ರಾಶಿ ಭವಿಷ್ಯ: ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ

ಮೇಷ : ನೀವೆಷ್ಟೇ ಒಳ್ಳೆಯ ಕೆಲಸ ಮಾಡಿದರೂ ಸಹ ನಿಮ್ಮನ್ನು ನಿಂದಿಸುವವರು ಇದ್ದೇ ಇರುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ದೇವರ ಮೇಲೆ ಭಾರ ಹಾಕಿ ನಿಮ್ಮ ಪ್ರಯತ್ನ ಮುಂದುವರಿಸಿ. ಕಚೇರಿ ಕೆಲಸದಲ್ಲಿ ನೆಮ್ಮದಿ ಇರಲಿದೆ.

ವೃಷಭ : ನಿಮ್ಮ ವರ್ತನೆಯಿಂದಾಗಿ ಮಕ್ಕಳು ನಿಮ್ಮ ಮೇಲೆ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ.ಆದಷ್ಟು ಮಾತಿನ ಮೇಲೆ ಹಿಡಿತವಿರಲಿ. ವೃತ್ತಿ ಜೀವನದಲ್ಲಿ ಅಂದುಕೊಂಡಂತಹ ಯಶಸ್ಸೇನು ಇರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮಿಥುನ : ಆರ್ಥಿಕವಾಗಿ ಸದೃಢರಾಗಿ ಇದ್ದರೂ ನಿಮಗೆ ಮಾನಸಿಕವಾಗಿ ನೆಮ್ಮದಿ ಇರೋದಿಲ್ಲ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ತಂದೆಯೊಂದಿಗಿನ ಸಂಬಂಧ ಸುಧಾರಿಸಲಿದೆ. ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲಿದ್ದೀರಿ.

ಕಟಕ : ಸಂಗಾತಿಯು ನಿಮ್ಮೆಲ್ಲ ಹೊಸ ಪ್ರಯತ್ನಗಳಿಗೆ ಬೆಂಬಲ ಸೂಚಿಸಲಿದ್ದಾರೆ. ಕಲಾವಿದರಿಗೆ ಈ ದಿನ ಹೆಚ್ಚು ಲಾಭದಾಯಕವಾಗಿರಲಿದೆ. ಅದೃಷ್ಟ ಇಂದು ನಿಮ್ಮ ಕೈ ಹಿಡಿಯಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿನಿಂದ ಕೂದಲೆಳೆ ಅಂತರದಲ್ಲಿ ಪಾರಾಗಲಿದ್ದೀರಿ.

ಸಿಂಹ : ಸೊಸೆಯ ಕಟುವಾದ ಮಾತುಗಳು ಮನೆಯ ನೆಮ್ಮದಿಯನ್ನು ಹಾಳು ಮಾಡಬಹುದು. ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಇರಲಿದೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಕುಟುಂಬಸ್ಥರ ಜೊತೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೀರಿ.

ಕನ್ಯಾ : ಹಣಕಾಸಿನ ಯೋಜನೆ ವಿಚಾರದಲ್ಲಿ ಆದಷ್ಟು ಎಚ್ಚರವಾಗಿರಿ. ಇಂದು ನೀವು ಯಾರಿಗೂ ಸಾಲ ನೀಡಲು ಹೋಗಬೇಡಿ. ಏಕೆಂದರೆ ಆ ಹಣ ಎಂದಿಗೂ ವಾಪಸ್​ ಬರೋದಿಲ್ಲ. ಕಚೇರಿಯಲ್ಲಿ ಒತ್ತಡ ಹೆಚ್ಚಿರೋದ್ರಿಂದ ಕುಟುಂಬಸ್ಥರಿಗೆ ಸಮಯ ನೀಡಲು ಆಗದೇ ಇರಬಹುದು.

ತುಲಾ : ಈ ದಿನ ನೀವು ವಾಹನ ಚಲಾಯಿಸುವಾಗ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೊಟ್ಟ ಸಾಲ ವಾಪಸ್​ ಕೇಳಲು ಹೋಗಿ ಸ್ನೇಹಿತರ ಜೊತೆ ವೈಮನಸ್ಯ ಮಾಡಿಕೊಳ್ಳಲಿದ್ದೀರಿ. ಆಹಾರ ಸೇವನೆಯಲ್ಲಿಯೂ ಎಚ್ಚರಿಕೆಯಿಂದಿರಿ.

ವೃಶ್ಚಿಕ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳುವ ನೀವು ಅತಿಯಾಗಿ ದಣಿಯಲಿದ್ದೀರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಸಂಗಾತಿಯು ನಿಮ್ಮ ಹೊಸ ಪ್ರಯತ್ನಗಳಿಗೆ ಹೆಗಲಾದಲಿದ್ದಾರೆ.

ಧನು : ಇಂದು ನೀವು ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಭೂಮಿ ಖರೀದಿ ಮಾಡಬೇಕು ಎಂದುಕೊಂಡವರು ಇಂದು ಹೂಡಿಕೆ ಮಾಡಬಹುದು. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮಕರ : ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಉದ್ಯಮದಲ್ಲಿ ತಂದೆಯಿಂದ ಲಾಭದಾಯಕ ಸಲಹೆಗಳನ್ನು ಸ್ವೀಕರಿಸಲಿದ್ದೀರಿ. ನೂತನ ವಿವಾಹಿತರಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಗುರು ಅನುಗ್ರಹ ಇರಲಿದೆ.

ಕುಂಭ : ಕಚೇರಿಯಲ್ಲಿಂದು ನಿಮ್ಮ ಪ್ರತಿಸ್ಪರ್ಧಿಗಳಿಂದ ಆದಷ್ಟು ಜಾಗರೂಕತೆಯಿಂದ ಇರಿ. ನಿಮ್ಮ ಚಿಕ್ಕ ನಿರ್ಲಕ್ಷ್ಯವೂ ಬಹುದೊಡ್ಡ ದಂಡ ತೆರುವಂತೆ ಮಾಡಿಬಿಡಬಹುದು. ತಾಯಿ ಮನೆಯಿಂದ ಆಸ್ತಿಯು ನಿಮ್ಮನ್ನು ಅರಸಿ ಬರಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವ ಸಂಪಾದಿಸಲಿದ್ದೀರಿ.

ಮೀನ : ಇಂದು ನೀವು ಅನೇಕ ಸಾಲಗಳಿಂದ ಮುಕ್ತಿ ಪಡೆಯಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಕಾದಿದೆ. ಗರ್ಭಿಣಿಯರು ಆದಷ್ಟು ಜಾಗೃತೆಯಿಂದ ಇರಬೇಕು. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರು ಸಂಭವ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಇರಲಿದೆ.

Leave a Reply

Your email address will not be published. Required fields are marked *

error: Content is protected !!