ತುಮಕೂರು ಮಹಾನಗರ ಪಾಲಿಕೆಯ ಗೇಟ್ ತೆಗೆಸಿದ ಕನ್ನಡಪರ ಸಂಘಟನೆಗಳು

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಪೂರ್ವ ದ್ವಾರವು ಕಳೆದ ಮೂರ್ನಾಲ್ಕು ವರ್ಷಗಳಿಂದ ಮುಚ್ಚಿತ್ತು ಇದರಿಂದ ಪಾಲಿಕೆಗೆ ಕೆಲಸ ನಿಮಿತ್ತ ಆಗಮಿಸುವ ಸಾರ್ವಜನಿಕರು ಸೇರಿದಂತೆ ಹಲವರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು.

ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಕನ್ನಡ ಸೇನೆ ಹಾಗೂ ದಲಿತ ಸಂಘಟನೆಗಳ ವತಿಯಿಂದ ಪಾಲಿಕೆ ಆವರಣದಲ್ಲಿ ತಮಟೆ ಚಳುವಳಿ ನಡೆಸಿ ಪೂರ್ವ ದ್ವಾರದ ಗೇಟನ್ನು ತೆರೆಯಲು ಪ್ರತಿಭಟನೆ ನಡೆಸಿದರು.

ಕನ್ನಡ ಸೇನೆಯ ಧನಿಯ ಕುಮಾರ್, ದಲಿತ ಸಂಘಟನೆಯ ಪಿ. ಎನ್ ರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಾದ ಚಂದ್ರಶೇಖರ್ ಗೌಡ ಸೇರಿದಂತೆ ಹಲವು ನಾಯಕರು ತಮಟೆ ಚಳುವಳಿ ನಡೆಸುವ ಮೂಲಕ ತುಮಕೂರು ಮಹಾನಗರ ಪಾಲಿಕೆಯ ಪೂರ್ವ ದ್ವಾರವನ್ನು ತೆರೆಯಲು ಪ್ರತಿಭಟನೆ ನಡೆಸಿದರು.


ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ಮಹಾನಗರ ಪಾಲಿಕೆ ಕಮಿಷನರ್ ರೇಣುಕಾ ರವರು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಯವರ ಒತ್ತಡಕ್ಕೆ ಮಣಿದು ಕೂಡಲೇ ಸಾರ್ವಜನಿಕರ ಅನುಕೂಲಕ್ಕಾಗಿ ಪೂರ್ವ ದ್ವಾರದ ಗೇಟ್ ಅನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದರು .

ಇದೇ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಕಮಿಷನರ್ ರೇಣುಕಾ ರವರು ಇನ್ನು ಕಳೆದ ಕಮಿಷನರ್ ಅವಧಿಯಿಂದಲೂ ಪೂರ್ವ ದ್ವಾರದ ಗೇಟ್ ಮುಚ್ಚಿತ್ತು ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಗೇಟನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆಗೆಯಲಾಗುವುದು ಎಂದರು ಇನ್ನು ಸಂಘಟನೆಗಳು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಮುಂದಿನ ದಿನದಲ್ಲಿ ಪಾಲಿಕೆ ಆವರಣದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ದನಿಯಕುಮಾರ್ ಮಾತನಾಡಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಲಿಕೆಗೆ ಆಗಮಿಸುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಗಮನಹರಿಸಲಿಲ್ಲ ಹಾಗಾಗಿ ಇಂದು ಪ್ರತಿಭಟನೆಯ ಮೂಲಕ ಸಾರ್ವಜನಿಕರ ಅನುಕೂಲಕ್ಕಾಗಿ ಗೇಟನ್ನು ತೆರೆಯಲಾಗಿದ್ದು ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಪ್ರತಿಭಟನೆಯಲ್ಲಿ ನಾಗೇಶ್, ಕನ್ನಡ ಸೇನೆ ಹಾಗೂ ದಲಿತ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!