ಕೃಷಿಗೆ ದೊಡ್ಡಸವಾಲಾಗಿರೋದು ವಾಯುಗುಣ ವೈಪರೀತ್ಯ

ತುಮಕೂರು ಗ್ರಾಮಾಂತರ ಪ್ರದೇಶ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ವ್ಯಾಪ್ತಿಯ ದೊಡ್ಡಹೊಸೂರು ಬಳಿಯಿರುವ ಸಹಜ ಬೇಸಾಯ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಕನಿಷ್ಠ ಬೆಂಬಲಬೆಲೆ ಕುರಿತ ಚರ್ಚಾಂಶಗಳು ಮತ್ತು ಕಾಳಜಿ ವಿಚಾರಗೋಷ್ಠಿಯಲ್ಲಿ ಅವರು ಅಭಿಮತ ವ್ಯಕ್ತಪಡಿಸಿದರು.
ಆದರೆ ಪಿ. ಸಾಯಿನಾಥ್ ವರದಿ ಪ್ರಕಾರ ಪ್ರತಿದಿನ 20,000 ಜನರು ಬೇಸಾಯದಿಂದ ಹೊರಗುಳಿಯುತ್ತಿರುವುದು ಬೆಳಕಿಗೆ ಬಂದಿದೆ.
160 ವರ್ಷಗಳಿಂದಲೂ ನದಿ ಜೋಡಣೆ ಪರಿಕಲ್ಪನೆ ಇದೆ. ಇಷ್ಟು ವರ್ಷ ಕಳೆದರು ಇನ್ನೂ ಅಂತದ್ದೊಂದು ಕೆಲಸ ಯಶಸ್ವಿಯಾಗಿಲ್ಲ. ಒಂದು ವೇಳೆ ಸಾಧಿಸಿದರು ಅಲ್ಲಿಂದ ನೀರು ಬರುವ ಪರಿಸ್ಥಿತಿ ಇಂದಿಲ್ಲ ಎಂದರು.ಈ ಹಿಂದೆ ಅಮೇರಿಕಾದ ಎಲ್ಲಾ ಹಣೆಕಟ್ಟುಗಳನ್ನು ಹೊಡೆದುಹಾಕಲಾಗಿದೆ, ಅವೆಲ್ಲ ಜನರ ಬಹುಕಾಲದ ಒಳಿತಿಗೆ ಪೂರಕವಾಗಿರಲಾರವು. ಚೀನಾದ ಬುಡಕಟ್ಟು ಸಮುದಾಯವೊಂದು 30 ವರ್ಷದ ಹಿಂದೆ ನೀರು, ನೆಲ, ಗೊಬ್ಬರ ಪಡೆದು ಸರ್ಕಾರ ಸೂಚಿಸಿದ ಬೆಳೆಬೆಳೆದು, ಸರ್ಕಾರಕ್ಕೆ ಮಾರಾಟಮಾಡಿ ಸುಸ್ಥಿರವಾಗಿ ಕೃಷಿ ಸಾಧಿಸಿದ ಉದಾಹಣೆಯಿಂದ ಸ್ಪೂರ್ತಿಗೊಳ್ಳದೇ ಹೋದರೇ ಇಡೀ ವಿಶ್ವಕ್ಕೆ ಬೆಳೆದುಕೊಡುವ ಸಂಪನ್ಮೂಲಗಳಿದ್ದೂ ಸಹ ನಾವು ಸೋಲುತ್ತೇವೆ ಎಂದರು. ಈಗಾಗಲೇ 35,000 ಕೋಟಿ ಕೃಷಿ ಉತ್ಪನ್ನಗಳಿವೆ ಆದರೇ ಕನಿಷ್ಟ ಬೆಂಬಲ ಬೆಲೆಗೆ ಕೇವಲ 25 ಲಕ್ಷಗಳಷ್ಟೇ ಒಳಗೊಂಡಿದೆ. ಇದು ನಿಲ್ಲಬಹುದು, ನಂಬಿ ಬದುಕುವ ಇನ್ನುಳಿದ ಸಣ್ಣ ಇಡುವಳಿದಾರರು ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದ್ದಾರೆ ಎಂದರು.


“ಕನಿಷ್ಠ ಬೆಂಬಲ ಬೆಲೆ ಎನ್ನುವುದು ಕೇವಲ ಚರ್ಚೆಗೆ ಸೀಮಿತವಾಗಬಾರದು. ಸಮಿತಿ ರಚಿಸುವುದಾಗಿ ಆಶ್ವಾಸನೆ ನೀಡಿದ ಕೇಂದ್ರ ಸರ್ಕಾರ ವಚನ ಭ್ರಷ್ಟವಾಗಿದೆ. ಪೌಷ್ಠಿಕ ಆಹಾರ ಹಿತದೃಷ್ಟಿಯಿಂದ ಕನಿಷ್ಟ ಬೆಂಬಲ ಬೆಲೆ ಸಮಗ್ರವಾಗಬೇಕು ಎಂದು ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ತಿಳಿಸಿದರು. ವೀಡಿಯೋ ಸಂವಾದದಲ್ಲಿ ಮಾತನಾಡಿದ ಪರಿಸರ ಹೋರಾಟಗಾರ್ತಿ ಡಾ. ವಂದನಾಶಿವ ಮಾತನಾಡಿ, ಜೀವ ಪರಿಸರಾತ್ಮಕ ಕೃಷಿ ಅಳವಡಿಸಬೇಕು ಆಗ ಸುಸ್ಥಿರತೆ, ಸಮಾನತೆ ಸಾಧ್ಯವಾಗುತ್ತದೆ ಎಂದರು. ವೀಡಿಯೋ ಸಂವಾದದೊಂದಿಗೆ ಜನ ವಿಜ್ಞಾನ ಚಳುವಳಿಯ ವಕ್ತಾರ ದಿನೇಶ್ ಅಬ್ರಾಲ್ ಮಾತನಾಡಿ ‘ಸ್ಥಳೀಯ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾಗಿದೆ, ಈಗಾಗಲೇ ರೈತರು ಸರಣಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರೈತರು ಉಳಿಯಲು, ಜೀವಸಂಕುಲ ಉಳಿಯಲು ಮಣ್ಣು, ನೀರು ಉಳಿಯಬೇಕಿದೆ, ಆಗ ಮಾತ್ರ ಜೀವಪರಿಸರ, ಮಣ್ಣಿನ ಆರೋಗ್ಯ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ವೈವಿಧ್ಯತೆ ಉಳಿವಿಗೆ ದೊಡ್ಡ ತೊಡಕಾಗಿರುವುದು ರಾಫಾಯನಿಕ ಔಷಧಗಳು ಅದರ ಬಗ್ಗೆ ಬದಲಾವಣೆಯ ನೋಟ ಬೀರಬೇಕಾಗಿದೆ ಎಂದರು.
ರಾಷ್ಟ್ರೀಯ ಕಿಸಾನ್ ಮಹಾ ಸಂಘದ ಕೆ.ವಿ. ಬಿಜೂ ಅವರು ರೈತ ಹೋರಾಟ ಅದರ ಹಿನ್ನೆಲೆ ಮುನ್ನೆಯ ಜೊತೆಗೆ ಬೆಂಬಲ ಬೆಲೆಯ ಅಗತ್ಯ ಆಯಾಮಗಳ ಬಗ್ಗೇ ತಿಳಿಸಿದರು.


ಸಹಜ ಬೇಸಾಯ ಶಾಲೆಯ ಭೂ ವಿಜ್ಞಾನಿ ಡಾ. ಮಂಜುನಾಥ್ ಮಾತನಾಡಿ, ” ಕರ್ನಾಟಕದಲ್ಲಿ ಶೇ. 36% ಭೂಮಿ ಮರುಭೂಮೀಕರಣವಾಗುತ್ತಿದೆ. ಶೇ. 60-70ರಷ್ಟು ಬೇಸಾಯ ಮಳೆಯಾಶ್ರಿತ ಬೇಸಾಯವಾಗಿದೆ. ಶೇ.76% ಭಾರತದ ಹಳ್ಳಿಗಳಲ್ಲಿ ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ ಎಂದರು. ಮಳೆಯಾಶ್ರಿತ ಬೆಳೆ ಮತ್ತು ವಾಣಿಜ್ಯ ಬೆಳೆಗಳ ನಡುವಿನ ಪೌಪೋಟಿಯಲ್ಲಿ ಆರೋಗ್ಯ ಗೌಣವಾಗುತ್ತಿರುವುದಲ್ಲದೆ, ನೀರು, ನೆಲ, ಪರಿಸರದ ಪ್ರಜ್ಞೆ ಮರೆಯಾಗುತ್ತಿದೆ ಎಂದರು.

ಸಹಜ ಬೇಸಾಯ ಶಾಲೆಯ ಮಾರ್ಗದರ್ಶಕ ಸಿ.ಯತಿರಾಜು ಅವರು ಮಾತನಾಡಿ, ಭೂಮಿಯ ಆರೋಗ್ಯ ಕೆಡುತ್ತಿದೆ, ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ, ಮರುಭೂಮೀಕರಣ ದೊಡ್ಡ ತಲೆನೋವಾಗಿದೆ. ಇದರ ನಡುವೆ ದೇಸಿ ತಳಿಗಳು ಕಾಣೆಯಾಗುತ್ತಲಿವೆ, ಕುಗ್ರಾಮಗಳಲ್ಲಿ ಗಿರಿಜನರ ಹಾಡಿಗಳಲ್ಲಿ ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಿಸಾನ್ ಮಹಾಸಂಘದ ಪಿ.ಟಿ. ಜಾನ್, ಪುನರ್ಚಿತ್ ನ ಡಾ. ವಾಸವಿ ಸೇರಿದಂತೆ ಬಡಗಲಪುರ ನಾಗೇಂದ್ರ, ತೇಜಸ್ವಿ ಪಾಟೀಲ್ ಸೇರಿದಂತೆ ರೈತ ಸಂಘಟನೆಗಳು, ಸ್ಥಳೀಯ ರೈತ ಪಾರತಿನಿಧಿಗಳು, ಪರಿಸರ ಚಿಂತಕರು, ಸಹಜಬೇಸಾಯ ಶಾಲೆಯ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!