ಸಿಕೆಪಿಯಲ್ಲಿ ಬೆಂಗಳೂರು ಆರ್ಟ್ಸ್‌ ಅಂಡ್‌ ಕ್ರಾಪ್ಟ್ಸ್‌ ಮೇಳ

ಬೆಂಗಳೂರು : ನಗರದ ಚಿತ್ರಕಲಾ ಪರಿಷತ್ತಿಗೆ ಮತ್ತೆ ಬಂದಿವೆ ಬಗೆ‌ ಬಗೆಯ ಕರಕುಶಲ ವಸ್ತುಗಳು. ವೈವಿಧ್ಯಮಯ ಸೀರೆಗಳು, ಗೃಹಾಲಂಕಾರಿಕ ವಸ್ತುಗಳು, ಚಪ್ಪಲಿ, ಬ್ಯಾಗ್ ಇತ್ಯಾದಿಗಳು ಬೆಂಗಳೂರು ಆರ್ಟ್ಸ್‌ ಆಂಡ್‌ ಕ್ರಾಫ್ಟ್ಸ್‌ ಮೇಳದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ನಟಿಯರು ಮತ್ತು ರೂಪದರ್ಶಿಗಳಾದ ಚಂದನಾ ರಾಘವೇಂದ್ರ ಹಾಗೂ ಅಶ್ವಿನಿ ಅವರು ಶುಕ್ರವಾರ ಮೇಳಕ್ಕೆ ಚಾಲನೆ ನೀಡಿದರು.

ಚಂದನಾ ರಾಘವೇಂದ್ರ ಮಾತನಾಡಿ, ಬೆಂಗಳೂರು ಆರ್ಟ್ ಆಂಡ್ ಕ್ರಾಫ್ಟ್ ಮೇಳದಲ್ಲಿ ನಾನಾ ರೀತಿಯ ಗೃಹಾಲಂಕಾರಿಕ ವಸ್ತುಗಳು, ಕೃತಕ ಆಭರಣಗಳು, ಬೆಡ್ ಸ್ಪ್ರೆಡ್ ಗಳು ಮತ್ತಿತರ ವಸ್ತುಗಳು ಸಿಗಲಿವೆ. ಇಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಕಲಾವಿದರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ಸಿಗಲಿವೆ.
ಫೆ. 27 ರವರೆಗೆ ಮೇಳ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದರು. ಕಿರುತೆರೆ ನಟಿ ಅಶ್ವಿನಿ ಮಾತನಾಡಿ, ಮೇಳ ನೋಡಲು ತುಂಬಾ ಖುಷಿ ಆಗ್ತಿದೆ. ಬಗೆ ಬಗೆಯ ಸೀರೆಗಳು, ಆಕರ್ಷಕ ಕರಕುಶಲ ವಸ್ತುಗಳು, ಹ್ಯಾಂಡ್ ಮೇಡ್ ಜ್ಯುವೆಲ್ಲರಿಗಳು ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಖರೀದಿಸಲು ಯೋಗ್ಯವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೇಳದಲ್ಲಿ 80ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪಲಿವೆ. ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

ಸ್ಥಳ :
ಪ್ರದರ್ಶನವು ಫೆ. 27 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ನಡೆಯಲಿದೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ ಆವರಣ, ಕುಮಾರಕೃಪಾ ರಸ್ತೆ.
ಪ್ರವೇಶ ಉಚಿತ‌.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 96118 35597

Leave a Reply

Your email address will not be published. Required fields are marked *

error: Content is protected !!