ವರಾಹ ಮಿಹಿರ

ವರಾಹ ಮಿಹಿರ ಕ್ರಿ.ಶ 6 ರಲ್ಲಿ ಜೀವಿಸಿದ್ದ ಒಬ್ಬ ಪ್ರಕಾಂಡ ಪಂಡಿತ. ಇಂದಿನ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಆದಿತ್ಯವಾಸ ಎಂಬುವವರ ಮಗನಾಗಿ ಕ್ರಿ.ಶ 499 ರಲ್ಲಿ ಜನಿಸಿದ್ದಾನೆ.ವರಾಹ ಮಿಹಿರನಿಗೆ ತಂದೆಯೇ ಮೊದಲ ಗುರು. ಆದಿತ್ಯದಾಸ ಸ್ವತಃ ಒಬ್ಬ ಜ್ಯೋತಿಷ್ಯ ಶಾಸ್ತ್ರಜ್ಞನಾಗಿದ್ದ. ಯಶೋಧರ ವಿಕ್ರಮಾದಿತ್ಯ ಆಸ್ಥಾನದಲ್ಲಿದ್ದ ಪಂಡಿತ ನವರತ್ನಗಳಲ್ಲಿ ಒಬ್ಬರಾಗಿದ್ದರು.


ವರಾಹ ಮಿಹಿರ ಜ್ಯೋತಿಷ್ಯ ಶಾಸ್ತ್ರದ ಪ್ರಕಾಂಡ ಪಂಡಿತನಾಗಿದ್ದನು. ಇವರು ರಚಿಸಿದ ಬೃಹತ್ ಸಂಹಿತಾ ಗ್ರಂಥವು ವಾಸ್ತುಶಾಸ್ತ್ರ , ಶಿಲ್ಪಶಾಸ್ತ್ರ, ದೇಗುಲಗಳ ರಚನೆ, ಅಂತರಿಕ್ಷಕಾಯಗಳ ಚಲನೆ, ಗ್ರಹಣ ಕಾಲ ಗಣನೆ, ಜ್ಯೋತಿಷ್ಯ ಶಾಸ್ತ್ರ, ಋತುಮಾನ ಬದಲಾವಣೆ, ಮೋಡ, ಮಳೆ, ವ್ಯವಸಾಯ ಪದ್ಧತಿ, ಗಣಿತ, ರತ್ನಪಡಿ ವಿದ್ಯೆ, ಸುಗಂಧ ದ್ರವ್ಯಗಳು ಇನ್ನೂ ಅನೇಕ ವಿಷಯಗಳ ವಿಶ್ವಕೋಶ.
ವರಾಹ ಮಿಹಿರ ಬಹುಭಾಷಾ ಪಂಡಿತನಾಗಿದ್ದ ಗ್ರೀಕ್ ಭಾಷೆಯನ್ನೂ ಅಭ್ಯಾಸ ಮಾಡಿದ್ದ. ದ್ವಾದಶ ರಾಶಿಯ ಸೃಷ್ಟ ಕರ್ತ, ಭವಿಷ್ಯ ಫಲ, ಖಗೋಳ ಶಾಸ್ತ್ರದ ಕರರುವಾಕ್ಕು ಲೆಕ್ಕಾಚಾರ, ವಿವಾಹ ಉಪನಯನಗಳ ಮುಹೂರ್ತಗಳಿಗೆ ಪ್ರಸಿದ್ಧನಾಗಿದ್ದನು.

ವರಾಹ ಮಿಹಿರನ ಕೃತಿಗಳು:

  • ಪಂಚ ಸಿದ್ಧಾಂತಿಕ ಕೃತಿ.
  • ಪಂಚ ಸಿದ್ಧಾಂತಿಕ ಕೃತಿಯು – ಸೂರ್ಯ ಸಿದ್ಧಾಂತ, ರೋಮಕ ಸಿದ್ಧಾಂತ, ಪೌಲಿಸಸಿದ್ಧಾಂತ, ವಶಿಷ್ಠ ಸಿದ್ಧಾಂತ ಮತ್ತು ಪೈತಾಮಹ ಸಿದ್ಧಾಂತ.
  • ಬೃಹತ್ ಸಂಹಿತಾ – ವಾಸ್ತುಶಾಸ್ತ್ರ , ಶಿಲ್ಪಶಾಸ್ತ್ರ, ದೇಗುಲಗಳ ರಚನೆ, ಅಂತರಿಕ್ಷಕಾಯಗಳ ಚಲನೆ, ಗ್ರಹಣ ಕಾಲ ಗಣನೆ, ಜ್ಯೋತಿಷ್ಯ ಶಾಸ್ತ್ರ, ಋತುಮಾನ
  • ಬದಲಾವಣೆ, ಮೋಡ, ಮಳೆ, ವ್ಯವಸಾಯ ಪದ್ಧತಿ, ಗಣಿತ, ರತ್ನಪಡಿ ವಿದ್ಯೆ, ಸುಗಂಧ ದ್ರವ್ಯಗಳು ಇನ್ನೂ ಅನೇಕ ವಿಷಯಗಳ ವಿಶ್ವಕೋಶ.
  • ಬೃಹತ್ ಜಾತಕ – ಈ ಗ್ರಂಥವು ಮಾನವನ ಭವಿಷ್ಯವನ್ನು ತಿಳಿಸುವ ಶಾಸ್ತ್ರೀಯ ಪುಸ್ತಕವಾಗಿದೆ.
  • ಗಣಿತದ ತ್ರಿಕೋನಮಿತಿ ವಿಭಾಗವನ್ನು ಆರ್ಯಭಟನಿಂದ ಮುಂದುವರೆಸಿ ಜ್ಯಾಮಿತಿಯ ಕೋಷ್ಠಕಗಳನ್ನು ಪರಿಷ್ಕರಿಸಿರುತ್ತಾನೆ.
  • ವರಾಹ ಮಿಹಿರನೇ ಪ್ಯಾಸ್ಕಲ್ ತ್ರಿಕೋನದ ಮೂಲ ಪ್ರವರ್ತಕ.
  • ಭೌತಶಾಸ್ತ್ರದ ಬೆಳಕಿನ ವಕ್ರೀಭವನದ ಬಗ್ಗೆ ಈತನ ಸಂಶೋಧನೆಗಳಿವೆ.
  • ಆರ್ಯಭಟನಂತೆ ವರಾಹ ಮಿಹಿರ ಸಹ ಭೂಮಿಯು ಗೋಲಾಕಾರವಾಗಿದೆ ಎಂದು ಪ್ರತಿಪಾದಿಸಿದ್ದಾನೆ.
  • ಬೀಜಗಣಿತದ ಅನೇಕ ಸೂತ್ರ ಮತ್ತು ಋಣಾತ್ಮಕ ಸಂಖ್ಯೆ ಬಗ್ಗೆ ಅನೇಕ ಕೊಡುಗೆಯನ್ನು ನೀಡಿದ್ದಾನೆ.

ರಚನೆ & ಸಂಗ್ರಹ : ಡಾ. ಜಿ.ಎಸ್.ಸುಧಾಕರ

Leave a Reply

Your email address will not be published. Required fields are marked *

error: Content is protected !!