ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಕರೆ : ಡಾ.ಎಂ.ಸಿ.ಕೃಷ್ಣ

ತುಮಕೂರು: ಇತ್ತೀಚಿನ ದಿನಗಳಲ್ಲಿ ನೀರು ಸಂಗ್ರಹ ತೊಟ್ಟಿಯಲ್ಲಿ ಸುಚಿತ್ವವನ್ನು ಕಾಪಾಡುವುದರ ಜೊತೆಗೆ ತಮ್ಮ ತಮ್ಮ ಮನೆ, ಗ್ರಾಮಗಳಲ್ಲಿ ಪರಿಸರ ಸ್ವಚ್ಛತೆವಾಗಿ ಇಟ್ಟುಕೊಂಡರೆ ಯಾವುದೇ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಅವಕಾಶವಿರುವುದಿಲ್ಲ. ಕೋವಿಡ್-19 ನಿರ್ವಹಣೆಯ ಒತ್ತಡದ ಮಧ್ಯೆಯೂ ರೋಗ ವಾಹಕ ಜೀವಿಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ಯೂ ಹಾಗೂ ಚಿಕುಂಗೂನ್ಯದಂತಹ ಕಾಯಿಲೆಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯು ಮುಂಚೂಣಿಯಲ್ಲಿದೆ ಎಂದು ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣರವರು ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ಇನ್ಸ್‌ಟ್ಯೂಟ್ ಅಫ್ ಪ್ಯಾರಾಮೆಡಿಕಲ್‌ನ ಶ್ರೀದೇವಿ ಇನ್ಸ್‌ಟ್ಯೂಟ್ ಅಫ್ ಅಲೈಡ್ ಹೆಲ್ತ್ ಸೈನ್ಸ್ ತುಮಕೂರು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮದಲ್ಲಿ ಸೊಳ್ಳೆಗಳ (ಲಾರ್ವ್‌ಗಳ) ಸಮೀಕ್ಷೆಯನ್ನು ಮನೆ ಮನೆಗೆ ಭೇಟಿ ಮಾಡಿ ಸೊಳ್ಳೆಗಳ ಮರಿಗಳನ್ನು ಸಮೀಕ್ಷೆಯನ್ನು ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ದ್ವಿತೀಯ ಮತ್ತು ತೃತೀಯ ವರ್ಷದ ಡಿಪ್ಲೋಮೊ ಹೆಲ್ತ್ ಇನ್‌ಫೆಕ್ಟರ್ ಕೋರ್ಸ್ ಮತ್ತು ಲ್ಯಾಬ್ ಟೆಕ್ನಿಷನ್ ಕೋರ್ಸ್‌ನ ಐವತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಮೆಳೆಕೋಟೆ, ಸದಾಶಿವನಗರ, ನಾಜರಾಬಾದ್, ಕುರಿಪಾಳ್ಯದ ಮನೆಗಳಲ್ಲಿ ಯಶಸ್ವಿಯಾಗಿ ಮನೆ ಮನೆಗೆ ಭೇಟಿ ನೀಡಿ ಸೊಳೆಗಳ (ಲಾರ್ವ್‌ಗಳ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರು.


ಕಾರ್ಯಕ್ರಮಕ್ಕೆ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಡಾ.ಎಂ.ಎಸ್. ಪಾಟೀಲ್‌ರವರು ಶುಭ ಹಾರೈಸಿದ್ದರು.

ಕಾರ್ಯಕ್ರಮದಲ್ಲಿ ಸೊಳ್ಳೆಗಳ (ಲಾರ್ವ್‌ಗಳ) ಸಮೀಕ್ಷೆಯನ್ನು ಮನೆ ಮನೆಗೆ ಭೇಟಿ ಮಾಡಿ ಸೊಳ್ಳೆಗಳ ಮರಿಗಳನ್ನು ಸಮೀಕ್ಷೆಯಲ್ಲಿ ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲರಾದ ಡಾ.ಸಿ.ಪಿ.ಚಂದ್ರಪ್ಪ, ಕಾರ್ಯಕ್ರಮದಲ್ಲಿ ಡಾ.ಪಾಳ್ಯ ಮೊಹಮ್ಮದ್ ಮೊಹಿದ್ದೀನ್, ಗಂಗಮ್ಮ, ಹಾಗೂ ವಿನಯ್ ಮುಂತಾದರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!