ಪೋಲೀಸ್’ಅಂದರೆ ಸಾಕು ಎಂತಹ ಮನುಷ್ಯನಿಗಾದರೂ ಒಂದು ರೀತಿಯ ಭಯ,ಆತಂಕ, ಇತ್ತೀಚಿನ ದಿನಗಳಲ್ಲಿ ಪೋಲೀಸ್ ಅಂದರೆ ಜನರಲ್ಲಿ ನಂಬಿಕೆ ಇಲ್ಲದ ಹಾಗೂ ಭ್ರಷ್ಟ ಇಲಾಖೆ ಆಗೆ ಹೀಗೆ ದುಡ್ಡು ಇದ್ದವರ ಕಡೆ ಪೋಲೀಸ್ರು ಶಾಮೀಲಾಗಿಬಿಡತಾರೆ ನ್ಯಾಯ ಸಿಗಲ್ಲ ಬಿಡ್ರಿ ಅನ್ನೋ ಮಟ್ಟಕ್ಕೆ ಜನ ಮಾತಾನಾಡುತ್ತಿದ್ದಾರೆ.ಇಂತಹ ಸನ್ನಿವೇಶದಲ್ಲೂ ನಾವು ಮಾಡುವ ಕೆಲಸ ಪ್ರಾಮಾಣಿಕತಯಿಂದ ಮಾಡಿದ್ರೆ ಜನ ಏಕೆ ನಮ್ಮ ಮೇಲೆ ಅರೋಪಗಳನ್ನಾ ಮಾಡತಾರೆ ,ನಾವು ಜನಪರ ,ಜನಸ್ನೇಹಿ,ಮತ್ತು ಶೋಷಿತರ ಪರ ನಿಂತು ನ್ಯಾಯ ಒದಗಿಸುವ ಕೆಲಸ ಮಾಡಿದರೆ ಜನರಿಗೆ ಪೋಲೀಸರ ಮೇಲೆ ಪ್ರೀತಿ ಮತ್ತು ಗೌರವ ತಾನಾಗೇ ಬರುತ್ತೆ ಎಂಬುದು ನಮ್ಮ ತುಮಕೂರು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಾಪುರ ರವರ ಮಾತು.ಹೌದು ಇದಕ್ಕೆ ತಾಜಾ ಉದಾಹರಣೆ ಎಂಬಂತೆ ದಂಡಿನಶಿವರ ಠಾಣೆಯ ಸರಹದ್ದು ಕೋಡಿಹಳ್ಳಿಯಲ್ಲಿ ನಾಗೇಂದ್ರಪ್ಪ ಮತ್ತು ಶಿವಪ್ರಕಾಶ್ ಎಂಬುವವರ ನಡುವೆ ಗಲಾಟೆ ನಡೆದಿತ್ತು.ಇದರಲ್ಲಿ ನಾಗೇಂದ್ರಪ್ಪ ಎಂಬವರ ಮೇಲೆ ಶಿವಕುಮಾರ್, ಚಂದನ್ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಇದರ ಸಂಬಂಧ ನಾಗೇಂದ್ರಪ್ಪನವರು ದಂಡಿನಶಿವರ ಠಾಣೆಗೆ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದೆ ಸಬೂಬು ಹೇಳಿ ಎಸ್.ಐ ಶಿವಲಿಂಗಯ್ಯ ದೂರುದಾರ ನಾಗೇಂದ್ರಪ್ಪನವರನ್ನು ಕಳುಹಿಸುತ್ತಿದ್ದರು .
ಇದರ ಸಂಬಂಧ ಸಾಕಷ್ಟು ಬಾರಿ ಆರೋಪಿಗಳನ್ನು ಬಂಧಿಸುವಂತೆ ಎಸ್.ಐಗೆ ನಾಗೇಂದ್ರಪ್ಪ ಮನವಿ ಮಾಡಿದ್ದಾರೆ. ಮರುದಿನ ನಾಗೇಂದ್ರಪ್ಪ ನಿಗೆ ‘ಆರೋಪಿ ಹಿಡಿಯಲು ಹೋಗೋಣ ಕಾರು ಬಾಡಿಗೆ ಮಾಡಿಕೊಂಡು ಬಾ…’ ಎಂದು ಎಸ್.ಐ ಶಿವಲಿಂಗಯ್ಯ ಹೇಳಿದ್ದಾರೆ.ಎಸ್.ಐ ಮಾತಿನಿಂದ ನೊಂದ ದೂರುದಾರ ನಾಗೇಂದ್ರಪ್ಪ ನೇರವಾಗಿ ತುಮಕೂರಿನ ಎಸ್ಪಿ ಕಛೇರಿಗೆ ಬಂದು ಎಸ್ಪಿ ರಾಹುಲ್ ಕುಮಾರ್ ರವರಿಗೆ ದೂರು ನೀಡಿದ್ದಾರೆ. ನಾಗೇಂದ್ರಪ್ಪನವರ ದೂರು ಆಲಿಸಿದ ಎಸ್ಪಿ ತಮ್ಮದೆ ಕಾರಿನಲ್ಲಿ ದೂರುದಾರರನ್ನು ದಂಡಿನಶಿವರದ ಠಾಣೆಗೆ ಕಳುಹಿಸಿದ್ದಾರೆ.ಎಸ್ಪಿ ಕಾರಿನಲ್ಲಿ ಠಾಣೆಗೆ ಬಂದ ದೂರುದಾರ ಹಾಗೂ ಮೇಲಾಧಿಕಾರಿಯ ಕಾರು ನೋಡಿ ಪೊಲೀಸರು ನಡುಗಿ ಹೋಗಿದ್ದಾರೆ. ದೂರುದಾರನನ್ನು ತಮ್ಮದೆ ಕಾರಿನಲ್ಲಿ ಕಳುಹಿಸಿಕೊಟ್ಟ ಎಸ್ಪಿ ರಾಹುಲ್ ಕುಮಾರ್ ರವರ ನಡೆಗೆ ಎಸ್‌ಐ ಶಿವಲಿಂಗಯ್ಯ ಶಾಕ್ ಆಗಿದ್ದಾರೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್‌ರವರ ಈ ವಿಭಿನ್ನ ನಡೆ ಹಾಗೂ ತಮ್ಮ ಜನಸ್ನೇಹಿ ಕಾರ್ಯವೈಖರಿಯಿಂದ ಸಾರ್ವಜನಿಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.