ತುಮಕೂರು:ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೆಳೇಹಳ್ಳಿಯ ಶ್ರೀ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಫೆಬ್ರವರಿ 10ರ ಗುರುವಾರ ಸಂಜೆ 6 ಗಂಟೆಗೆ ಗ್ರಾಮೀಣ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ನಡೆಯುವ ಗ್ರಾಮೀಣ ನಾಟಕೋತ್ಸವದಲ್ಲಿ ಡಾ.ರಾಜಪ್ಪ ದಳವಾಯಿ ರಚಿಸಿರುವ ಕರ್ಣಕುಲಂ ನಾಟಕ ಕಾಂತರಾಜು ಕೌತುಮಾರನಹಳ್ಳಿ ಅವರ ನಿರ್ದೇಶಕನದಲ್ಲಿ, ಹಾಗೆಯೇ ಡಾ.ಗಿರೀಶ್ ಕರ್ನಾಡ್ ಅವರು ರಚಿಸಿರುವ ಮಾ ನಿಷಾದ ನಾಟಕ ಅನುರಾಗ್ ಭೀಮಸಂದ್ರ ಅವರ ನಿರ್ದೇಶನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಕಲಾವಿದರಿಂದ ಪ್ರಯೋಗಗೊಳ್ಳಲಿದೆ.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಗ್ರಾಮೀಣ ನಾಟಕೋತ್ಸವವನ್ನು ನಾಟಕಕಾರರು ಹಾಗೂ ರಂಗ ನಿರ್ದೇಶಕರಾದ ಶ್ರೀ ಮೆಳೇಹಳ್ಳಿ ದೇವರಾಜು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತುಮಕೂರು ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀ ಚಿಕ್ಕಬೆಳ್ಳಾವಿ ಶಿವಕುಮಾರ್, ಸಾಹಿತಿಗಳಾದ ಮಹದೇವಯ್ಯ, ರಂಗಭೂಮಿ ಕಲಾವಿದರಾದ ಯಲ್ಲಾಪುರ ರಾಜೇಂದ್ರ, ಕೋರ ಗ್ರಾಮಪಂಚಾಯಿತಿ ಮೇಳೆಹಳ್ಳಿ ಕ್ಷೇತ್ರದ ಸದಸ್ಯರುಗಳಾದ ಟಿ.ಎಸ್.ಯದುಕುಮಾರ್,ಮಂಜುನಾಥ್.ಎಂ.ಪಿ. ಅವರುಗಳು ಭಾಗವಹಿಸಲಿದ್ದಾರೆ.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಗ್ರಾಮೀಣ ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಸರಕಾರ ವಿಧಿಸಿರುವ ಕೋವಿಡ್ ನಿಯಮಗಳ ಅನ್ವಯ ನಾಟಕೋತ್ಸವ ನಡೆಯಲಿದೆ.ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸುವಂತೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಸಂಚಾಲಕ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.