ಗಡಿ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯ ಒದಗಿಸುವಂತೆ ಜನರ ಆಗ್ರಹ

ದಿನಾಂಕ 19/3/22 ರಂದು ಪಾವಗಡ ತಾಲೂಕಿನ ಪಳವಳ್ಳಿ ಕೆರೆಯ ಕಟ್ಟೆಯ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ 8 ಮಂದಿ ಸಾವನಪ್ಪಿರುತ್ತಾರೆ, ಮತ್ತು 40ಕ್ಕು ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿ ರುತ್ತವೆ .ಆದರೆ ಸರ್ಕಾರ ಸತ್ತಿರುವವರಿಗೆ 5 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ಮಾತ್ರ ಕೊಡುವುದಾಗಿ ಘೋಷಿಸಿರುವುದು ಖಂಡನೀಯ ಮತ್ತು ಇನ್ನೂ ಕೆಲ ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಸರ್ಕಾರದಿಂದ ಕೊಟ್ಟ ಟೊಳ್ಳು_ಬರವಸೆಗೆ ಸರಿಯಾದ ಚಿಕಿತ್ಸೆ ದೊರಕದೆ ಮಹೇಂದ್ರ ಎಂಬುವ ವಿದ್ಯಾರ್ಥಿ ಸಾವನ್ನಪ್ಪಿದ್ದು,ಇನ್ನೂ ಮುಂದೆ ಈಗೆ ನಡೆಯದೆ ಗಾಯಾಳುಗಳಿಗೆ ಸೂಕ್ತ ಉಚಿತ ಚಿಕಿತ್ಸೆ ಸಿಗುವಂತೆ ಕ್ರಮ ಜರುಗಿಸಬೇಕು ಮತ್ತು ಖಾಸಗೀ ಆಸ್ಪತ್ರೆಯಲ್ಲಿ ಆಗಿರುವ ಖರ್ಚನ್ನು ಸರ್ಕಾರವೇ ಬರಿಸಬೇಕು ಮತ್ತು ಖಾಸಗೀ ಬಸ್ ಮಾಲಿಕನನ್ನು ಮತ್ತು ಚಾಲಕನನ್ನು ಕೂಡಲೇ ಬಂದಿಸಬೇಕು.
ಸತ್ತಿರುವ ವ್ಯಕ್ತಿಗಳಿಗೆ 20 ಲಕ್ಷ ಮತ್ತು ಗಾಯಾಳುಗಳಿಗೆ 15 ಲಕ್ಷ ಮತ್ತು ಅಂಗವೈಕಲ್ಯಕ್ಕೆ ಒಳಗಾದವರಿಗೆ ಮಾಸಾಷಣ ಕೊಡಬೇಕಾ ಕೋರುತ್ತಿದ್ದೇವೆ. ಮತ್ತು ಪಾವಗಡ ತಾಲೂಕಿನ ಗಡಿ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯ ಒದಗಿಸಬೇಕು, RTO,ಮತ್ತು ನಾಲ್ಕು ಠಾಣೆಗಳ SUB-INSPECTER,ಮತ್ತು Circle-Inspecter ರವರನ್ನು ತಹಶಿಲ್ದಾರರು ಈ ಕೂಡಲೇ ಸಭೆ ಕರೆದು ಒವರ್ ಲೋಡ್ ಹಾಕುವ ಎಲ್ಲಾ ವಾಹನಗಳನ್ನು ಶಿಕ್ಷೆಗೆ ಒಳಪಡಿಸಬೇಕು fitness ಇಲ್ಲದ ವಾಹನಗಳಿಗೆ RTO , FC ಮಾಡದಂತೆ ಕ್ರಮ ವಹಿಸಬೇಕು ಮುಂದೆ ಯಾವುದೇ ಅಪಘಾತ ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು, ಮರಣ ಹೊಂದಿದರುವ 8 ಜನರ ಪ್ರತಿ ಕುಟುಂಬಕ್ಕೂ DC ಮತ್ತು AC ರವರು ಭೇಟಿನೀಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ.


ಈ ವಿಷಯವನ್ನು ಕೋರಿ ಪಾವಗಡ ತಾಲ್ಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ, ಪ್ರತಿಭಟನೆಯಲ್ಲಿ ಅಧ್ಯಕ್ಷರು, ಜಿ.ನರಸಿಂಹ ರೆಡ್ಡಿ,ಉಪಾಧ್ಯಕ್ಷ ಬಡನ್ನ, ಕಾರ್ಯದರ್ಶಿ ಕೊಂಡನ್ನ ಮತ್ತು ಸದಸ್ಯರಾದ ಕೃಷ್ಣಾರೆಡ್ಡಿ,ಶ್ರೀನಿವಾಸ ರೆಡ್ಡಿ, ಸತ್ಯನಾರಾಯಣ, ಡಿ.ಗೋವಿಂದಪ್ಪ,ಕೆ.ಎಚ್.ನಾರಾಯಣ ರೆಡ್ಡಿ, ಪಾರೇಷಪ್ಪ,ನಾರಾಯಣ, ಬಿ.ಕೆ.ಮಧು,ಓಬಳೇಶಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!