ಕೋರೋನ ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಲು _ಸಚಿವ ಮಾಧುಸ್ವಾಮಿ ಮನವಿ.

ತುಮಕೂರು_ಕರೋನ ಮೂರನೇ ಅಲೆ ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಕರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಇನ್ನು ತುಮಕೂರು ಜಿಲ್ಲೆಯಲ್ಲಿ ಕೊರೋನ ತಡೆಗೆ ಜಿಲ್ಲಾಡಳಿತ ಸಂಪೂರ್ಣ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾಹಿತಿ ನೀಡಿದ ಸಚಿವ ಮಾಧುಸ್ವಾಮಿ ರವರು ಕರೋನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಆಗುವ ಬದಲು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಕರೋನ ಸೋಂಕಿತರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರಕುತ್ತಿದ್ದು ಇದರ ಸದುಪಯೋಗವನ್ನು ಸೋಂಕಿತರು ಪಡೆದುಕೊಳ್ಳಬೇಕು ಅದನ್ನು ಬಿಟ್ಟು ಸೋಂಕಿತರು ತಾವಾಗಿಯೇ ಸರ್ಕಾರಿ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಸಿದೆ ಏಕಾಏಕಿ ತಾವಾಗಿಯೇ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗಾಗಿ ಇನ್ನು ಮುಂದೆ ಕರೋನ ಸೋಂಕಿತರು ಸರ್ಕಾರದಲ್ಲಿ ನೊಂದಣಿ ಮಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೋನ ಸೋಂಕಿಗೆ ಚಿಕಿತ್ಸೆ ಪಡೆಯಬೇಕು ಎಂದರು.

ಈಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕು ತಡೆಗಟ್ಟಲು ಸಾಕಷ್ಟು ವೈದ್ಯಕೀಯ ಚಿಕಿತ್ಸೆ ಹಾಗೂ ನುರಿತ ವೈದ್ಯರ ತಂಡ ಶ್ರಮಿಸುತ್ತದೆ ಹಾಗಾಗಿ ಕರೋನಾ ಸೋಂಕಿತರು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು ಇಲ್ಲವಾದರೆ ಅಂತಹ ಸೋಂಕಿತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಹಾಗೂ ಮರಣವನ್ನು ಅಪ್ಪಿದರು ಸಹ ಯಾವುದೇ ಸಹಾಯಧನ ಅವರಿಗೆ ಸಿಗುವುದಿಲ್ಲ ಎಂದರು.

ಹಾಗಾಗಿ ಇನ್ನು ಮುಂದೆ ಕಂಡುಬರುವ ಕರೋನ ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಸಿ ಚಿಕಿತ್ಸೆ ಪಡೆಯಿರಿ ಎಂದಿದ್ದಾರೆ.

 

ಈಗಿರುವ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಒತ್ತಡ ಈಗ ಸದ್ಯಕ್ಕೆ ಇಲ್ಲ ಈಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರು ಇಲ್ಲ ಇನ್ನೂ ಸಾಕಷ್ಟು ಕೊರನಾ ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಹಾಗಾಗಿ ಸರ್ಕಾರಿ ಆಸ್ಪತ್ರೆಯ ಮೇಲೂ ಸದ್ಯಕ್ಕೆ ಯಾವುದೇ ಒತ್ತಡವಿಲ್ಲ ಹಾಗಾಗಿ ಇನ್ನೂ ಖಾಸಗಿ ಆಸ್ಪತ್ರೆಗಳ ಮೊರೆಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ವರದಿ_ ವಿದ್ಯರಂಜಕ

Leave a Reply

Your email address will not be published. Required fields are marked *

error: Content is protected !!