ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಧನಲಾಭವಿದೆ

ಮೇಷ : ವಿದೇಶ ಪ್ರಯಾಣ ಅವಕಾಶ ಸಿಗಲಿದೆ, ಉದ್ಯೋಗಿಗಳ ತೊಂದರೆಗಳು ನಿವಾರಣೆ, ದುಡಿಮೆ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಲಾಭ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ, ನೂತನ ರಾಜಕೀಯ ಸದಸ್ಯರು ಗೌರವಧನ ಪಡೆಯಲಿದ್ದಾರೆ.

ವೃಷಭ :ಕೆಲಸದ ಸ್ಥಳದಲ್ಲಿ ಹೊಸ ಸಮೀಕರಣಗಳಿಂದಾಗಿ ನೀವು ಇಡೀ ಸಮಯ ಕಾರ್ಯನಿರತರಾಗಿರುತ್ತೀರಿ. ಸ್ಥಗಿತಗೊಂಡಿರುವ ಕೆಲವು ಯೋಜನೆಗಳು ಈಗ ಪ್ರಗತಿಯಲ್ಲಿವೆ. ಸಂಬಳ ಪಡೆಯುವ ಜನರು ಬಡ್ತಿ ಪಡೆಯಬಹುದು ಮತ್ತು ಬಯಸಿದ ಸ್ಥಳಕ್ಕೆ ವರ್ಗಾವಣೆ ಕೂಡ ಸಾಧ್ಯ.

ಮಿಥುನ : ನೀವು ಯಾವುದೇ ನೇರ ಅಥವಾ ಪರೋಕ್ಷ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿದರೆ, ನಿಮ್ಮ ವೃತ್ತಿಪರ ಜೀವನವು ಭವಿಷ್ಯದಲ್ಲಿ ನಿಮಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.

ಕಟಕ : ಸಂಗಾತಿಯ ಮೇಲೆ ಅತಿಯಾದ ಅನುಮಾನವನ್ನು ತೋರಬೇಡಿ. ಇದರಿಂದ ನಿಮ್ಮ ದಾಂಪತ್ಯದಲ್ಲಿ ಬಹುದೊಡ್ಡ ಬಿರುಕು ಮೂಡಲಿದೆ. ಹಿರಿಯ ಸಹೋದರನ ಜೊತೆ ನಿಮ್ಮ ಸಂಬಂಧ ಸುಧಾರಿಸಲಿದೆ. ಸ್ನೇಹಿತರು ಬಹಳ ದಿನಗಳ ಬಳಿಕ ನಿಮ್ಮನ್ನು ಭೇಟಿಯಾಗಲಿದ್ದಾರೆ.

ಸಿಂಹ : ನಿರಂತರ ಪ್ರಯಾಣದಿಂದ ಅತಿಯಾಗಿ ದಣಿಯಲಿದ್ದೀರಿ. ಇದರಿಂದ ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸ್ತ್ರೀಯರಿಗೆ ಧನಲಾಭವಿದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ಅಡಿಕೆ ವ್ಯಾಪಾರಿಗಳಿಗೆ ಈ ದಿನ ಶುಭ ದಿನ.

ಕನ್ಯಾ : ಹಣಕಾಸು ವಿಚಾರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ನಿಮ್ಮಿಂದ ಸಾಲ ಪಡೆದವರು ಹಣ ಹಿಂದಿರುಗಿಸಲಿದ್ದಾರೆ. ಪ್ರಭಾವಿ ವ್ಯಕ್ತಿಯೊಬ್ಬರನ್ನು ನೀವಿಂದು ಭೇಟಿ ಮಾಡಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.

ತುಲಾ : ಅತ್ತೆ -ಸೊಸೆ ನಡುವಿನ ಸಂಬಂಧ ಹಳಸುವ ಸಾಧ್ಯತೆ ಇದೆ. ಹೀಗಾಗಿ ಮಾತಿನ ಮೇಲೆ ಆದಷ್ಟು ಹಿಡಿತವಿರಲಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಕ್ಕಳು ಓದಿನ ಕಡೆಗೆ ಗಮನ ನೀಡಲಿದ್ದಾರೆ. ಸ್ತ್ರೀಯರಿಗೆ ಲಾಭವಿದೆ.

ವೃಶ್ಚಿಕ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಸತ್ತೇ ಹೋಗುವ ಹಂತದಲ್ಲಿದ್ದ ನಿಮ್ಮ ಪ್ರೇಮ ಸಂಬಂಧವು ಸ್ನೇಹಿತರ ಮಧ್ಯಪ್ರವೇಶದಿಂದ ಉಳಿಯಲಿದೆ. ವಿದೇಶಿ ಸಂಬಂಧ ವ್ಯವಹಾರದಲ್ಲಿ ದೊಡ್ಡ ಮಟ್ಟಿಗಿನ ಲಾಭ ಸಾಧಿಸಲಿದ್ದೀರಿ.

ಧನು : ಭೂಮಿ ಖರೀದಿಸಬೇಕು ಎಂದುಕೊಂಡವರಿಗೆ ಈ ದಿನ ಶುಭದಾಯಕವಾಗಿ ಇರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರಲಿದ್ದೀರಿ. ಕಚೇರಿಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಲಿದೆ. ಹನುಮಾನ್​ ಚಾಲೀಸಾ ಪಠಿಸಿ.

ಮಕರ : ಈ ರಾಶಿಯ ಉದ್ಯಮಿಗಳು ಇಂದು ಅನಿರೀಕ್ಷಿತ ಮಟ್ಟದಲ್ಲಿ ಲಾಭವನ್ನು ಗಳಿಸಲಿದ್ದಾರೆ. ಸ್ವಂತ ವ್ಯವಹಾರ ಆರಂಭಿಸುವವರಿಗೆ ಇದು ಶುಭ ದಿನವಾಗಿದೆ. ತಾಯಿಯ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ಆಧ್ಯಾತ್ಮಿಕ ಕ್ಷೇತ್ರದತ್ತ ಮನಸ್ಸು ವಾಲಲಿದೆ.

ಕುಂಭ : ದಾಂಪತ್ಯ ಜೀವನದ ಬಿರುಕಿನಿಂದಾಗಿ ನೀವು ಅತಿಯಾಗಿ ನೋವನ್ನು ಅನುಭವಿಸಲಿದ್ದೀರಿ. ಮಾನಸಿಕ ಆರೋಗ್ಯ ಕೆಡಲಿದೆ. ವ್ಯಾಪಾರಸ್ಥರಿಗೆ ಈ ದಿನ ಲಾಭದಾಯಕವಾಗಿ ಇರಲಿದೆ. ತರಕಾರಿ ವ್ಯಾಪಾರಿಗಳಂತೂ ನಿರೀಕ್ಷೆಗೂ ಮೀರಿದ ಲಾಭ ಗಳಿಸುವರು.

ಮೀನ : ವಿವಾಹಿತ ಜನರು ಸಂತಾನ ಅಪೇಕ್ಷಿಸುವರು. ಕಚೇರಿಯಲ್ಲಿ ಮೇಲಾಧಿಕಾರಿ ಒತ್ತಡ. ಕುಟುಂಬದಲ್ಲಿ ಮಧ್ಯಸ್ತಿಕೆಯ ಜನರಿಂದ ಅಪಶ್ರುತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿ ಯಶಸ್ಸು ತರಲಿದೆ.

Leave a Reply

Your email address will not be published. Required fields are marked *

error: Content is protected !!