ತುಮಕೂರು- ನಗರದಲ್ಲಿ ಅರುಂಧತಿ ಲಾಲ್ ರವರು ಆಯೋಜಿಸಿದ್ದ ವಿಂಗ್ಸ್ ಫ್ಯಾಷನ್ ಇವೆಂಟ್ಸ್ನಲ್ಲಿ 7 ವರ್ಷದ ಬಾಲಕಿ ಎಸ್. ಸಂಸ್ಕೃತಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಕ್ಯಾತ್ಸಂದ್ರದ ಗಿರಿನಗರದಲ್ಲಿರುವ ಕೆ.ಎಸ್. ಸುರೇಶ್ ಮತ್ತು ಅಂಬಿಕಾ ದಂಪತಿಯ ಪುತ್ರಿ ಸಂಸ್ಕೃತಿ ಓದಿನಲ್ಲೂ ಮುಂದಿದ್ದು, ಜಿಮ್ನಾಸ್ಟಿಕ್, ಚಲನಚಿತ್ರದ ಡೈಲಾಗ್ಸ್, ದೇವರ ಶ್ಲೋಕ, ಹಾಡು, ನೃತ್ಯ ಸೇರಿದಂತೆ ಬಹುತೇಕ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ಬಾಲಕಿ ಸಂಸ್ಕೃತಿ ಪ್ರೂಡೆನ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಶಿಕ್ಷಕರು ಬಾಲಕಿಯನ್ನು ಅಭಿನಂದಿಸಿದ್ದಾರೆ.