ವಿದ್ಯೋದಯ ಕಾನೂನು ಕಾಲೇಜು ರಕ್ತನಿಧಿ ಕೇಂದ್ರ

ತುಮಕೂರು: ತುರ್ತು ಸಂದರ್ಭದಲ್ಲಿ ರಕ್ತ ಅಗತ್ಯವಿದೆ ಎಂದು ಹಳ್ಳಿಯ ಮುಗ್ಧ ಜನರು ಅಂಗಲಾಚುತ್ತಿದ್ದಾಗ ಕೆಲವೊಮ್ಮೆ ನಾವೂ ಅಸಹಾಯಕ ಪರಿಸ್ಥಿಯನ್ನು ಎದುರಿಸಬೇಕಾಗುತ್ತದೆ. ಆಗ ರಕ್ತ ನಿಧಿಯಂತೆ ಜೊತೆನಿಲ್ಲುವುದು ವಿದ್ಯೋದಯ ಕಾನೂನು ಕಾಲೇಜು ಎಂದು  ತುಮಕೂರು ಜಿಲ್ಲಾಸ್ಪತ್ರೆಯ ಆರ್.ಎಂ.ಒ ಡಾ. ವೀಣಾ ಹೇಳಿದರು.

ವಿದ್ಯೋದಯ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಪ್ರೊ. ಎಚ್.ಎಸ್ ಶೇಷಾದ್ರಿ ಅವರ 98ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ತುಮಕೂರು ಹಾಗೂ ನೆಹರು ಯುವಕೇಂದ್ರದ ಸಹಯೋದಲ್ಲಿ ನಡೆದ  ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ನೇತ್ರದಾನ, ವಿದ್ಯಾದಾನ, ಅನ್ನದಾನಗಳಂತೆ ರಕ್ತದಾನವೂ ಶ್ರೇಷ್ಠವಾಗಿದೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿ. ಅವರ ಆಶಯದಂತೆ ಯುವಜನರು ಸಮಾಜಿಕ ಜವಾಬ್ದಾರಿ ಹೊರಲು ಉತ್ಸುಕರಾಗಿರಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ. ನಾರಾಯಣಸ್ವಾಮಿ ತಿಳಿಸಿದರು.

ನೊಂದವರಿಗೆ ಸಹಕಾರ ನೀಡಬೇಕು. ಜೀವ ಉಳಿಸುವ ಕಾರ್ಯ ದೊಡ್ಡದು. ಪ್ರತಿಯೊಬ್ಬರೂ ರಕ್ತ ನೀಡುವ ಮೂಲಕ ಕಷ್ಟದಲ್ಲಿರುವವರಿಗಾಗಿ ಮಿಡಿಯುವುದು ಮಾನವೀಯ ಮೌಲ್ಯ ಎಂದರು.

ಕಾಲೇಜಿನ ಸಿಇಒ ಪ್ರೊ.ಕೆ. ಚಂದ್ರಣ್ಣ ಮಾತನಾಡಿ, ರಕ್ತ ಸಂಗ್ರಹ ಮಾಡುವುದು ಸುಲಭವಲ್ಲ. ಇಂದು ಏನನ್ನು ಬೇಕಾದರೂ ತಯಾರು ಮಾಡುಷ್ಟು ವಿಜ್ಞಾನ ಬೆಳೆದಿದೆ. ರಕ್ತಕ್ಕೆ ಪರ್ಯಾಯವಾಗಿ ಬೇರೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒಬ್ಬರ ರಕ್ತದಿಂದ ಮತ್ತೊಬ್ಬರನ್ನು ಬದುಕಿಸಲು ಸಾಧ್ಯವಿದೆ. ನಾವು ಸಮಾಜದ ಋಣ ತೀರಿಸಬೇಕೆಂಬ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಿದ್ದೇವೆ ಎಂದರು.

ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ  ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲ ಹಾಗೂ ವಿದ್ಯೋದಯ ಪ್ರತಿಷ್ಠಾನದ ಸದಸ್ಯರಾದ ಎಚ್.ಎಸ್ ರಾಜು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ವಿ. ಕಿಶೋರ್, ಪ್ರೊ. ದ್ಯಾನ ಬಸವರಾಜು ಹಾಗೂ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ಇಂದು ಹಾಗೂ ಕಾಲೇಜಿನ ಭೋದಕ ಮತ್ತು ಭೋತಕೇತರ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!