ವೇದಾದ್ಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

 

ಕೆ. ಆರ್. ಎಸ್. ಸಂಸ್ಕೃತ ಮತ್ತು ವೇದಾಧ್ಯಯನ ಅಕಾಡೆಮಿ, ತುಮಕೂರು ವತಿಯಿಂದ ಶ್ರೀ ಶಂಕರ ಪ್ರಾರ್ಥನಾ ಮಂದಿರ, ಕ್ಯಾತ್ಸಂದ್ರ ಇಲ್ಲಿ “ಸಂಸ್ಕೃತ ಮತ್ತು ವೇದ ” ವಿಭಾಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಾಡಿನ ಅನೇಕ ವಿದ್ವನ್ ಮಣಿಗಳಿಗೆ “ವೇದವಿಭೂಷಣ ” ಮತ್ತು “ವೇದಭೂಷಣ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಆಧೋನಿಯ, ದತ್ತಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ|| ವಿದ್ಯಾಭಿನವ ಸುಬ್ರಮಣ್ಯ ಭಾರತಿ ಮಹಾಸ್ವಾಮಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿ, ಆಶೀರ್ವಚನವನ್ನು ನೀಡಿ, ಪ್ರಸ್ತುತದ ಸಮಯದಲ್ಲಿ ವೇದಾದ್ಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಇಷ್ಟು ಜನರು ಆಸಕ್ತಿವಹಿಸಿ ವೇದಗಳ ಅಧ್ಯಯನ ಮಾಡಿರುವುದು ತುಂಬಾ ಸಂತೋಷಕರದ ವಿಷಯ ಹಾಗೆಯೇ ನಮ್ಮ ಸಂಸ್ಕೃತಿ, ಅಧ್ಯಯನವನ್ನು ಉಳಿಸಿ ಬೆಳಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ, ಈ ನಿಟ್ಟಿನಲ್ಲಿ ಯುವ ಪೀಳಿಗೆಯವರು ವ್ಯಾಸಂಗ ಮಾಡಬೇಕು ಎಂದು ಹಿತವಚನ ಹೇಳಿದರು.

 

Leave a Reply

Your email address will not be published. Required fields are marked *

error: Content is protected !!