ರಾಜ್ಯಮಟ್ಟದ ಸಂಗೀತ ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೇ : ವೀರೇಶಾನಂದಶ್ರೀ

ತುಮಕೂರು : ಸಂಗೀತ ಕಲಾರತ್ನ ವಿದ್ವಾನ್ ಎಸ್ ಕೃ?ಮೂರ್ತಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಬೆಂಗಳೂರು ಗಾಯನ ಸಮಾಜದ ೫೧ನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಇದೇ ಡಿಸೆಂಬರ್ 5ರ ಭಾನುವಾರದಂದು ಬೆಂಗಳೂರಿನ ಕೆ.ಆರ್ ರಸ್ತೆಯ ಗಾಯನ ಸಮಾಜ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ತುಮಕೂರು ರಾಮಕೃ?-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀಯವರು ಈ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.


ಒಂದು ವಾರ ಆಯೋಜಿಸಲಾಗಿರುವ ಈ ಸಂಗೀತೋತ್ಸವಕ್ಕೆ ಸಮ್ಮೇಳನಾಧ್ಯಕ್ಷರಾಗಿ ಡಾ. ಎಂ. ಸೂರ್ಯಪ್ರಸಾದ್ ಆಯ್ಕೆಯಾಗಿದ್ದು ಡಿಸೆಂಬರ್ ೧೨ರ ಭಾನುವಾರದಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀಗಳಾದ ನಾರಾಯಣ ರಾಮಾನುಜ ಜೀಯರ್ ರವರು ಸೂರ್ಯಪ್ರಸಾದ್ ರವರಿಗೆ ಸಂಗೀತ ಕಲಾರತ್ನ ಎಂಬ ಬಿರುದನ್ನು ಪ್ರದಾನ ಮಾಡಲಿದ್ದಾರೆ.

ಈ ಸಮಾರೋಪ ಸಮಾರಂಭದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ ನಾರಾಯಣ್ ಹಾಗು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!