ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಜನಿಸಿದ ಸಂತ ರವಿದಾಸರು ಮತ್ತು ಬಂಜಾರರ ಜನಾಂಗದಲ್ಲಿ ಜನಿಸಿದ ಸಂತ ಸೇವಾಭಾಯ ಸೇವಲಾಲ್‌ರವರುಗಳು ಆಧ್ಯಾತ್ಮಿಕ ಪುರುಷರಾಗಿ, ಸಮಾಜಿಕ ಸಮಾನತೆಗಾಗಿ ಹೋರಾಟವನ್ನು ಹಲವಾರು ಶತಮಾನಗಳ ಹಿಂದೇ ಮಾಡುವುದರೊಂದಿಗೆ ದೈವಿ ಪುರುಷರಾಗಿ, ಸಮಾಜದಲ್ಲಿ ಸಮಾನತೆ ಮತ್ತು ಜಾತಿ ಪದ್ದತಿಯ ನಿರ್ಮೂಲನೆಗೆ ಸ್ಪೂರ್ತಿಯಾಗಿದವರು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಓಂಕಾರ್‌ರವರು ಹೇಳಿದ್ದಾರೆ.
ಇವರು ಇಂದು ಬಿಜೆಪಿ ತುಮಕುರು ಜಿಲ್ಲಾ ಕಛೇರಿಯಲ್ಲಿ ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದಿಂದ ಸಂತ ರವಿದಾಸರ ೬೪೪ನೇ ಜಯಂತಿ ಮತ್ತು ಸಂತ ಸೇವಾಭಾಯ ಸೇವಾಲಾಲ್ ಮಹಾರಾಜ್‌ರವರ ೨೮೩ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಓಂಕಾರ್, ಸಂತ ರವಿದಾಸರು ದೈವೀ ಪುರುಷರಾಗಿ ತಮ್ಮ ಭಕ್ತಿಯಿಂದಲೇ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದು ಜಾತಿ ವ್ಯವಸ್ಥೆ, ಶೋಷಣೆ ಮತ್ತು ದಲಿತರ ಸಮಸ್ಯೆಗಳ ಬಗ್ಗೆ ಬರಹಗಳ ಮೂಲಕ ಅರಿವು ಮೂಡಿಸಿ, ಮಾನವೀಯ ಮೌಲ್ಯಗಳನ್ನು ತಿಳಿಸಿ ದಲಿತ ಸಮಾಜವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ, ನೆರೆಹೊರೆಯವರನ್ನು ಯಾವಾಗಲೂ ಪ್ರೀತಿಸುವ ಬಗ್ಗೆ ಕಲಿಸಿದವರು ಎಂದರು.
ಇದೇ ರೀತಿ ಸಂತ ಶ್ರೀ ಸೇವಾಲಾಲ್ ಮಹಾರಾಜ್‌ರವರು ಬಂಜಾರ ಸಮುದಾದವರು ಅಜ್ಞಾನ- ಅಂಧಕಾರಗಳಿಂದ ದೂರ ಇರುವಂತೆ ಬೋಧಿಸುತ್ತಾ, ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೊಳಿಸುವ ನಿಟ್ಟಿನಲ್ಲಿ ತಮ್ಮ ಬೋದನೆಗಳನ್ನು ನಡೆಸಿ, ಸಮಾಜದಲ್ಲಿ ಸಹೋದರತ್ವದ ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದವರು ಎಂದು ಓಂಕಾರ್ ಬಣ್ಣಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಎಸ್.ಸಿ.ಮೋರ್ಚಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾ ಕಾರ್ಯದರ್ಶಿ ಸುಶೀಲ್, ಯೋಗೀಶ್, ನವೀನ್, ಶಿವರಾಜ್, ಮದನ್‌ಸಿಂಗ್ ಹಾಗೂ ಅನೇಕರು ಉಪಸ್ಥಿತರಿದ್ದರು.