ವಾರ್ಷಿಕೋತ್ಸವ ಸಂಭ್ರಮ – ತನುಶ್ರೀ ಪ್ರಕಾಶನ, ಸೂಲೇನಹಳ್ಳಿ

ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಸಮಾರಂಭವನ್ನು  ಚಿತ್ರದುರ್ಗ ನಗರದ ರೋಟರಿ ಬಾಲ ಭವನದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ಪುಸ್ತಕ ಲೋಕಾರ್ಪಣೆ, ಪುಸ್ತಕ ಪರಿಚಯ, ಸಂಸ್ಥೆಯ ಲಾಂಛನ ಬಿಡುಗಡೆ, ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ತನುಶ್ರೀ ರತ್ನ ಪ್ರಶಸ್ತಿಗಳನ್ನು ಹಾಗೂ ಸ್ಥಳೀಯ ಸಾಧಕರಿಗೆ ಸನ್ಮಾನ ಮುಂತಾದ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಚೆಲುವರಾಜ್ ಅಧ್ಯಕ್ಷರು ರೋಟರಿ ಕ್ಲಬ್ ಇವರು ವಹಿಸಿದ್ದರು. ಕಾರ್ಯಕ್ರಮ ಉಧ್ಘಾಟನೆ ಶ್ರೀಯುತ ಹಿಪ್ಪರಗಿ ಸಿದ್ದರಾಮ ಸಾಹಿತಿಗಳು ಮತ್ತು ಸಂಘಟಕರು ಗಣಕರಂಗ ಧಾರವಾಡ ವಹಿಸಿ ನೆರವೇರಿಸಿದರು. ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಎಸ್. ರಾಜುಕವಿ ಸೂಲೇನಹಳ್ಳಿ ಅವರು ತನುಶ್ರೀ ಪ್ರಕಾಶನ ಸಂಸ್ಥೆಯ ಧ್ಯೇಯ, ಉದ್ದೇಶಗಳನ್ನು ಅಚ್ಚುಕಟ್ಟಾಗಿ ವಿವರಿಸಿದರು. ಶ್ರೀ ಕೆ. ಶ್ರೀಧರ್ (ಸಿರಿ) ಇವರು ತನುಶ್ರೀ ಪ್ರಕಾಶನ ಸಂಸ್ಥೆ ಹಾಗೂ ಪಧಾದಿಕಾರಿಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿ. ಜೆ. ತಿಪ್ಪೇಸ್ವಾಮಿ ಪತ್ರಕರ್ತರು ಚಳ್ಳಕೆರೆ, ಶ್ರೀನಿವಾಸ್ ಮಳಲಗಿ ಕಾರ್ಯದರ್ಶಿಗಳು ಪುಷ್ಪವಲ್ಲಿ ಎನ್. ಎಂ. ಮುಖ್ಯೋಪಾಧ್ಯಾಯರು ಎಸ್. ಜೆ. ಎಂ. ಶಾಲೆ ಬಿಟ್ಟ ಚಿತ್ರದುರ್ಗ ಮುಂತಾದವರು ಉಪಸ್ಥಿತರಿದ್ದರು.

ಕು. ಪ್ರತಿಭಾ ಮರಗೋಳ್ ಕಲಬುರಗಿ ಅವರ ಚೊಚ್ಚಲ ಕವನ ಸಂಕಲನ ‘ನಾ ಕಂಡ ಕನಸು ಮತ್ತು ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ’ ಪಿಸುಗುಡುವ ಹಕ್ಕಿ ‘ಎಂಬ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು.
ಪುಸ್ತಕ ಲೋಕಾರ್ಪಣೆಯನ್ನು ಶ್ರೀಯುತ ಡಾ. ನಲ್ಲಿಕಟ್ಟೆ ಸಿದ್ದೇಶ್ ಪ್ರಾಧ್ಯಾಪಕರು ನೇರವೇರಿಸಿದರು. ನಂತರ ಕಾರ್ಯಕ್ರಮದಲ್ಲಿ ‘ನಾ ಕಂಡ ಕನಸು’ ಕೃತಿಯ ಕುರಿತು ಡಾ. ಸಿದ್ದೇಶ್ ಕಾತ್ರಿಕೆಹಟ್ಟಿ ಅವರು ಮತ್ತು ‘ಪಿಸುಗುಡುವ ಹಕ್ಕಿ’ ಕವನ ಸಂಕಲನ ಕುರಿತು ವರುಣ್ ರಾಜ್ ಜಿ ಅವರು ಮಾತನಾಡಿದರು.

ತನುಶ್ರೀ ಪ್ರಕಾಶನ ಸೂಲೇನಹಳ್ಳಿ ವತಿಯಿಂದ ನೀಡುವ ರಾಜ್ಯ ಪ್ರಶಸ್ತಿಗಳಿಗೆ ಆಯ್ಕೆ ಆದ ಸಾಧಕರಿಗೆ ತನುಶ್ರೀ ಕಲಾ ರತ್ನ ಪುರಸ್ಕಾರ, ಕಾವ್ಯ ರತ್ನ ಪುರಸ್ಕಾರ, ತನುಶ್ರೀ ಜೀವ ಸಮ್ಮಾನ ರಾಜ್ಯ ಪ್ರಶಸ್ತಿ, ತ್ರಿವೇಣಿ ರತ್ನ ಪ್ರಶಸ್ತಿ ಹಾಗೂ ಉದಯೋನ್ಮುಖ ಕಲಾ ಚೇತನಾ ಪ್ರಶಸ್ತಿ ಮತ್ತು ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಮಧ್ಯಾಹ್ನದ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸು ೪೦ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಯುತ ಮರಿಕುಂಟೆ ತಿಪ್ಪಣ್ಣ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಅಂಜನ್ ಕುಮಾರ್ ರಾಜ್ಯಾಧ್ಯಕ್ಷರು ವಿಚಾರ ಮಂಟಪ ಸಾಹಿತ್ಯ ವೇದಿಕೆ ತುಮಕೂರು, ಷಕೀಬ್ ಕಣ್ದ್ಮನೆ ನವಿಲೇಹಾಳ್ ಉಸ್ತುವಾರಿ ಸಂಚಾಲಕರು, ರುಜುವಾನ್ ಕೆ. ಹೊಳಲ್ಕೆರೆ ಯುವ ಕವಿಗಳು ಮುಂತಾದವರು ಉಪಸ್ಥಿತರಿದ್ದರು. ಉದಯ್ ಬಡಿಗೇರ್ ಮೈದೂರು, ಲಿಂಗರಾಜ್ ತಿಮ್ಮನಹಳ್ಳಿ, ಎಂ. ಚಿದಾನಂದ ಮೂರ್ತಿ ನೇರ್ಲಹಳ್ಳಿ, ಮುಂತಾದ ಪಧಾದಿಕಾರಿಗಳು ಕಾರ್ಯಕ್ರಮವನ್ನು‌ಅಚ್ಚುಕಟ್ಟಗಿ ನಿರ್ವಹಿಸಿದರು.

ನಾಡಿನ ಹಿರಿಯ, ಕಿರಿಯ ಹೆಸರಾಂತ ಲೇಖಕ, ಸಾಹಿತಿ, ಚಿಂತಕರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ತನುಶ್ರೀ ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಶ್ರೀರಾಜು ಸೂಲೇನಹಳ್ಳಿ ಇವರಿಗೆ ಶುಭಾಶಯಗಳನ್ನು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!