ತುಮಕೂರು: ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಆಸ್ಪತ್ರೆ ವೈದ್ಯರ ತಂಡ ’ನಮ್ಮ ನಡೆ ಆರೋಗ್ಯದ ಕಡೆ’ ಆಂದೋಲವನ್ನು ಇಂದು ಗುಬ್ಬಿ ತಾಲ್ಲೂಕಿನ ಬಂಡಿಹಳಿಯಲ್ಲಿ ಆರಂಭಿಸಿತು.
ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಬಂಡಿಹಳಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದರಾಮೇಗೌಡ ಉದ್ಘಾಟಿಸಿದರು.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಅವರ ಸೂಚನೆಯ ಮೇರೆಗೆ ಬಂಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ ಸ್ತ್ರೀ ಹಾಗೂ ಪ್ರಸೂತಿ, ಕೀಲು ಮತ್ತು ಮೂಳೆ ರೋಗ, ಮಕ್ಕಳ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ಪರೀಕ್ಷೆ ಸೇರಿದಂತೆ ಸಾಮಾನ್ಯ ರೋಗಗಳ ತಪಾಸಣೆ ನೆಡಸಿ, ಔಷಧಿಗಳ ವಿತರಣೆ ಮತ್ತು ವೈದ್ಯಕೀಯ ಪರಿಹಾರ ಸೂಚಿಸಲಾಯಿತು. ಶಿಬಿರದಲ್ಲಿ ೧೦ ತಜ್ಞ ವೈದ್ಯರ ತಂಡ ಭಾಗವಹಿಸಿ ತಪಾಸಣೆ ಮತ್ತು ಚಿಕಿತ್ಸೆ ನೀಡಿತು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಬಂಡಿಹಳ್ಳಿ ಗ್ರಾಮ ಪಂಚಾಯಿತಿಯ ಸಂಯುಕ್ತಶ್ರಾಯದಲ್ಲಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ ೧೬೦ ಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಲಾಯಿತು.