ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ

ಮೇಷ : ನಿಮ್ಮ ಸುತ್ತ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತೀರಿ. ಕಾರ್ಯಯೋಜನೆಗೆ ಪೂರಕವಾದ ವಾತಾವರಣವಿದೆ. ಕುಟುಂಬದ ಎಲ್ಲ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರ-ವಹಿವಾಟು ಯಶಸ್ಸಿನತ್ತ ಹೆಜ್ಜೆ ಹಾಕುವಿರಿ.

ವೃಷಭ : ಹಣಕಾಸಿನ ಕೊರತೆಯಿಲ್ಲದ ಭದ್ರತೆಯಲ್ಲಿ ದೃಢ ಸ್ವಭಾವದಲ್ಲೂ ಪಡೆಯುವಿಕೆ ಹುನ್ನಾರ ವೃದ್ಧಿ. ಕುಲ ದೇವತಾ ದರ್ಶನದಿಂದ ನಿಮ್ಮದಿ ಪ್ರಾಪ್ತಿ. ವ್ಯವಹಾರದಲ್ಲಿ ಮಾಡಿದ ನಿಮ್ಮ ಹೂಡಿಕೆಯಿಂದ ನೀವು ಲಾಭ ಪಡೆಯುತ್ತೀರಿ.

ಮಿಥುನ : ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಸಾಧ್ಯತೆ. ದೃಢ ವಿಶ್ವಾಸಕ್ಕನುಗುಣವಾಗಿ ತಕ್ಕ ಪ್ರತಿಫಲ ಪಡೆಯುವಿರಿ. ಸಂಗಾತಿಯ ಜೊತೆ ಸಂಕೋಚ ಸ್ವಭಾವ. ಸಂಕೋಚ ಪ್ರವೃತ್ತಿಯಿಂದ ದೂರವಿರಿ. ಆರ್ಥಿಕ ಭವಿಷ್ಯದ ಬಗ್ಗೆ ಮರುನೋಟವಿದ್ದು ಇತರರ ಮನ ಒಲಿಕೆ ಮಾಡಿ.

ಕಟಕ : ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನೀವು ಇಂದು ಚೇತರಿಕೆ ಕಾಣಲಿದ್ದೀರಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಸಿಗಲಿದೆ. ಹಳೆಯ ಸಾಲಗಳು ತೀರಲಿವೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ಲಭಿಸಲಿದೆ.

ಸಿಂಹ : ಆರ್ಥಿಕವಾಗಿ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆ ಇದೆ.

ಕನ್ಯಾ : ಬೆನ್ನು ನೋವಿನ ಸಮಸ್ಯೆ ಇಂದು ನಿಮ್ಮನ್ನು ಭಾದಿಸಲಿದೆ. ಹೀಗಾಗಿ ನಿಮಗೆ ಇಂದು ಕೆಲಸದ ಮೇಲೆ ಏಕಾಗ್ರತೆ ಹೊಂದಲು ಸಾಧ್ಯವಾಗೋದಿಲ್ಲ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ.

ತುಲಾ : ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಮಕ್ಕಳು ಓದಿನ ಕಡೆಗೆ ಗಮನ ನೀಡುವುದಿಲ್ಲ. ಇದರಿಂದ ನೀವು ತುಂಬಾನೇ ಆತಂಕಕ್ಕೆ ಒಳಗಾಗುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಕುಟುಂಬದಲ್ಲಿ ಯಾರೊಂದಿಗೂ ಅನಗತ್ಯ ವಾದಕ್ಕೆ ಇಳಿಯಬೇಡಿ.

ವೃಶ್ಚಿಕ : ವ್ಯವಹಾರದಲ್ಲಿ ನಿಮ್ಮ ಮಾತಿನ ಶೈಲಿಯೇ ನಿಮ್ಮನ್ನು ಕಾಪಾಡಲಿದೆ. ಹೀಗಾಗಿ ನೀವು ದೊಡ್ಡ ಮಟ್ಟದಲ್ಲಿ ಲಾಭವನ್ನು ಕಾಣಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಪರಸ್ತ್ರೀಯರೊಂದಿಗೆ ಅನಗತ್ಯ ವಾದ ಸಲ್ಲದು.

ಧನು : ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ನೀವು ಕುಟುಂಬ ವರ್ಗದಲ್ಲಿ ಗೌರವ ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮ ಪ್ರೇಮವು ವೈವಾಹಿಕ ಜೀವನಗಾಗಿ ಬದಲಾಗುವ ಕಾಲ ಸನ್ನಿಹಿತವಾಗಲಿದೆ. ದೂರ ಪ್ರಯಾಣ ಮಾಡಲು ಇದು ಸೂಕ್ತವಾದ ಸಮಯವಲ್ಲ.

ಮಕರ : ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಲಿದ್ದಾರೆ. ಇದರಿಂದ ಪೋಷಕರಾದ ನಿಮಗೆ ಹೆಮ್ಮೆ ಎನಿಸಲಿದೆ. ಕುಲದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಲಿದ್ದೀರಿ. ನಿಮ್ಮ ಕೈಲಾದಷ್ಟು ದಾನ – ಧರ್ಮ ಮಾಡಿ.

ಕುಂಭ : ಉದ್ಯಮ ಆರ್ಥಿಕದ ಚೈತನ್ಯದ ವಿದ್ಯಮಾನ ಕೇಳುವಿರಿ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ಸಂಗಾತಿ ಜೊತೆ ಹಸನ್ಮುಖಿ ಆಗುವಿರಿ. ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸ ತಯಾರಿ ಮಾಡಿಕೊಳ್ಳಿ. ಸರಕಾರಿ ಉದ್ಯೋಗಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ.

ಮೀನ : ಕೆಲಸದಲ್ಲಿ ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನ. ಕಚೇರಿಯಲ್ಲಿ ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಿರುತ್ತದೆ. ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣ ಪರಿಶ್ರಮ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ, ಶೀಘ್ರದಲ್ಲೇ ಉತ್ತಮ ಯಶಸ್ಸನ್ನು ಪಡೆಯಬಹುದು. ನಡೆಸುತ್ತಿರುವವರಿಗೆ ಕಂಕಣಬಲ ಕೂಡಿ ಬರಲಿದೆ.

Leave a Reply

Your email address will not be published. Required fields are marked *

error: Content is protected !!