ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ
ಪಾವಗಡ ತಾಲ್ಲೊಕು
ತಿಪ್ಪಗಾನಹಳ್ಳಿ ಗ್ರಾಮದಲ್ಲಿ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ
ಮಿಶ್ರ ತಳಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು
ಎಚ್ ಎಫ್ ತಳಿಯ ಕರುಗಳು ಜೆರ್ಸಿ ತಳಿ ನಾಟಿ ತಳಿ ಎಮ್ಮೆ ಕರು ಸೇರಿ ಸುಮಾರು ನವತ್ತಕ್ಕೂ ಹೆಚ್ಚು ಕರುಗಳು ಕರು ಪ್ರದರ್ಶನದಲ್ಲಿ ಭಾಗವಹಿಸಿದ್ದವು ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟ ಪಾವಗಡ ತಾಲ್ಲೊಕು ನಿರ್ದೇಶಕರಾದ ಚನ್ನಮಲ್ಲಯ್ಯ ರವರು ಮಾತನಾಡಿ ದೇಶದಲ್ಲಿ ಕೋಟ್ಯಂತರ ಕುಟುಂಬಗಳು ಹೈನುಗಾರಿಕೆ ಅವಲಂಬನೆ ಮಾಡಿಕೊಂಡು ತನ್ನ ಕುಟುಂಬ ಪೋಷಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಜೊತೆಗೆ ಸ್ವಾವಲಂಬನೆ ಬದುಕು ರೂಪಿಸಲು ಉತ್ತಮ ಅವಕಾಶ ಇದೆ ಪ್ರತಿಯೊಬ್ಬರು ಹೈನುಗಾರಿಕೆ ಅಭಿರುದ್ದಿ ಪಡಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಕರೆ ಕೊಟ್ಟರು ರಾಸುಗಳು ಅಕಾಲಿಕ ಮರಣ ಹೊಂದಿದ ರಾಸು ಮಾಲೀಕನಿಗೆ ಒಟ್ಟು ನಾಲ್ಕು ಲಕ್ಷ ವಿಮಾ ಮೊತ್ತ ವಿತರಣೆ ಮಾಡಿದರು ಕರು ಪ್ರದರ್ಶನದಲ್ಲಿ ಭಾಗವಹಿಸಿ ವಿಜೇತರಾದ ಕರು ಮಾಲೀಕರಿಗೆ ಬಹುಮಾನ ವಿತರಣೆ ನೀಡಿ ಗೌರವಿಸಲಾಯಿತು
ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ ಸಿದ್ದಗಂಗಯ್ಯ
ಮಾತನಾಡಿ ಕರುಗಳಿಗೆ ಗಿಣ್ಣು ಹಾಲು ಕುಡಿಸುವುದರಿಂದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ ಕರುಗಳಲ್ಲಿ ಜಂತು ಬಾದೆ ನಿವಾರಣೆ ಆಗುತ್ತದೆ ಕರು ಅರೋಗ್ಯ ಮತ್ತು ಪೌಷ್ಟಿಕವಾಗಿ ಬೆಳವಣಿಗೆ ಆಗುತ್ತದೆ ಜಾನುವಾರಗಳಲ್ಲಿ ಬರುವ ಕಾಯಿಲೆಗಳ ಬಗ್ಗೆ ರೈತರಿಗೆ ಹರಿವು ಮೂಡಿಸಿದರು ಕಾರ್ಯಕ್ರಮದಲ್ಲಿ ಪಶು ವೈದ್ಯೆ ಡಾ ಚೈತ್ರ ಶ್ರೀ ಹಾಲು ಒಕ್ಕೂಟ ವಿಸ್ತರಣ ಅಧಿಕಾರಿ ಸುನಿತಾ ಡಾ ಕಿಶೋರ್ ಕುಮಾರ ರೆಡ್ಡಿ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಮಂಜುಳಾ ಸುಧಾ ತಿಪ್ಪೇಸ್ವಾಮಿ ನಾಗರೆಡ್ಡಿ ನಾಗಭೂಷಣ ಜೈರಾಮ್ ನಾಗೇಶ್ ಶಿವರಾಜ್ ಶಿವಕುಮಾರ್ ಹಾಗೂ ರೈತರು ಹಾಜರಿದ್ದರು