ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ವಾಸಿಗಳಾದ ಶ್ರೀ ಎಂ.ಎ.ವಿಶ್ವನಾಥ್ ಶೆಟ್ಟಿ ಹಾಗೂ ಶ್ರೀಮತಿ ಎಂ.ವಿ.ಶೇಷಮಾಂಬ ದಂಪತಿಗಳ ಪುತ್ರರಾದ ಎಂ.ವಿ.ಅಜಯ್ ಕುಮಾರ್ ರವರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಪಿಹೆಚ್.ಡಿ ಸಂಶೋಧನಾ ಅಧ್ಯಯನದ ಮೂಲಕ ಕರ್ನಾಟಕದ ನೀರಿನ ಹಂಚಿಕೆಯ ಆಡಳಿತಾತ್ಮಕ ಕಾರ್ಯವಿಧಾನ: ತುಮಕೂರು ಜಿಲ್ಲೆಯ ಒಂದು ಅಧ್ಯಯನ ಎಂಬ ಮಹಾಪ್ರಬಂಧವನ್ನು ಸಲ್ಲಿಸಿದ್ದು, ತುಮಕೂರು ವಿಶ್ವವಿದ್ಯಾನಿಲಯವು ಇವರಿಗೆ ಪಿಹೆಚ್.ಡಿ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದೆ. ಇವರು ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಉದ್ದಗಟ್ಟಿ ವೆಂಕಟೇಶರವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ನಿರ್ವಹಿಸಿದ್ದಾರೆ.
ತುಮಕೂರು ಜಿಲ್ಲೆಯ ನೀರಿನ ಸಮಸ್ಯೆಗೆ ಸರ್ಕಾರ ಮತ್ತು ಆಡಳಿತವು ಕೈಗೊಳ್ಳಬಹುದಾದ ಅನುಷ್ಠಾನ ಸಾಧ್ಯವಾಗುವ ಪರಿಹಾರ ಕ್ರಮಗಳನ್ನು ಹಾಗೂ ಪಾವಗಡ ತಾಲ್ಲೂಕಿನ ಕುಡಿಯುವ ಹಾಗೂ ಫ್ಲೋರೈಡ್ ನೀರಿನ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಈ ಮಹಾಪ್ರಬಂಧದಲ್ಲಿ ತಿಳಿಸಲಾಗಿದೆ.
ಶ್ರೀಯುತ ಎಂ.ವಿ. ಅಜಯ್ ಕುಮಾರ್ ರವರು ಪ್ರಸ್ತುತ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊರಟಗೆರೆ ಶಾಖೆಯ ನಿರ್ದೇಶಕರಾಗಿ, ತುಮಕೂರು ಜಿಲ್ಲಾ ಪದವಿಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಸಂಘ-ಸಂಸ್ಥೆಗಳಲ್ಲಿ ಸದಾ ಸಮಾಜಪರ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.