ಶ್ರೀದೇವಿ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರ ತಂಡದಿಂದ ಶಿಶ್ನವಿನ ಕ್ಯಾನ್ಸರ್ ಗೆಡ್ಡೆಯಿಂದ ಹೊರತೆಗೆದ ಅಪರೂಪ ಶಸ್ತ್ರಚಿಕಿತ್ಸೆ

ತುಮಕೂರಿನ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯ ವೈದ್ಯರು ೪೫ ವರ್ಷದ ವ್ಯಕ್ತಿಯನ್ನು ಅತ್ಯಂತ ಅಪರೂಪವಾದ ಶಸ್ತ್ರಚಿಕಿತ್ಸೆ ಮೂಲಕ ಶಿಶ್ನವಿನ ಗೆಡ್ಡೆಯನ್ನು ಹೊರತೆಗೆದು ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಅವರಿಗೆ ಸುಮಾರು 1 ವರ್ಷದಿಂದ ನೋವಿನಿಂದ ಬಳಲುತ್ತಿದ್ದವರು, ಇವರು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳಲುತ್ತಿದ್ದಾರೆ.

ಸುಮಾರು ೪೫ ವರ್ಷದ ವ್ಯಕ್ತಿಯನ್ನು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ತಂಡದಿಂದ ವೈದ್ಯರು ಪರೀಕ್ಷಿಸಿ, ಶಿಶ್ನವಿನ ಗೆಡ್ಡೆಯೂ ಬಯಾಪ್ಸಿ ಮಾಡಿದಾಗ ಅದನ್ನು ಕ್ಯಾನ್ಸರ್ ರೀತಿಯ ಗೆಡ್ಡೆಯೆಂದು ಕಂಡು ಬಂದಿತ್ತು. ಅತನಿಗೆ ಶಿಶ್ನವಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ (Total Penectomy with Bilateral Inguinal Iymph node dissection with Perineal Utethrostomy) ಮೂಲಕ ಆಪರೇಷನ್ ಮಾಡಿ ಸುತ್ತಲಿನ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲಾಗಿತ್ತು. ಸದರಿ ಯಶಸ್ವಿ ಶಸ್ತ್ರಚಿಕಿತ್ಸೆಯ ರೋಗಿಗೂ ಕುಟುಂಬಸ್ಥರಿಗೂ ಶಸ್ತ್ರಚಿಕಿತ್ಸೆಗೆ ಧೈರ್ಯ ತುಂಬಿದರು. ಆ ವ್ಯಕ್ತಿಯ ಶಿಶ್ನವಿನ ಕ್ಯಾನರ್ ಗೆಡ್ಡೆಯನ್ನು ತೆಗೆಯಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಈ ಸವಾಲುಗಳನ್ನು ದಾಟಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಶ್ರೀದೇವಿ ವೈದ್ಯಕೀಯ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಲ್.ಚೇತನ್‌ರವರು ತಿಳಿಸಿದರು.

ಶ್ರೀದೇವಿ ವೈದ್ಯಕೀಯ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಲ್.ಚೇತನ್ ಮತ್ತು ಡಾ.ಪಂಪನಗೌಡ, ಡಾ.ಆರ್.ಸಂತೋಷ್‌ರಾಜಪುತರವರ ತಂಡದಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಎಲ್.ನರೇಂದ್ರಕುಮಾರ್, ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಂಗೋಳ್ಳಿ, ವೈದ್ಯರಾದ ಡಾ.ಕೆ.ಎಂ.ಅಮಿತ್, ಡಾ.ಹೇಮಂತ್, ಹಾಗೂ ಇತರೆ ಪರಿಣಿತರಾದ ಶಸ್ತ್ರಚಿಕಿತ್ಸಕರು ಕಾರ್ಯ ನಿರ್ವಹಿಸುತ್ತಿರುವರು.

ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಹಾಗೂ ಅಲ್ಲಿನ ಪರಿಣಿತರಾದ ವೈದ್ಯಕೀಯ ತಂಡದ ಉಪಯೋಗಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು, ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗಳು ಚಿಕಿತ್ಸೆ ಪಡೆಯಬಹುದೆಂದು ವೈದ್ಯರು ತಿಳಿಸಿದರು. ಅಪರೂಪವಾದ ಚಿಕಿತ್ಸೆಯನ್ನು ನಮ್ಮ ವೈದ್ಯರು ನೀಡಿರುವುದು ಹಾಗೂ ಬಡರೋಗಿಗಳ ಬಗೆಗಿನ ಕಾಳಜಿಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್.ಎಂ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜು, ಉಪಪ್ರಾಂಶುಪಾಲರಾದ ಡಾ.ರೇಖಾ ಗುರುಮೂರ್ತಿ, ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ ವೈದ್ಯರಿಗೆ ಶುಭಾಷಯ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!