ಮೇಷ : ವ್ಯಾಪಾರ ಅನಿರೀಕ್ಷಿತ ತಿರುವು ಪಡೆದು ಅಭಿವೃದ್ಧಿಯ ಪಥಕ್ಕೆ ಬರಲಿದೆ. ಕೃಷಿ ಉತ್ಪನ್ನ ನಿರೀಕ್ಷಿತ ಆದಾಯದಲ್ಲಿ ಲಾಭ. ಕೋರ್ಟ್, ಕಚೇರಿ ಆಗಬೇಕಾದ ಕೆಲಸಗಳಲ್ಲಿ ಯಶಸ್ಸುಗಳಿಸುವಿರಿ. ಸಂಗಾತಿಯ ಸಲಹೆಗಳು ಪಾಲಿಸಿದರೆ ಲಾಭ.
ವೃಷಭ : ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಹೆಚ್ಚಿನ ಸಂಪರ್ಕವನ್ನು ಮಾಡಿ. ಶೀಘ್ರದಲ್ಲೇ ನೀವು ಅದರ ಉತ್ತಮ ಪರಿಣಾಮವನ್ನು ನೋಡಬಹುದು. ಹಣಕಾಸಿನ ದೃಷ್ಟಿಕೋನದಿಂದ, ಇಂದು ನಿಮಗೆ ಉತ್ತಮ ದಿನ.
ಮಿಥುನ : ನೀವು ಸಾಲ ವಹಿವಾಟುಗಳನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದ ವಿಚಾರದಲ್ಲಿ ಸಮಯಕ್ಕೆ ಸರಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದಲ್ಲದೆ, ನೀವು ಕೆಲಸದ ಜೊತೆಗೆ ಸಾಕಷ್ಟು ವಿಶ್ರಾಂತಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ.
ಕಟಕ : ಪ್ರೀತಿಯ ಜೀವನ ಸ್ವಲ್ಪ ಪ್ರತಿಕೂಲಕರವಾಗಲಿದೆ ಆದ್ದರಿಂದ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಿರಿ, ಇದು ಪರಿಸ್ಥಿತಿಗಳನ್ನು ಸರಿಮಾಡಲು ಕೆಲಸ ಮಾಡುತ್ತದೆ. ಮಕ್ಕಳಿಗೆ ಈ ದಿನ ಅನುಕೂಲಕರವಾಗಿಲ್ಲ.
ಸಿಂಹ : ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನೀವು ಇಂದು ಚೇತರಿಸಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಇಂದು ಉನ್ನತ ಸ್ಥಾನಕ್ಕೆ ಏರುವ ಅವಕಾಶ ಲಭಿಸಲಿದೆ. ಮೀನುಗಾರರು, ಮಾಂಸ ವ್ಯಾಪಾರಿಗಳು ಇಂದು ಲಾಭ ಹೊಂದಲಿದ್ದಾರೆ.
ಕನ್ಯಾ : ಪರಸ್ತ್ರೀ ನಿಂದಕ ಎಂಬ ಅಪವಾದ ಇಂದು ನಿಮ್ಮನ್ನು ಕಾಡಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದ್ದು ಇದರಿಂದ ಚಿಂತೆಗೆ ಒಳಗಾಗಲಿದ್ದೀರಿ. ಸಂಗಾತಿಯು ನಿಮ್ಮ ಮೇಲೆ ಸುಖಾಸುಮ್ಮನೇ ಮುನಿಸಿಕೊಳ್ಳಲಿದ್ದಾರೆ.
ತುಲಾ : ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ನೀವು ಇಂದು ಅನಾರೋಗ್ಯದಿಂದ ಹಾಸಿಗೆ ಹಿಡಿಯಲಿದ್ದೀರಿ. ಹಬ್ಬದ ನಿಮಿತ್ತ ಅನಗತ್ಯ ಖರ್ಚು ಉಂಟಾಗುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಕೀರ್ತಿ ಹೆಚ್ಚಿಸುವಂತಹ ಸಾಧನೆ ತೋರಲಿದ್ದಾರೆ.
ವೃಶ್ಚಿಕ : ಬಹುದಿನದ ಬಳಿಕ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಪಾಲುದಾರಿಕೆ ಉದ್ಯಮದಿಂದ ಲಾಭ ಕಂಡುಕೊಳ್ಳಲಿದ್ದೀರಿ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ವೇಳೆ ನಾಲಗೆ ಮೇಲೆ ಹಿಡಿತವಿರಲಿ.
ಧನು : ಇನ್ನೊಬ್ಬರ ಬಗ್ಗೆ ಅನಗತ್ಯ ಮಾತುಗಳನ್ನಾಡುವವರಿಂದ ದೂರವೇ ಇರಿ. ಸಂಗಾತಿಯ ಕೆಲ ನಿರ್ಧಾರಗಳು ನಿಮಗೆ ಒಪ್ಪಿಗೆ ಎನಿಸದೇ ಇರಬಹುದು. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಇಂದು ಕೆಲಸದ ಒತ್ತಡ ಹೆಚ್ಚಲಿದೆ. ಭೂ ವ್ಯಾಜ್ಯಗಳು ಪರಿಹಾರವಾಗಲಿದೆ.
ಮಕರ : ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕು ಆಗ ಮಾತ್ರ ಅವರು ಅವರಿಗೆ ನೆಚ್ಚಿದ ಫಲಿತಾಂಶಗಳನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ. ಮಕ್ಕಳ ಮದುವೆ ವಿಚಾರದಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳಲಿದ್ದೀರಿ.
ಕುಂಭ : ಕಚೇರಿಯಲ್ಲಿ ಹಿತಶತ್ರುಗಳಿಂದ ಎಚ್ಚರಿಕೆಯಿಂದಿರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವಿರಿ. ಕುಟುಂಬಸ್ಥರ ಜೊತೆ ಸೇರಿ ಇಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಆರೋಗ್ಯದ ಬಗ್ಗೆ ಇಂದು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಮೀನ : ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ.