ಊಟದಲ್ಲಿ ಏನೇ ಹೆಚ್ಚು ಕಮ್ಮಿಯಾದರೆ ಆ್ಯಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ತುಂಬಾನೆ ಇರಿಟೇಟ್ ಆಗುತ್ತದೆ. ಈ ಸಮಸ್ಯೆ ಯಾಕೆ ಬರುತ್ತದೆ? ಅಷ್ಟಕ್ಕೂ ಆಸಿಡಿಟಿ ಎಂದರೇನು? ಇದರ ಲಕ್ಷಣಗಳೇನು? ಸುಲಭ ವಿಧಾನದ ಮೂಲಕ ಹೇಗೆ ಆಸಿಡಿಟಿ ಸಮಸ್ಯೆ ನಿವಾರಣೆ ಮಾಡುವುದು ?
ದೇಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ (HCL) ಉತ್ಪತ್ತಿಯಾಗುತ್ತದೆ, ಇದು ಆಹಾರವನ್ನು ವಿಭಜಿಸುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಹೊಟ್ಟೆಉಬ್ಬರವು ಜಠರದ ಗ್ರಂಥಿಗಳಲ್ಲಿ ಈ ಆಮ್ಲವನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ; ಆಮ್ಲವು ನಿರ್ಜಲೀಕರಣ, ಆಲ್ಕೋಹಾಲ್, ಒತ್ತಡ ಅಥವಾ ಆಹಾರ ಅಭ್ಯಾಸಗಳಂತಹ ಪ್ರಚೋದನೆಗಳಿಂದಾಗಿ ಈ ಆಮ್ಲವು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಆಮ್ಲೀಯತೆ ಉಂಟಾಗುತ್ತದೆ. ಇದನ್ನು ಆಸಿಡಿಟಿ ಎಂದು ಕರೆಯಲಾಗುತ್ತದೆ.ಆಸಿಡಿಟಿ ಲಕ್ಷಣಗಳು ಬಾಯಿಯಲ್ಲಿ ಹುಳಿ ರುಚಿ, ಬಾಯಿ ಮತ್ತು ಹೊಟ್ಟೆಯಲ್ಲಿ ಉರಿ, ಭಾರ, ಎದೆ ನೋವು, ಮಲಬದ್ಧತೆ, ಕೆಟ್ಟ ಉಸಿರಾಟ, ಚಡಪಡಿಕೆ, ಗಂಟಲಿನಲ್ಲಿ ಒಂದು ಮುದ್ದೆಯ ಇರುವಿಕೆ ಅನುಭವ,ವಾಂತಿ, ವಾಕರಿಕೆ, ಅಜೀರ್ಣ ಮತ್ತು ಪದೇ ಪದೇ ಹಿಕ್ಅಪ್ ಅಥವಾ ಬರ್ಪ್ಸ್, ದೌರ್ಬಲ್ಯ.
ಆಸಿಡಿಟಿ ಗೆ ಕಾರಣಗಳು ಕೆಟ್ಟ ಆಹಾರ ಪದ್ಧತಿಗಳು ಪ್ರಬಲ ಔಷಧೋಪಚಾರಗಳ ಅಡ್ಡ ಪರಿಣಾಮ ಒತ್ತಡ ಮತ್ತು ದೈಹಿಕ ವ್ಯಾಯಾಮದ ಕೊರತೆ ಪದೇ ಪದೆಮದ್ಯ ಸೇವನೆ ಮತ್ತು ಧೂಮಪಾನ, ನಂತರ ನಿದ್ರೆಯ ಕೊರತೆಕಾಫಿ, ಟೀ, ಸಾಫ್ಟ್ ಡ್ರಿಂಕ್ಸ್ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯುವುದು ಅಥವಾ ಪಿಜ್ಜಾ, ಕರಿದ ಆಹಾರ ಅಥವಾ ಡೋನಟ್ ಗಳಂತಹ ಕೊಬ್ಬುಯುಕ್ತ ಆಹಾರವನ್ನು ಪ್ರತಿದಿನ ಸೇವಿಸುವುದು.
ನಿಮ್ಮ ದಿನನಿತ್ಯದ ಬದುಕಲ್ಲಿ ಸಣ್ಣ ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ನೀವು ಜೀವನಪರ್ಯಂತ ಆರೊಗ್ಯಕರವಾಗಿ ಇರಬಹುದು. ಆಮ್ಲದ ಹುಳಿ-ಹುಳಿ ಇಲ್ಲದ ಸಹಜ ಸುಂದರ ಜೀವನ ನಿಮ್ಮದಾಗಿಸಿಕೊಳ್ಳಿ!!
+ತಂಪು ಪಾನೀಯ ಮತು ಕೆಫೀನ್ಯುಕ್ತ ಪಾನೀಯಗಳನ್ನು ಸೇವಿಸಬೇಡಿ.
+ಪ್ರತಿದಿನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
+ಪ್ರತಿದಿನ 10-12 ಗ್ಲಾಸ್ನಷ್ಟು ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ವಾಯು ಮತ್ತು ಆಸಿಡಿಟಿಯಂತಹ ರೋಗ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.
+ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಎಳನೀರು ಕುಡಿಯಿರಿ ಅದು ಅಸಿಡಿಟಿಯನ್ನು ಶಮನಗೊಳಿಸಿ, ಜೀರ್ಣಾಂಗವ್ಯೂಹವನ್ನು ಶಾಂತಗೊಳಿಸುತ್ತದೆ.
+ರಾತ್ರಿಯ ಊಟವನ್ನು ನೀವು ನಿದ್ದೆ ಹೋಗುವುದಕ್ಕೆ 2 ರಿಂದ 3 ಗಂಟೆ ಮೊದಲು ಮುಗಿಸಿಬಿಡಿ.
+ಎರಡು ಊಟಗಳ ನಡುವೆ ದೀರ್ಘ ಅಂತರವಿರುವುದು ಅಸಿಡಿಟಿ ಕಾಣಿಸಿಕೊಳ್ಳಲು ಇರುವ ಮತ್ತೂಂದು ಕಾರಣ. ಮಧ್ಯೆ ಮಧ್ಯೆ ಸಣ್ಣ ಸಣ್ಣ ಪ್ರಮಾಣದಲ್ಲಿ ನಿಯುತವಾಗಿ ಊಟ ಸೇವಿಸಿ.
ಉಪ್ಪಿನಕಾಯಿ, ಮಸಾಲೆ ಚಟ್ನಿ, ವಿನೇಗರ್ ಇತ್ಯಾದಿಗಳನ್ನು ಸೇವಿಸಬೇಡಿ
+ಯೋಗ , ದ್ಯಾನ ಅಥವಾ ಇತರ ಒತ್ತಡ- ನಿವಾರಕ ಚಟುವಟಿಕೆಗಳು ಅಸಿಡಿಟಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬಹಳ ಸಹಕಾರಿ ಆಗಬಹುದು.
+ಕರಿದ ಪದಾರ್ಥ, ಕೊಬ್ಬುಯುಕ್ತ ಆಹಾರ, ಹಾಳುಮೂಳು ಆಹಾರ ಮತ್ತು ಚಾಕೊಲೇಟ್ಗಳನ್ನು ಸೇವಿಸಬಾರದು.
+ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ – ಉದಾ: ಅನ್ನ – ಇಂತಹ ಆಹಾರಗಳಲ್ಲಿ ಆಮ್ಲವು ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತದೆ.
+ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮತ್ತು ಹೊರಗಡೆ ಆಹಾರ ಸೇವಿಸುವುದನ್ನು ತಪ್ಪಿಸಿಕೊಳ್ಳಿ.
+ಸಿಗರೇಟು, ಆಲ್ಕೋಹಾಲ್ ಮತ್ತು ಗ್ಯಾಸ್ ತುಂಬಿಸಿರುವ ಪಾನೀಯಗಳನ್ನು ದೂರ ಇಡಿ.