ತುಮಕೂರಿನ ವಿಜೇತ ಇಂತಾಫ್ ಅಲಿಗೆ ಬೈಕ್ ಕೀ ನೀಡಿ ಗೌರವಿಸಿದ – ಮಹೇಂದ್ರ ಸಿಂಗ್ ಧೋನಿ

ತುಮಕೂರು :- ಜ್ಞಾನಕ್ಕೆ ಗಡಿಯಿಲ್ಲ, ಗುಣಕ್ಕೆ ಮತ್ಸರವಿಲ್ಲ ಎಂಬಾಂತೆ ಎಲ್ಲರಲ್ಲಿ ಒಂದಾಗಿ ಬೆಳೆಯುವ ಬೆಳಗುವ ಸಿರಿಯೇ ನಾಗರಿಕತೆ. ಗೋಡೆಗೆ ಯಾವುದೋ ಒಂದು ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಅದರೆ ಇಂದು ಬಣ್ಣಗಳಲ್ಲೂ ವಿನ್ಯಾಸವನ್ನು ರೂಪಿಸುವುದು ಹೊಸ ಟ್ರೆಂಡ್. ಒಂದೇ ಕೋಣೆಯ ಗೋಡೆ ಅರ್ಧದಷ್ಟು ಒಂದು ಬಣ್ಣ ಬಳಿದರೆ, ಅದಕ್ಕೆ ವಿರುದ್ದವಾದ ಬಣ್ಣಗವನ್ನು ಇನ್ನೂ ಅರ್ಧ ಗೋಡೆಗೆ ಬಳಿಯುತ್ತಾರೆ. ಇದು ಹೊಸತೊಂದು ವಿನ್ಯಾಸವನ್ನು ರೂಪಿಸುತ್ತದೆ. ಯಾವ ಬಣ್ಣ ಯಾವ ಗೋಡೆಗೆ ಬೇಕು ಎಂದು ನಿರ್ಧರಿಸಿ ಕೆಲಸ ಕೆಲಸಮಾಡಬೇಕಾಗಿರುತ್ತದೆ.

ಈ ದೃಷ್ಟಿಯಿಂದ ಇಂಡಿಗೋ ಕಂನಿಯು ಭಾರತ ದೇಶಾದ್ಯಂತ ಇಂಡಿಗೋ ಗ್ರೇಟ್ ಇಂಡಿಯನ್ ಪೇಂಟರ್ ಚಾಲೆಂಜ್ ಎಂಬ ಒಂದು ಸ್ಪರ್ಧೆಯನ್ನು ಆಯೋಜಿಸಿ ಸದರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದ್ವಿ ಚಕ್ರ ವಾಹನವನ್ನು ಬಹುಮಾನವಾಗಿ ನೀಡಲಾಗುವುದು ಮತ್ತು ಸದರಿ ಬಹುಮಾನವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಂದ ವಿಘ್ನಾಪನೆಯನ್ನು ಹೊರಡಿಸಲಾಯಿತು. ಈ ಸ್ಪರ್ಧೆಯಲ್ಲಿ ದೇಶಾದದ್ಯಂತ ಸಾವಿರಾರು ಜನರು ಭಾಗವಹಿಸಿ ತಮ್ಮ ಕಲಾಕೃತಿಯನ್ನು ಪ್ರದರ್ಶಿಸಿದರು ಅದರಲ್ಲಿ ದೇಶಾದ್ಯಂತ 20 ಜನ ಪೈಂಟರ್‌ಗಳು ಮಾತ್ರ ಆಯ್ಕೆಯಾಗಿರುತ್ತಾರೆ ಅದರಲ್ಲಿ ಕರ್ನಾಟಕ ರಾಜ್ಯಕ್ಕೆ ತುಮಕೂರು ನಗರದ ಶಾಂತಿನಗರದ ವಾಸಿಯಾದ ಇಂತಾಫ್ ಅಲಿರವರು ವಿಜೇತರಾಗಿ ಆಯ್ಕೆಯಾಗಿರುತ್ತಾರೆ.

ಈ ಪ್ರಯುಕ್ತ ಇಂಡಿಗೋ ಕಂಪನಿಯು ಇತ್ತೀಚೆಗೆ ಮುಂಬೈನ ರಾಜ್‌ಕುಮಾರ್ ಸ್ಟುಡಿಯೋದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ. ಮಹೇಂದ್ರ ಸಿಂಗ್ ಧೋನಿರವರು ತುಮಕೂರಿನ ಇಂತಾಫ್ ಅಲಿರವರಿಗೆ ಕರ್ನಾಟಕದ ನಂ 1 ಪೈಂಟರ್ ಎಂದು ಬಿರುದು ನೀಡಿ ಇಡಿಗೋ ಕಂಪನಿಯು ಮಹೇಂದ್ರ ಸಿಂಗ್ ಧೋನಿ ರವರಿಂದ ದ್ವಿ ಚಕ್ರ ವಾಹನದ ಕೀಯನ್ನು ಬಹುಮಾನವಾಗಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಂಡಿಗೋ ಪೇಂಟ್ಸ್ ಎಂ.ಡಿ ಹೇಮಂತ್ ಜಲನ್, ನಂದಕಿಶೋರ್ ಶರ್ಮಾ, ರಘುವೀರ್ ಕೇಸರಿ, ಟ್ರಾವೆಲ್‌ನ ಲಕ್ಷ್ಮಣ್ ರೆಡ್ಡಿ ಮತ್ತು ಅಮೇಯಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!