ಪಂಜಾಬ ಅನ್ನು ಭಾರತದಿಂದ ಬೇರ್ಪಡಿಸಲು ಖಲಿಸ್ತಾನವಾದಿಗಳನ್ನು ಸೇರಿಸಿ ತೆರೆಮರೆಯ ಯುದ್ಧ ! – ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ್ ಮಹಾನಿರ್ದೇಶಕರು

ಪಂಜಾಬನ ನ್ಯಾಯಾಲಯವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬಾಂಬ್ ಸ್ಫೋಟಿಸುತ್ತಾರೆ, ಗಡಿ ಪ್ರದೇಶದಲ್ಲಿ ಆರ್.ಡಿ.ಎಕ್ಸ್. ತುಂಬಿದ ಬಸ್ ಪತ್ತೆಯಾಗುತ್ತದೆ, ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಂಜಾಬಗೆ ಕಳುಹಿಸಲಾಗುತ್ತಿದೆ, ಇವೆಲ್ಲವುಗಳಿಂದ ಪಂಜಾಬನಲ್ಲಿ ದೇಶವಿರೋಧಿ ತತ್ತ್ವಗಳು ಸಕ್ರಿಯವಾಗಿವೆ ಎಂದು ತಿಳಿಯುತ್ತದೆ. ಅವು ಖಲಿಸ್ತಾನವಾದಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡಿವೆ. ದೇಶದ ವಿರುದ್ಧ ತೆರೆಮರೆಯ ಯುದ್ಧ (‘ಪ್ರಾಕ್ಸಿ ವಾರ್’) ಆರಂಭಿಸಲಾಗಿದೆ. ಆದರೆ ಅವರು ಈ ಯುದ್ಧದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ; ಏಕೆಂದರೆ ಪಂಜಾಬನ ಜನರು ಭಾರತದ ಜೊತೆಗಿದ್ದಾರೆ. ಪಂಜಾಬ ಸರಕಾರವು ಜಾಗೃತವಾಗಿ ರಾಜ್ಯ ಮತ್ತು ಗಡಿ ಪ್ರದೇಶಗಳನ್ನು ಸುರಕ್ಷಿತವಾಗಿರಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕರು ಹಾಗೂ ‘ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ’ದ ಅಧ್ಯಕ್ಷರಾದ ಶ್ರೀ. ಪ್ರವೀಣ ದೀಕ್ಷಿತ ಅವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಪಂಜಾಬ ಅನ್ನು ಭಾರತದಿಂದ ಪ್ರತ್ಯೇಕಿಸುವ ಸಂಚು!’ ಎಂಬ ವಿಷಯದ ಕುರಿತಾದ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರರು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ಮಾತನಾಡುತ್ತಾ, ‘ಖಲಿಸ್ತಾನಿ ಚಳವಳಿಯು ಚೀನಾ, ಪಾಕಿಸ್ತಾನ ಮತ್ತು ಇಸ್ಲಾಮಿಕ್ ಉಗ್ರರೊಂದಿಗೆ ಕೈಜೋಡಿಸಿರುವುದು ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಸಿಕ್ಕಿದೆ. ಸಿಕ್ಖ್ ರು ಭಾರತದ ಇತಿಹಾಸಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ; ಆದಾಗ್ಯೂ, ಖಾಲಿಸ್ತಾನಿಗಳು ಆಗಾಗ್ಗೆ ರೈತ ಆಂದೋಲನದ ಮೂಲಕ ಸಿಕ್ಖ್ ರನ್ನು ಸೇರಿಸಿ ಅವರ ಮೇಲೆ ಸರಕಾರವು ಗುಂಡು ಹಾರಿಸಬೇಕಾದ ವಾತಾವರಣವನ್ನು ಸೃಷ್ಟಿಸಿದರು; ಆದರೆ ಸರಕಾರ ಬಲಪ್ರಯೋಗ ಮಾಡಲಿಲ್ಲ. ಆದರೆ ಅದು ಸಂಭವಿಸಿದ್ದರೆ, ದೇಶವನ್ನು ಅಸ್ಥಿರಗೊಳಿಸುವ ದೊಡ್ಡ ತಂತ್ರವಾಗುತ್ತಿತ್ತು. ಪ್ರಧಾನಿ ಕಾರು ತಡೆದ ಹಿಂದೆಯೂ ದೊಡ್ಡ ಷಡ್ಯಂತ್ರವನ್ನೇ ರೂಪಿಸಲಾಗಿತ್ತು’, ಎಂದರು. ಈ ಸಮಯದಲ್ಲಿ ಅಮೇರಿಕದ ಮಾಂ ರಾಜಲಕ್ಷ್ಮಿಯವರು ಮಾತನಾಡುತ್ತಾ, ‘ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ‘ಭಾರತವನ್ನು ಮತಾಂತರಿಸಿ ಮತ್ತು ಅನಂತರ ಭಾರತವನ್ನು ನಿಯಂತ್ರಿಸಿ ಭಾರತವನ್ನು ಒಡೆಯಿರಿ’, ಎಂಬ ಷಡ್ಯಂತ್ರಗಳು ನಡೆಯುತ್ತಿವೆ. ಮಿಶನರಿಗಳು, ಪಾಕಿಸ್ತಾನಿಗಳು, ಚೀನಾ, ಅಂತಾರಾಷ್ಟ್ರೀಯ ಗುಂಪುಗಳು ಇತ್ಯಾದಿಗಳು ಇದಕ್ಕಾಗಿ ಕಾರ್ಯನಿರತವಾಗಿವೆ. ಖಲಿಸ್ತಾನಿ ಚಳುವಳಿ, ಇಸ್ಲಾಮಿಕ್ ಭಯೋತ್ಪಾದನೆ, ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ ಪರಿಷತ್ತು’, ‘ಸಿಎಎ’ ವಿರೋಧಿ ಆಂದೋಲನಗಳು, ರೈತ ಆಂದೋಲನಗಳು, ಉದ್ದೇಶಪೂರ್ವಕವಾಗಿ ಹಿಂದೂ ದೇವತೆಗಳನ್ನು ಅವಮಾನಿಸುವುದು ಮುಂತಾದ ಅನೇಕ ಕೃತ್ಯಗಳನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಇದೊಂದು ಜಾಗತಿಕ ಪಿತೂರಿಯಾಗಿದೆ’, ಎಂದರು.
ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕರು ಮಾತನಾಡುತ್ತಾ, ಕಾಂಗ್ರೆಸ್ ೧೯೮೪ರ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸಿಕ್ಖ್ ಧರ್ಮವು ಜನಾಂಗೀಯ ಅಥವಾ ರಾಷ್ಟ್ರದ್ರೋಹಿಯಲ್ಲ. ವಿವಿಧ ಜಾತಿಗಳನ್ನು ಗೌರವಿಸಿ ‘ಪಂಚಪ್ಯಾರೆ’ ಎಂಬ ಪರಿಕಲ್ಪನೆಯನ್ನು ಸಿಕ್ಖ್ ರ ಗುರುಗಳಾದ ಗುರು ಗೋಬಿಂದ ಸಿಂಗ್ ಅವರು ಮಂಡಿಸಿದರು; ಆದರೆ ಕಾಂಗ್ರೆಸ್ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕೋಮುವಾದವನ್ನು ಹುಟ್ಟುಹಾಕಿತು. ಪಂಜಾಬನ ಮುಖ್ಯಮಂತ್ರಿ ಚನ್ನಿ ದಲಿತ ಸಿಕ್ಖ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಾಕ್ಷಾತ್ ಗುರು ಗೋಬಿಂದ ಸಿಂಗ್ ಅವರನ್ನು ಅವಮಾನಿಸಿದೆ. ೨೦೧೪ ರವರೆಗೆ ದೆಹಲಿಯಲ್ಲಿ ಸಿಕ್ಖ್ ರು ಮತ್ತು ಅವರ ಗುರುಗಳಿಗೆ ಚಿತ್ರಹಿಂಸೆ ನೀಡಿದ ಔರಂಗಜೇಬ್ ಹೆಸರಿನ ಹೆದ್ದಾರಿ ಇತ್ತು. ಕಾಂಗ್ರೆಸ್ ಯಾವತ್ತೂ ಆ ಹೆಸರನ್ನು ಬದಲಾಯಿಸಿಲ್ಲ. ಒಂದು ರೀತಿಯಲ್ಲಿ ಕಾಂಗ್ರೆಸ್ ಸಿಕ್ಖ್ ರನ್ನು ಅವಮಾನಿಸಿದೆ ಎಂದರು.

ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂ : 99879 66666)

Leave a Reply

Your email address will not be published. Required fields are marked *

error: Content is protected !!