ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಕ್ರಮದಡಿಯಲ್ಲಿ 18-35 ವರ್ಷ ವಯಸ್ಸಿನ ಎಲ್ಲಾ ವರ್ಗದ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 5ನೇ ತರಗತಿ ಪಾಸಾದ ಅಭ್ಯರ್ಥಿಗಳು ಟೈಲರಿಂಗ್ ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿಯು 45 ದಿನಗಳ ಕಾಲ ನಡೆಯುತ್ತದೆ. ತರಬೇತಿಗೆ ಆಯ್ಕೆಯಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ 3500/- ರೂಗಳ ಸಹಾಯಧನವನ್ನು ನೀಡಲಾಗುತ್ತದೆ.
ತರಬೇತಿಯ ನಂತರ ವಿವಿಧ ಉಡುಪು ತಯಾರಿಕಾ ಘಟಕದಲ್ಲಿ ಉದ್ಯೋಗವನ್ನು ದೊರಕಿಸಿ ಕೊಡಲಾಗುವುದು. ಆಸಕ್ತರು ಕೂಡಲೇ ಸಂಪರ್ಕಿಸಿ: ಸಮರ್ಥ್ ಫೌಂಡೇಷನ್, ಸದ್ಗುರುಭವನ, ಎಂ.ಜಿ ರೋಡ್ ತುಮಕೂರು ದೂರವಾಣಿ ಸಂಖ್ಯೆ : 8050583608, 7019096001, 9986824210