ಮೇಷ : ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ
ವೃಷಭ : ಹಿರಿಯರ ಮಾರ್ಗದರ್ಶನದಿಂದ ಕಷ್ಟಕರ ಪರಿಸ್ಥಿತಿ ಮತ್ತು ಸಾಲ ಪರಿಹಾರ, ಸಾಲ ನೀಡುವಾಗ ಸ್ವಲ್ಪ ಜಾಗೃತಿವಹಿಸಿ, ಅವಶ್ಯಕತೆ ಇದ್ದರೆ ಮಾರುಕಟ್ಟೆಗೆ ಹೋಗಿ, ವೇಗದ ವಾಹನ ಚಾಲನೆಯಿಂದ ಪೆಟ್ಟು ಸಂಭವ, ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಗಳು ಇಂದು ನಿಮಗೆ ಸಿಗುತ್ತವೆ.
ಮಿಥುನ : ನೀವು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕುಟುಂಬ ಸದಸ್ಯರಿಗಾಗಿ ಸಮಯ ಕಳೆಯುತ್ತೀರಿ. ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಹಣದ ಪೂರೈಕೆ ಪೂರ್ಣಗೊಳಿಸಲು ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.
ಕಟಕ : ಸಾಲ ಬಯಸಿದವರಿಗೆ ಸಾಲ ಪ್ರಾಪ್ತಿ, ವಾಹನ ಖರೀದಿಸುವ ಸಾಧ್ಯತೆ, ಹೊಸ ಸ್ನೇಹಿತನ ಪರಿಚಯ, ಸಂಗಾತಿಯ ಸಹಕಾರದಿಂದ ನಿಮ್ಮ ಜೀವನಶೈಲಿ ಬದಲಾಗಲಿದೆ, ಉದ್ಯೋಗದ ಅವಕಾಶಗಳು ಸಿಗಲಿವೆ, ಅಧಿಕಾರಿ ವರ್ಗದವರಿಗೆ ಜನಪ್ರತಿನಿಧಿಯಿಂದ ಹೆಚ್ಚಿನ ಒತ್ತಡ ಎದುರಿಸುವಿರಿ
ಸಿಂಹ : ಅನಿರೀಕ್ಷಿತ ಮೂಲದಿಂದ ಧನಾಗಮನವಿದೆ. ಇದು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ಮನೆಯಲ್ಲಿ ಮಗಳ ಮದುವೆಗೆಂದು ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಕಚೇರಿ ಕೆಲಸದಲ್ಲಿ ಅಭೂತಪೂರ್ವ ಯಶಸ್ಸೊಂದು ನಿಮ್ಮದಾಗಲಿದೆ. ದೂರ ಪ್ರಯಾಣ ಮಾಡಲಿದ್ದೀರಿ.
ಕನ್ಯಾ : ವ್ಯಾಪಾರದಲ್ಲಿ ಸಾಧಾರಣ ಲಾಭವಿದೆ. ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಬಹುದು. ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಕಚೇರಿ ಕೆಲಸದಲ್ಲಿ ಕಿರಿಕಿರಿ ಇರೋದಿಲ್ಲ. ಅಂದುಕೊಂಡ ಕಾರ್ಯವನ್ನು ಸಾಧಿಸಲು ಶ್ರಮ ಪಡುವಿರಿ.
ತುಲಾ : ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳುಗೆಡವಲಿದೆ. ಮೋಜು – ಮಸ್ತಿಯ ನೆಪದಲ್ಲಿ ವ್ಯರ್ಥ ಹಣಪೋಲು ಮಾಡಬೇಡಿ. ಹಣವನ್ನು ಭವಿಷ್ಯಕ್ಕೆಂದು ಕೂಡಿಟ್ಟಲ್ಲಿ ನಿಮಗೆ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಕರಿದ ಆಹಾರ ಸೇವನೆ ಮಾಡಬೇಡಿ.
ವೃಶ್ಚಿಕ : ದುಷ್ಟರಿಂದ ದೂರವಿರು ಎಂಬ ಗಾದೆ ಮಾತು ಕೇಳಿದ್ದೀರಿ ತಾನೆ. ಹಾಗಾದಲ್ಲಿ ಆದಷ್ಟು ಬೇಗ ಈ ಮಾತನ್ನು ಜೀವನದಲ್ಲಿ ಪಾಲಿಸಿ. ಅಡ್ಡದಾರಿಯಿಂದ ಸಾಧಿಸಿದ ಯಶಸ್ಸು, ಗಳಿಸಿದ ಸಂಪತ್ತು ಶಾಶ್ವತವಾಗಿ ನಿಮ್ಮ ಕೈ ಹಿಡಿಯುವುದಿಲ್ಲ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.
ಧನು : ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ. ಧಾರ್ಮಿಕ ಕಾರ್ಯಗಳನ್ನು ನಡೆಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಲಿದ್ದೀರಿ. ಯಾವುದೇ ಪರಿಸ್ಥಿತಿಯಲ್ಲೂ ಅತಿಯಾದ ಕೋಪ ಒಳ್ಳೆಯದಲ್ಲ. ತಾಳ್ಮೆ ಕಾಯ್ದುಕೊಂಡಷ್ಟೂ ನಿಮಗೇ ಒಳ್ಳೆಯದು. ಕುಟುಂಬಸ್ಥರ ಜೊತೆ ತೀರ್ಥಕ್ಷೇತ್ರಕ್ಕೆ ಪ್ರಯಾಣ ಬೆಳೆಸಲಿದ್ದೀರಿ.
ಮಕರ : ಮನೆಯಲ್ಲಿ ಶುಭ ಕಾರ್ಯ ನಡೆಸಲು ಹಣದ ಅಡಚಣೆ ಎದುರಾಗಲಿದೆ. ಕೃಷಿಯಲ್ಲಿ ಲಾಭವಿದೆ. ಆಪ್ತರ ಜೊತೆ ಸಂಯಮದಿಂದ ಮಾತನಾಡಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವವರಿಗೆ ಕಂಕಣ ಭಾಗ್ಯವಿದೆ.
ಕುಂಭ : ನಿಮ್ಮ ದಿನಚರಿಯೊಂದಿಗೆ, ನೀವು ವಿದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಪಡೆಯುತ್ತೀರಿ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದರಿಂದ ಸಂತೋಷವೂ ಇರುತ್ತದೆ.
ಮೀನ : ಹೊಸ ಜನರ ಜೊತೆಗಿನ ಒಡನಾಟದಿಂದಾಗಿ ನೀವು ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ನೀವು ನಿಮ್ಮ ವ್ಯವಹಾರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತರಾಗಿರುತ್ತೀರಿ. ಅತಿ ವೇಗದ ವಾಹನ ಚಾಲನೆಯಿಂದ ಆಪತ್ತು ಕಾಡಲಿದೆ,