ಮೇಷ ರಾಶಿ: ಈ ದಿನವು ಮಿಶ್ರ ಫಲಿತಾಂಶಗಳೊಂದಿಗೆ ನಡೆಯುತ್ತದೆ. ಅನಿರೀಕ್ಷಿತ ಖರ್ಚು ಬರಲಿದೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿದೆ. ಪ್ರಯಾಣ ಅಪಾಯಕಾರಿ.
ವೃಷಭ ರಾಶಿ: ಮಕ್ಕಳ ವಿಷಯದಲ್ಲಿ ಅತಿಯಾದ ಸಡಿಲಿಕೆ ಒಳ್ಳೆಯದಲ್ಲ. ಸಂಗಾತಿಯ ಜೊತೆ ವಾಗ್ವಾದಗಳು ಮನಸ್ಸಿಗೆ ಕಸಿವಿಸಿ ಉಂಟು ಮಾಡಲಿವೆ. ಪ್ರೇಮಿಗಳಿಗೆ ವಿರಸದ ದಿನ.
ಮಿಥುನ: ಪ್ರತಿಕೂಲ ವಾತಾವರಣವಿದೆ. ಸಾಲ ಬಾದೆ. ಕುಟುಂಬದಲ್ಲಿ ಕಿರಿಕಿರಿಗಳು. ಸಮಸ್ಯೆಗಳಿಗೆ ಹೆದರದೆ ಧೈರ್ಯ ತೋರುವ ಸಮಯವಿದು. ಕಾರ್ಯಗಳು ಮುಂದೂಡಲ್ಪಡುತ್ತವೆ.
ಕಟಕ ರಾಶಿ: ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುವಂತಹ ದಿನಗಳು ಸನ್ನಿಹಿತವಾಗಲಿದೆ. ಹೀಗಾಗಿ ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿ. ಕುಟುಂಬದಲ್ಲಿ ಸಂಭ್ರಮವಿರಲಿದೆ.
ಸಿಂಹ ರಾಶಿ: ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಸಾಲ ತೀರುತ್ತದೆ. ಆದಾಯ ಹೆಚ್ಚಲಿದೆ. ಕುಟುಂಬದಲ್ಲಿ ಸೌಹಾರ್ದತೆ ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ.
ಕನ್ಯಾ ರಾಶಿ: ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರುತ್ತದೆ. ಹಠಾತ್ ಲಾಭ ಬರುತ್ತದೆ. ಕುಟುಂಬದಲ್ಲಿ ಮತ್ತು ಸಮುದಾಯದಲ್ಲಿ ಗೌರವಯುತ ನಡವಳಿಕೆಗಳು ಬೆಳೆಯುತ್ತವೆ.
ತುಲಾ ರಾಶಿ: ಸಂಘರ್ಷಗಳನ್ನು ತಪ್ಪಿಸಿ. ತಾಳ್ಮೆಯಿಂದ ಕೆಲಸ ಮಾಡುವುದು ಒಳ್ಳೆಯದು. ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡ ಹೆಚ್ಚುತ್ತದೆ.
ವೃಶ್ಚಿಕ ರಾಶಿ: ಅನಿರೀಕ್ಷಿತ ಖರ್ಚು ಬರಲಿದೆ. ಆಕಸ್ಮಿಕ ಪ್ರಯಾಣ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಸ್ಯೆಗಳು ಮತ್ತು ಘರ್ಷಣೆಗಳು ಉಂಟಾಗಬಹುದು. ವ್ಯಾಪಾರಗಳು ಸಾಮಾನ್ಯ.
ಧನು ರಾಶಿ : ಹಣಕಾಸಿನ ತೊಂದರೆಗಳು. ಅನಾರೋಗ್ಯದ ಸೂಚನೆ ಕಾಣಿಸಿಕೊಳ್ಳುತ್ತದೆ. ಮೇಲಧಿಕಾರಿಗಳಿಂದ ತೊಂದರೆ ಉಂಟಾಗುತ್ತದೆ. ಸಂಬಂಧಿಕರ ಮೂಲಕ ಸಮಸ್ಯೆಗಳು ಬರಬಹುದು.
ಮಕರ ರಾಶಿ: ಸಮಸ್ಯೆಗಳು ಕಾಡುತ್ತವೆ. ತಾಳ್ಮೆ, ತಾಳ್ಮೆ ಬೇಕು, ಆಧ್ಯಾತ್ಮಿಕ ಚಿಂತನೆ ಬೆಳೆಯುತ್ತದೆ. ಕುಟುಂಬದಲ್ಲಿ ಏಕತೆಯ ಕೊರತೆ. ಅನಗತ್ಯ ಚಿಂತೆ.
ಕುಂಭ ರಾಶಿ: ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭೂರಿ ಭೋಜನ ಸೇವಿಸುವ ಸಾಧ್ಯತೆ ಇದೆ. ಹೊಸ ವಸ್ತುಗಳನ್ನು ಕೊಳ್ಳುವಿರಿ. ಸಂಗಾತಿಯೊಂದಿಗೆ ಸಂತೋಷದಲ್ಲಿ ದಿನ ಕಳೆಯುವಿರಿ.
ಮೀನ ರಾಶಿ: ಮನರಂಜನೆಗಾಗಿ ಹೆಚ್ಚು ಖರ್ಚು ಮಾಡುವಿರಿ. ನಿದ್ರಾಹೀನತೆ ಕಾಡಬಹುದು. ಆಡಿದ ಮಾತಿಗೆ ತಪ್ಪದಿರಿ. ಹಣಕಾಸಿನಲ್ಲಿ ತೀವ್ರ ಅಡಚಣೆ. ಆಸ್ತಿ ವಿಷಯಗಳಲ್ಲಿ ನೀವು ಸ್ವಲ್ಪ ಗಮನ ಹರಿಸಬೇಕು.