಿಡ ಸಂಸ್ಥೆಯ ಸಾಧನೆ ಎಂದು ಅವರು ವಿವರಿಸಿದರು.
ಈ ರೀತಿಯ ಸ್ಪೆ?ಲ್ ಬೈಪಾಸ್ ಆಪರೇ?ನ್ ಮಾಡುವುದರಿಂದ ರೋಗಿ ಬಹಳ ಬೇಗ ಚೇತರಿಸಿಕೊಳ್ಳಬಹುದು. ಬ್ಲಾಡ್ ಲಾಸ್ ಕಡಿಮೆಯಾಗುತ್ತದೆ. ವ್ಯಕ್ತಿ ಆಪರೇ?ನ್ ನಂತರವೂ ಸಾಮಾನ್ಯರಂತೆ ಕೆಲಸ ಮಾಡಬಹುದು. ಯಾವುದೇ ತೊಂದರೆಯಾಗುವುದಿಲ್ಲ. ಸಾಮಾನ್ಯ ವ್ಯಕ್ತಿಗೂ ಇಂತಹ ಚಿಕಿತ್ಸೆ ಸಿಗುವಲ್ಲಿ ಶ್ರಮಿಸಿದ ಡಾ.ಜಿ.ಪರಮೇಶ್ವರ ಕಾರ್ಯಕ್ಕೆ ಡಾ.ತಮೀಮ್ ಅಹಮದ್ ಮೆಚ್ಚುಗೆ ಸೂಚಿಸಿದರು.
ರೈತ ಶಿವಕುಮಾರ್ ಪ್ರತಿಕ್ರಿಯೆ:
ಹದಿನೈದು ದಿನಗಳ ಹಿಂದೆ ಎದೆನೋವು ಸಂಭವಿಸಿತ್ತು, ನಾನು ಗ್ಯಾಸ್ ಟ್ರಬಲ್ ಎಂದು ಉದಾಸೀನ ಮಾಡಿದೆ. ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ಹಾರ್ಟ್ ಅಟ್ಯಾಕ್ ಆಗಿದೆ. ಬೇಗ ಹತ್ತಿರದಲ್ಲಿರುವ ಸಿದ್ಧಾರ್ಥ ಆಸ್ಪತ್ರೆಗೆ ತೆರಳಿ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯ ಸಲಹೆ ನೀಡಿದರು, ಅವರ ಸಲಹೆ ಮೆರೆಗೆ ಸಿದ್ಧಾರ್ಥ ಆಸ್ಪತ್ರೆಗೆ ತೆರಳಿದೆ, ಪರೀಕ್ಷಿಸಿದ ವೈದ್ಯರು ಎರಡು ನರ ಬ್ಲಾಕ್ ಆಗಿದೆ ಆಪರೇ?ನ್ ಮಾಡಿದರೆ ಗುಣಮುಖರಾಗುವಿರಿ ಎಂಬ ಭರವಸೆ ನೀಡಿ, ಆಪರೇ?ನ್ ಮಾಡಿದರು. ಚಿಕಿತ್ಸೆ ಫಲಕಾರಿಯಾಗಿದೆ ನಾನು ಗುಣಮುಖವಾಗಿದ್ದೇನೆ, ಸಹಕರಿಸಿದ ವೈದ್ಯರ ತಂಡಕ್ಕೆ ಧನ್ಯವಾದಗಳು ಎಂದರು.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆಪರೇ?ನ್ ಮಾಡಿದರೆ ಎಂಟು ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಬೆಂಗಳೂರಿನ ಎರಡು ಇಲ್ಲ ಮೂರು ಕಡೆ ಮಾಡಬಹುದು ಎಂದರು. ಆದರೆ ಶ್ರೀ ಸಿದ್ಧಾರ್ಥ ಆಸ್ಪತ್ರೆಗೆ ತೆರಳಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಸಿಗುವ ಸೇವೆಯನ್ನು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ನೀಡಿತ್ತು. ಸಕಲ ಸೌಲಭ್ಯಗಳನ್ನು ಒದಗಿಸಿ, ಗ್ರಾಮೀಣ ಬಡಜನರಿಗೆ ಸೇವೆ ಕಲ್ಪಿಸುತ್ತಿರುವ ಡಾ.ಜಿ.ಪರಮೇಶ್ವರ್ ಅವರ ಕಾರ್ಯಕ್ಕೆ ಶಿವಕುಮಾರ್ ಧನ್ಯತಾಭಾವ ತಳೆದರು.
ವೈದ್ಯರ ಸಾಹಸಕ್ಕೆ ಶ್ಲಾಘನೆ:
ಸಮಾಜದ ಕಟ್ಟಕಡೆಯ ಬಡಜನರಿಗೆ ಸಂಕ? ಕಾಲದಲ್ಲಿ ಆರೋಗ್ಯ ಸೇವೆ ಸಕಾಲದಲ್ಲಿ ದೊರೆಯಲಿ ಎಂಬ ಗುರಿಯನ್ನು ಆಸ್ಪತ್ರೆ ಹೊಂದಿದೆ. ಗ್ರಾಮಾಂತರ ಪ್ರದೇಶದ ಜನ ದೂರದ ಮಹಾನಗರಗಳಿಗೆ ತೆರಳಿ ದುಬಾರಿ ಖರ್ಚು-ವೆಚ್ಚಗಳಿಗೆ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಜನ ಸಾಮಾನ್ಯರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಗುರಿಯಿಂದ ಆರಂಭಿಸಲಾದ ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡುತ್ತಿರುವುದು ಹ? ತಂದಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ವೈದ್ಯರ ಸೇವಾಮನೋಭಾವ ಮತ್ತು ಕಾರ್ಯತತ್ಪರತೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಬೆಂಗಳೂರಿಗೆ ಹೋಗಬೇಕಾಗಿಲ್ಲ: ತುಮಕೂರು ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನಸಮುದಾಯ ಅಂತಾರಾಷ್ಟ್ರೀಯ ಗುಣಮಟ್ಟದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನಂತ ದೂರದ ನಗರಗಳಿಗೆ ಪ್ರಯಾಣ ಮಾಡಬೇಕಾದ ಅಗತ್ಯವಿಲ್ಲ. ದಕ್ಷತೆ ಹಾಗೂ ಕೈಗೆಟಕುವ ವೆಚ್ಚದ ಮೂಲಕ ಆಧುನಿಕ ಹಾಗೂ ಸೂಕ್ಷ ಚಿಕಿತ್ಸಾ ವಿಧಾನದ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿಯೇ ಕಲ್ಪಿಸಲಾಗಿದೆ. ಈ ಕೇಂದ್ರವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ಆಧುನಿಕ ಸೌಕರ್ಯಗಳನ್ನು ಬಡ ಜನರಿಗೆ ತಲುಪಿಸುವ ಸಂಕಲ್ಪ ಮಾಡಲಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರ ಆಶಯ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಹೃದಯ ಚಿಕಿತ್ಸಾ ಕೇಂದ್ರ ಇರಲಿಲ್ಲ ಅಂತಹ ಸಂದರ್ಭದಲ್ಲಿ ಅವರನ್ನು ಸಂಪರ್ಕ ಮಾಡಿ ಹಾರ್ಟ್ ಸೆಂಟರ್ ಮಾಡಬೇಕು ಎಂದಾಗ ಒಪ್ಪಿ, ಹಾರ್ಟ್ ಸೆಂಟರ್ ಪ್ರಾರಂಭ ಮಾಡಿ, ಮೇಲ್ದರ್ಜೆಗೆ ಕೊಂಡ್ಯೊಯಲಾಗುತ್ತಿದೆ. ಜರ್ಮನಿ, ಆಸ್ಟ್ರೀಯಾ, ಕೊಲಂಬೊ ಹಾಗೂ ಕೆಲವು ಕಡೆಯಲ್ಲಿ ಆಗುವ ಈ ಚಿಕಿತ್ಸೆ ನಗರದ ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ನಡೆಸಲಾಗಿದೆ.
ಹಾರ್ಟ್ ಸೆಂಟರ್‌ನಲ್ಲಿ ಈವರೆಗೂ ಸುಮಾರು 50ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆ, 100ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಅಂಜಿಯೋಗ್ರಾಮ್ ಸೇರಿದಂತೆ ಇದುವರೆಗೂ ಸುಮಾರು 5000 ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸಿದ್ಧಾರ್ಥ ಹಾರ್ಟ್ ಸೆಂಟರ್. ಸೂಪರ್ ಸ್ಪೆ?ಲಿಟಿ ಆಸ್ಪತ್ರೆಯಾಗಿದ್ದು, 24 ಗಂಟೆಗಳ ತುರ್ತುನಿಗಾ ಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿಟಿ ಸ್ಕ್ಯಾನರ್, ಎಂ.ಆರ್.ಐ ಸ್ಕಾ??ನರ್ ಸೌಲಭ್ಯ ಒಳಗೊಂಡಿದೆ. ಪೂರ್ಣ ಪ್ರಮಾಣದ ರೋಗಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಶಾಶ್ವತ ಪೇಸ್ಮೇಕರ್ ಅಳವಡಿಕೆ, ವಾಲ್‌ವ್ಲೋಪ್ಲಾಸ್ಟಿ ಸೌಲಭ್ಯವೂ ಲಭ್ಯವಿದೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.
ತುಮಕೂರಿನಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದೇ ಹಾರ್ಟ್ ಸೆಂಟರ್ ಇಲ್ಲದೆ ಇರುವುದು ಬೇಸರ ಸಂಗತಿಯಾಗಿತ್ತು. ಆದರೆ ಕಳೆದ ಒಂದು ವ?ದಿಂದ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತ ಜನಸಾಮಾನ್ಯರಿಗೆ ಹಾರ್ಟ್ ಸೆಂಟರ್ ತೆರೆದು ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವುದಕ್ಕೆ ರೋಗಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಆಸ್ಪತ್ರೆಯ ನಿರ್ಮಾಣಕ್ಕೆ ಸಾರ್ಥಕತೆ ಬಂದಂತಾಗಿದೆ ಎಂದು ಅವರು ನುಡಿದರು.
ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳ ಸೇವೆ ಆಸ್ಪತ್ರೆಯಲ್ಲಿ ದೊರೆಯಲಿದೆ. ವಿಮಾ ಯೋಜನೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಇದನ್ಮ್ನ ಜನಸಾಮಾನ್ಯರು ಬಳಸಿಕೊಳ್ಳಬಹುದು ಎಂದು ಡಾ.ಜಿ.ಪರಮೇಶ್ವರ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಪಿ.ಕೆ.ಡಾ.ದೇವದಾಸ್ ಮತ್ತು ಪ್ರಾಂಶುಪಾಲರಾದ ಡಾ. ಮಹಾಪಾತ್ರ, ಹಾರ್ಟ್ ಸೆಂಟರ್ ಸಿಇಓ ಡಾ.ಪ್ರಭಾಕರ್ ಭಾಗವಹಿಸಿದ್ದರು.