ತುಮಕೂರು: ಸಂಶೋಧನಾ ಪುಸ್ತಕಗಳಲ್ಲಿ ಪ್ರಕಟವಾಗುವ ವಿಷಯಗಳು ಅಧಿಕೃತ ಮಾಹಿತಿ ಸ್ಪಷ್ಟವಾಗಿ ದಾಖಲಿಸುವುದರಿಂದ ಭವಿಷ್ಯದ ಸಂಶೋಧನೆಗಳಿಗೆ ಮತ್ತು ಸಂಶೋಧಕರಿಗೆ ಉತ್ತಮ ಮಾಹಿತಿ ಮೂಲಗಲಾಗುತ್ತವೆ. ಭವಿಷ್ಯದ ಆಲೋಚನೆಗಳನ್ನು ಮಾಡಲು ಸಮರ್ಥ ವೇದಿಕೆಯನ್ನು ನಿರ್ಮಿಸುತ್ತವೆ ಎಂದು ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಡಾ. ಕೆ ಕರುಣಾಕರ್ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಟ್ಟ ’ ಸಾಹೇ ವಿಶ್ವ ವಿದ್ಯಾಲಯ ಪ್ರಕಟಿಸುತ್ತಿರುವ ’ಬಹುಶಿಸ್ತೀಯ ಸಂಶೋಧನಾ ಪುಸ್ತಕ’ ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಶೋಧನಾ ಪುಸ್ತಕಗಳಲಿ ಒಳಗೊಂಡಿರುವ ವಿಷಯಗಳು ಆಳವಾದ ಅಧ್ಯಯನದಿಂದ ಪ್ರಕಟವಾಗಿತ್ತವೆ. ಮುಂದಿನ ಸಂಶೋಧನೆಗಳಿಗೆ ಬಳಸಲು ಸರಿಯಾದ ಮತ್ತು ಪ್ರಮುಖ ಮೂಲಗಳಾಗಿರುತ್ತವೆ. ಪಾಂಡಿತ್ಯಪೂರ್ಣ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿ ಅಧಿಕೃತ ಮಾಹಿತಿಯನ್ನು ಒಳಗೊಂಡಿರುತ್ತವೆ. ವಿಷಂiiವಾರು ತಜ್ಞರ ಅಭಿಪ್ರಾಯಗಳ ಸಮಗ್ರ ಅಂಶಗಳು ದೊರಕುವುದರಿಂದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಶೋಧನಾ ಪುಸ್ತಕ ಸಂಪಾದಕರಾದ ಡಾ.ರಂಗರಾಜು, ಪುಸ್ತಕ ಪ್ರಕಟಣಾ ಸಮಿತಿಯ ಸದಸ್ಯರಾದ ಪ್ರೊ ಚಂದ್ರಶೇಖರ್, ಪ್ರೊ. ಶೇಷಾದ್ರಿ, ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್, ಉದಯಕುಮಾರ್, ಆರ್ ಸುಮಾ, ತಿಲಕ್, ಮಾಧ್ಯಮ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಉಪಸ್ಥಿತರಿದ್ದರು.
ಈ ಸಂಶೋಧನ ಪುಸ್ತಕದ ಪುಟ ಮತ್ತು ವಿನ್ಯಾಸವನ್ನು ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳೇ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.