ಮೇಷ : ಆಸ್ತಿಗಾಗಿ ತಂದೆ ಜೊತೆ ಕಿರಿಕಿರಿ ಸಾಧ್ಯತೆ, ಆರೋಗ್ಯದ ಬಗ್ಗೆ ಜಾಗೃಕತೆ ಅವಶ್ಯಕ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ, ಕೆಲಸದಲ್ಲಿ ಮಾನಸಿಕ ಒತ್ತಡ, ಗುತ್ತಿಗೆದಾರರ ಮತ್ತು ರಿಯಲ್ ಎಸ್ಟೇಟ್ ಉದ್ಯಮದಾರರ ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ.
ವೃಷಭ :ಹಣಕಾಸಿನ ವಿಚಾರಕ್ಕಾಗಿ ಮನಸ್ತಾಪ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಗಾತಿಯ ಮಾರ್ಗದರ್ಶನ ಪಡೆಯಿರಿ, ಪ್ರತಿನಿಧಿಗಳಿಗೆ ಸಾರ್ವಜನಿಕ ರಂಗದಲ್ಲಿ ಪ್ರಶಂಸೆ, ಗಾಯಕರಿಗೆ ಬೇಡಿಕೆ ಸಿಗಲಿದೆ, ಉನ್ನತ ಶಿಕ್ಷಣ ಯಶಸ್ಸು, ಸರ್ಕಾರಿ ಕ್ಷೇತ್ರದ ಉದ್ಯೋಗಿಗಳಿಗೆ ಧನಲಾಭ.
ಮಿಥುನ : ನಿಮ್ಮ ಶತ್ರುಗಳು ಪೈಪೋಟಿ ಮಾಡಲಿದ್ದಾರೆ, ವ್ಯಾಪಾರದಲ್ಲಿ ನಷ್ಟ ಕಂಡುಬರಲಿದೆ, ಮಿತ್ರನ ಧನ ಸಹಾಯದಿಂದ ಮುನ್ನಡೆ ಸಾಧಿಸುವಿರಿ, ನಿವೇಶನ ಖರೀದಿಗಾಗಿ ಹಣ ಖರ್ಚು ಸಂಭವ, ನಿಮ್ಮ ಪ್ರತಿಭೆಗೆ ತಕ್ಕ ಬೆಲೆ ಸಿಗಲಿದೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.
ಕಟಕ : ಕುಟುಂಬದ ವಿಚಾರಗಳಲ್ಲಿ ಗಮನಕೊಡಿ, ಸಂಗಾತಿಯ ಜೀವನದ ಹಾದಿಯಲ್ಲಿ ಬದಲಾವಣೆ, ಇಲ್ಲ ಸಲ್ಲದ ಅಪವಾದ, ಮಗನಿಗೆ ಒಳ್ಳೆಯ ಉದ್ಯೋಗ, ಹೆಣ್ಣುಮಕ್ಕಳಿಗೆ ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು ಸಂಭವ
ಸಿಂಹ : ಕಚೇರಿ ವ್ಯವಹಾರದಲ್ಲಿ ಇರುವ ಕಿರಿಕಿರಿಯು ಶಮನವಾಗಲಿದೆ. ಅನವಶ್ಯಕ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಇಂದು ನಿಮಗೆ ಅನಾರೋಗ್ಯದ ಸಮಸ್ಯೆ ಉಂಟಾಗಬಹುದು. ಆದರೆ ಚಿಂತೆ ಬೇಡ. ಮನೆ ಮದ್ದಿನಲ್ಲೇ ಪರಿಹಾರವಿದೆ.
ಕನ್ಯಾ : ಇಂದು ನಿಮಗೆ ವಾಹನ ಪ್ರಯಾಣ ಯೋಗ್ಯವಾಗಿಲ್ಲ. ಹೀಗಾಗಿ ಆದಷ್ಟು ವಾಹನಗಳಿಂದ ದೂರವೇ ಇರಿ. ಸ್ತ್ರೀಯರಿಗೆ ಅನಿರೀಕ್ಷಿತ ಮೂಲದಿಂದ ಹಣವು ಹರಿದುಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಕಾದಿದೆ.
ತುಲಾ : ಅಗ್ನಿಯಿಂದ ಅಪಾಯವಿದೆ. ಆದಷ್ಟು ಎಚ್ಚರಿಕೆಯಿಂದಿರಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗಿಟ್ಟಿಸಿಕೊಳ್ಳಲಿದ್ದೀರಿ. ತಂದೆಯಿಂದ ನಿಮ್ಮ ಮನಸ್ಸಿಗೆ ನೋವಾಗುವಂತ ಪ್ರಸಂಗವೊಂದು ನಡೆಯಲಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗಲಿದೆ.
ವೃಶ್ಚಿಕ : ಹೊಸ ಮೂಲಗಳಿಂದ ನಿಮಗೆ ಧನಾಗಮನವಾಗಲಿದೆ. ಇದರಿಂದ ನೀವಿಂದು ಸಂತಸದಿಂದ ಇರಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಒತ್ತಡದ ದಿನವಾಗಿದೆ. ತಾಯಿಯ ಆರೋಗ್ಯದ ಮೇಲೆ ಕಾಳಜಿ ಇರಲಿ.
ಧನು : ನಿಮ್ಮ ಸೋಮಾರಿತನದ ಬುದ್ಧಿಯಿಂದ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೀರಿ. ಐಷಾರಾಮಿ ಜೀವನದಿಂದ ಧನವ್ಯಯವಾಗಲಿದೆ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಸಂಗಾತಿ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ಮಕರ : ಇಂದು ನೀವು ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಅರಸುತ್ತಿದ್ದವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಪದನ್ನೋತಿ ಭಾಗ್ಯವಿದೆ. ಅಡಿಕೆ ವ್ಯಾಪಾರಿಗಳಿಗೆ ಲಾಭವಿದೆ.
ಕುಂಭ : ನಿಮ್ಮ ಸ್ವಂತ ಸಾಮರ್ಥ್ಯವನ್ನು ಪ್ರಶ್ನಿಸುವುದನ್ನು ತಪ್ಪಿಸಿ. ಈ ಸ್ವಭಾವವನ್ನು ಬದಲಾಯಿಸಲು ಪ್ರಯತ್ನಿಸಿ. ಜನರಿಂದ ನೀವು ಪಡೆಯುವ ಅಭಿನಂದನೆಗಳನ್ನು ಸ್ವೀಕರಿಸಲು ಕಲಿಯಿರಿ. ಪ್ರತಿ ಬಾರಿಯೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಯೋಚಿಸುವುದು ತಪ್ಪು.
ಮೀನ : ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ ಯಶಸ್ಸು, ಪ್ರೇಮಿಗಳಿಬ್ಬರ ಕುಟುಂಬದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗುತ್ತದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆಕಸ್ಮಿಕ ಧನಾಗಮನ.