ಸರ್ಕಾರದ ಎಲ್ಲಾ ಸೇವೆಗಳು ಸಾಮಾನ್ಯ ಜನರ ಮನೆ ಬಾಗಿಲಿಗೆ-ಸುನಿತಾಪ್ರಭು


ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತುಮಕೂರು ತಾಲ್ಲೋಕಿನ ಬೆಳ್ಳಾವಿ ವಲಯದಲ್ಲಿ ಇಂದು ೪ ಡಿಜಿಟಲ್ ಸೇವಾ ಕೇಂದ್ರವನ್ನು ಏಕಕಾಲದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.ಬೆಳ್ಳಾವಿ,ಭೀಮಸಂದ್ರ,ಹೆಗ್ಗೆರೆ,ಮಲ್ಲಸಂದ್ರದಲ್ಲಿ ಪ್ರಾರಂಭಿಸಲಾಯಿತು.ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀಮತಿ ಸುನಿತಾಪ್ರಭುರವರು ಸರ್ಕಾರಿ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬೆಳ್ಳಾವಿ ಕಾರದ ಮಠದ ಶ್ರೀ.ಶ್ರೀ. ಕಾರದ ವೀರಬಸವ ಮಹಾಸ್ವಾಮೀಜಿಗಳು ಮಹಿಳೆಯರ ಸಬಲೀಕರಣ ಬಗ್ಗೆ ಮಾಹಿತಿ ನೀಡಿ ಇದರ ಉಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ಧನಲಕ್ಷ್ಮಿ,ತಾಲ್ಲೋಕಿನ ನೋಡೆಲ್ ಅಧಿಕಾರಿ ಶಿವರಾಮ್,ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸಿಂಧು,ಒಕ್ಕೂಟದ ಅಧ್ಯಕ್ಷರಾದ ಕೆ.ಯಶೋಧ,ಸೇವಾಪ್ರತಿನಿಧಿಗಳು,ಸರ್ವ ಸಂಘದ ಸದಸ್ಯರು,ಸೇವಾಸಿಂಧು ಗ್ರಾಮಮಟ್ಟದ ಕಾರ್ಯನಿರ್ವಾಹಕ ಮನೋಜ್ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!