ತುಮಕೂರು ಸ್ಮಾರ್ಟ್ಸಿಟಿ ಕಾಮಗಾರಿ ನಡೆಯುತ್ತಿದೆ ಎಂದು ಹೇಳುತ್ತಾ, ತುಮಕೂರು ನಗರ ಹಾಳು ಕೊಂಪೆಯಾಗಿ ಪರಿಣಮಿಸಿದೆ ಎಂದು ಬಿಜೆಪಿ ಮುಖಂಡರು, ಮಾಜಿ ಸಚಿವರಾದ ಎಸ್.ಶಿವಣ್ಣರವರು ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟೆ ಆಂಜನೇಯಸ್ವಾಮಿ ವೃತ್ತದಿಂದ, ಚಿಕ್ಕಪೇಟೆ ವೃತ್ತದವರೆಗೆ, ಗಾರ್ಡನ್ ರಸ್ತೆಯಿಂದ ಸ್ಮಶಾನದ ರಸ್ತೆಯಲ್ಲಿಯೂ ರಸ್ತೆ ಕಿತ್ತು ಹಾಕಿರುವ ಡಾಂಬರು, ಕಲ್ಲು ಇಂತಹವುಗಳನ್ನು ತಂದು ಹಾಕಿರುತ್ತಾರೆ (Old Dubries) ಇದೇ ರಿಂಗ್ ರಸ್ತೆಯಿಂದ, ಬಡ್ಡಿಹಳ್ಳಿ ಮಾರ್ಗ, ರಾಷ್ಟ್ರೀಯ ಹೆದ್ದಾರಿ ರಿಂಗ್ ರಸ್ತೆಯಿಂದ ಸಿದ್ಧರಾಮೇಶ್ವರ ಬಡಾವಣೆ, ರಾಷ್ಟ್ರೀಯ ಹೆದ್ದಾರಿಯವರೆಗೆ ಎಲ್ಲಾ ಕಡೆ ಹೀಗಾಗಿದೆ. ಇದನ್ನು ರಸ್ತೆ ಅಭಿವೃದ್ಧಿಗೆ ಉಪಯೋಗಿಸಬಹುದಾ? ಎಂದು ಸ್ಮಾರ್ಟ್ ಸಿಟಿ ಅದಿಕಾರಿಗಳಿಗೆ ನೇರ ಪ್ರಶ್ನೆಯನ್ನು ಹಾಕಿದರು.
ಮುಂದುವರೆದು ಮಾತನಾಡುತ್ತಾ, ಎಲ್ಲಾ ಇಲಾಖೆಗಳು ಒಟ್ಟು ಸೇರಿ ನಗರದಲ್ಲಿ ಸುಮಾರು 150 ಜನ ಇಂಜಿನಿಯರ್ಗಳಿದ್ದರೂ ತುಮಕೂರು ನಗರ (Garbage city) ಆಗುತ್ತಿದೆ ಎಂದರು, ಸ್ಟೇಡಿಯಂ ಹತ್ತಿರ ಒಂದು ದೊಡ್ಡ ಡಬ್ಬವಿದೆ. ಇದನ್ನು (Indoor Game) ಆಡುವ ಸ್ಟೇಡಿಯಂ ಅನ್ನಬಹುದೆ ಎಂಬ ಸಂಶಯವನ್ನು ವ್ಯಕ್ತಪಡಿಸಿದರು ಅಲ್ಲದೇ ಪಕ್ಕದಲ್ಲಿ ಸುಮಾರು 1500 ಚ.ಮೀ. ಅಡಿಯುಳ್ಳ ಜಾಗವಿದ್ದು, ಅದು ಕುಸ್ತಿ ಅಖಾಡ ಮಾಡಲು ಯೋಜನೆ ರೂಪಿಸಿದ್ದಾರೆ. ಸಮರ್ಪಕವಾಗಿ 8-10 ಜನ ಕುಸ್ತಿ ಆಡಲು ಸಹ ಆಗುವುದಿಲ್ಲ, ಇದು ಅವೈಜ್ಞಾನಿಕವಾಗಿದೆ ಎಂದು ವಿರೋಧವನ್ನು ವ್ಯಕ್ತಪಡಿಸಿದರು.
ಪ್ರಸ್ತುತ ಇರುವ ಸ್ಟೇಡಿಯಂ ರಸ್ತೆ ಒತ್ತುವರಿ ಮಾಡಿ ಕ್ರೀಡಾ ಅಖಾಡ ಮಾಡುತ್ತಿದ್ದಾರೆಂದು ಗುಡುಗಿಡದರು, ಇಷ್ಟು ಸಾಲದು ಎಂಬಂತೆ ತುಮಕೂರು ಅಮಾನಿಕೆರೆಯ ಗಾಜಿನಮನೆ ಪಾರ್ಕಿಂಗ್ ಏರಿಯಾದಲ್ಲಿ ಅಂಗಡಿಗಳನ್ನು ಇಟ್ಟಿರುತ್ತಾರೆ ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು. ಇನ್ನುಳಿದಂತೆ ಡಿಡಿಪಿಐ ಕಚೇರಿ ಮುಂದೆ ಸೇತುವೆ ಕೆಳಗಿನ ಮಳಿಗೆಗಳು ಇನ್ನೂ ವಿಲೇವಾರಿ ಮಾಡಿಲ್ಲ, ತುಮಕೂರು ಅಮಾನಿಕೆರೆಯಲ್ಲಿ ಪ್ಲಾಸ್ಟಿಕ್, ಬೆಂಡು, ನೀರಿನ ಬಾಟಲಿಗಳು ಬಿದ್ದಿವೆ. ಜೊಂಡು ಬೆಳೆಯಲು ಪ್ರಾರಂಭಿಸಿದೆ-ಕಲುಷಿತವಾಗಿದೆ ಎಂದರು, ಅಲ್ಲದೇ ನಗರದ ದೊಡ್ಡ ದೊಡ್ಡ ನೀರಿನ ಚರಂಡಿಯ ಕಲುಷಿತ ನೀರು ಅಮಾನಿಕೆರೆಗೆ ಸೇರ್ಪಡೆಯಾಗುತ್ತಿದೆ ಇದನ್ನು ತಡೆಗಟ್ಟಲು ಯೋಜನೆ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಹಾಲಿ ನಗರ ನೀರು ಸರಬರಾಜು ಮಂಡಳಿ ವತಿಯಿಂದ ಎರಡನೇ ಹಂತದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಇದು ಸಮರ್ಪಕವಾಗಿಲ್ಲದ ಕಾರಣ, ಗಂಗಸಂದ್ರ, ಮೇಳೆಕೋಟೆ, ಭೀಮಸಂದ್ರ ವಸತಿ ಪ್ರದೇಶಗಳು ಮತ್ತು ಬೆಳೆ ಬೆಳೆಯುವ ಪ್ರದೇಶಗಳು ಜಮೀನುಗಳು ಕಲುಷಿತ/ ಸಂಸ್ಕರಿಸದ ಒಳ ಚರಂಡಿ ನೀರು ನುಗ್ಗಿ ಹಾಳಾಗಿದೆ. (motor, fan) ಓಡುತ್ತಿಲ್ಲ. 14ರಲ್ಲಿ 5 ಮಾತ್ರ ಚಾಲ್ತಿಯಲ್ಲಿದೆ. ಇದರಿಂದ ನೀರು ಸಂಸ್ಕರಣೆ ನಡೆಯುತ್ತಿಲ್ಲ ಎಂದರು. ಇದೇ ರೀತಿ ನಗರ ವ್ಯಾಪ್ತಿಯಲ್ಲಿನ ಕೆರೆಗಳು ಕಲುಷಿತದಿಂದ ಕೂಡಿದೆ. (ಬಡ್ಡಿಹಳ್ಳಿ, ಗುಂಡ್ಲಮ್ಮನಕೆರೆ, ಗಾರೆ ನರಸಯ್ಯನಕಟ್ಟೆ- ಇತ್ಯಾದಿ) ರಾಜ ಕಾಲುವೆಗಳು ಒತ್ತುವರಿಯಾಗಿರುವ ಕಾರಣ ತಗ್ಗು ಪ್ರದೇಶಗಳಿಂದ ಆಚೆಗೆ ನೀರು ಹರಿಯುತ್ತಿಲ್ಲ ಹಾಗೆಯೇ ನಗರದಲ್ಲಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ತುಮಕೂರು ನಗರದಲ್ಲಿ ಹೆಚ್ಚಾಗಿರುವ ಶಬ್ದಮಾಲಿನ್ಯದ ಜೊತೆಗೆ ಪರಿಸರ ಮಾಲಿನ್ಯ, ಗಿಡಗಂಟೆಗಳು ಬೆಳೆದು, ಸೊಳ್ಳೆಗಳ ಹಾವಳಿ, ಖಾಲಿ ನಿವೇಶನದಲ್ಲಿ ಕಸ ಸಂಗ್ರಹಿಸುವುದನ್ನು ತಡೆಗಟ್ಟುವುದು, ಪಾರ್ಥೇನಿಯಂ ನಿರ್ಮೂಲನೆ, ಒಳಚರಂಡಿ ಕಾಮಗಾರಿಗಳಲ್ಲಿನ ಲೋಪ ಇತ್ಯಾದಿ ಕಾರಣಗಳಿಂದ ಪರಿಸರ ಮಾಲಿನ್ಯ ಜಾಸ್ತಿಯಾಗಿದೆ ಎಂದರು.
ಇಷ್ಟೇಲ್ಲಾ ಸಾಲದು ಎಂಬಂತೆ ಕಲುಷಿತ ನೀರು, ಬಡಾವಣೆಯಲ್ಲಿನ ಮನೆಗಳಿಗೆ ಹರಿಯುವುದು, ಕಲುಷಿತ ನೀರು ಪೂರೈಕೆ, ರಸ್ತೆ ಅಗೆತದಿಂದ ಗುಂಡಿಗಳು ಬಿದ್ದು ಕೆಸರಿನ ಗದ್ದೆ, ಬಡಾವಣೆಗಳಲ್ಲಿ/ ಪ್ರಧಾನ ರಸ್ತೆಗಳಲ್ಲಿ ಚರಂಡಿ ನೀರು ಹರಿಯಲು ಸರಿಯಾಗಿ ವ್ಯವಸ್ಥೆ ಕಲ್ಪಿಸದಿರುವುದು, ಸಮನ್ವಯತೆಯಿಂದ ಕೆಲಸ ನಿರ್ವಹಿಸುತ್ತಿಲ್ಲವಾದ ಕಾರಣ ಈ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ತುಮಕೂರು ನಗರ ಶೀಘ್ರದಲ್ಲಿಯೇ ಡೆಂಗ್ಯೂ, ಮಲೇರಿಯಾ, ಚಿಕನ್ಗುನ್ಯಾ ಕಾಯಿಲೆಗೆ ತುತ್ತಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳುಅಧಿಕಾರಿಗಳು, ರಾಜಕಾರಣಿಗಳು, ಈ ದಿನಗಳಲ್ಲಿ ರಾಕ್ಷಸರ ರೀತಿ ವರ್ತಿಸುತ್ತಿದ್ದು, ಬಕಾಸುರ ಮಾದರಿಯಾಗಿದ್ದಾರೆ ಎಂಬ ಸತ್ಯಾಂಶವನ್ನು ಹೊರಹಾಕಿದರು.
ತುಮಕೂರು ನಗರದಲ್ಲಿ ಇತ್ತೀಚೆಗೆ ಮಳೆಯಿಂದ ಆಗಿರುವ ಸಮಸ್ಯೆಗಳನ್ನೂ ಸಹ ಇದೇ ಸಮಯದಲ್ಲಿ ಬಹಿರಂಗಪಡಿಸಿದರು.
25 ಮನೆಗಳು ಪೂರ್ಣವಾಗಿ ಬಿದ್ದಿವೆ, ಸುಮಾರು 50ಸಂಖ್ಯೆ ಮನೆಗಳು ಭಾಗಶಃ ಹಾನಿಯಾಗಿದೆ. ನವಿಲಹಳ್ಳಿ ಗ್ರಾಮದ ಕೆಂಪಮ್ಮನ ಮನೆ ಬಿದ್ದಿದೆ. ಅಲ್ಲೇ ವಾಸವಿದ್ದಾರೆ. ಇಂತಹ ಪರಿಸ್ಥಿತಿ ಸಾಮಾನ್ಯವಾಗಿದೆ. ನಗರದ ಸುತ್ತ ಇರುವ ಸುಮಾರು 2000 ಹೆಕ್ಟೇರ್ ತೋಟದ ಬೆಳೆಗಳು, ತರಕಾರಿ-ಹೂವು-ರಾಗಿ-ಭತ್ತ ದ್ವಿದಳ ಧಾನ್ಯದ ಬೆಳೆಗಳು ಹಾಳಾಗಿದೆ. ಉದಾ: ನವಿಲಹಳ್ಳಿಗೆ ಭೇಟಿ ನೀಡಿದಾಗ ರಾಗಿ ಮೊಳಕೆ, ಹೂವು, ತರಕಾರಿ ಹಾಳಾಗಿರುವುದು, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ, ಕೊಳಚೆ ಪ್ರದೇಶಗಳಲ್ಲಿ ಹಾಗೂ ನಗರ ಹೊರವಲಯದಲ್ಲಿ ಒಳಚರಂಡಿ ನೀರು ನುಗ್ಗಿ ಪರಿಸರ ಹಾಳಾಗಿದೆ ಎಂದರು. ನಗರಪಾಲಿಕೆ, ಕಂದಾಯ ಇಲಾಖೆ ಹಾನಿಗೊಳಗಾದ ಮನೆಗಳ ಪಟ್ಟಿ ಮಾಡಬೇಕು ಎಂದು ತಿಳಿಸಿದರು.
ಮಳೆಯಿಂದ ಹಾನಿಗೊಳಗಾದ ಮನೆ ಬೆಳೆ ಹಾಳಾಗಿರುವ ಈ ಸಮಯದಲ್ಲಿ/ ಹೆಸರಿನಲ್ಲಿ ರಾಜಕಾರಣ ಮಾಡುವುದು ಲಜ್ಜೆಗೇಡಿತನ ಎಂದರು, ನಾನು ಈ ದಿನವೂ ರೈತ, ರೈತನ ಕಷ್ಟದ ಅರಿವು ನನಗಿದೆ. ರೈತರಿಗೆ ಮುಂಗಾರಿನಿಂದ ಇಲ್ಲಿಯವರೆಗೆ ಬೆಳೆ ಸಮೀಕ್ಷೆ ಮಾಹಿತಿಗೆ ತಾಳೆಯಾಗಿಲ್ಲ. ಬೆಳೆ ಬಿತ್ತಿದಾಗಿನಿಂದ ಗೊಬ್ಬರ, ಔಷಧಿ, ಖರ್ಚಿನ ಜೊತೆಗೆ ನರೇಗಾ ಯೋಜನೆಯಲ್ಲಿ ದಿನಗೂಲಿ ಲೆಕ್ಕ ಹಾಕಿ ಅವರಿಗೆ ಪರಿಹಾರ ಕೊಡಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ವಿನಂತಿಸುತ್ತೇನೆ ಎಂದರು. ರೈತ ದೇಶದ ಬೆನ್ನೆಲುಬು, ರೈತ ಸಮುದಾಯದ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ರೈತನ ಜೀವನ ಬರಬಾದ್ದಾಗಿದೆ. ಪರಿಹಾರ ತಕ್ಷಣ ನೀಡಬೇಕಾಗಿದೆ ಎಂದು ತಿಳಿಸಿದರು. ವಿರೋಧ ಪಕ್ಷದವರು ಪರಿಹಾರ ಕೊಡಿ ಎಂದು ಹೇಳುತ್ತಾರೆ. ಸ್ಥಳ ಪರಿಶೀಲನೆ ಯಾರೂ ಮಾಡಲ್ಲ, ಸರ್ಕಾರದ ಅಂಕಿ ಅಂಶ-ಮಾಧ್ಯಮಗಳ ವರದಿ ಆಧಾರದ ಮೇಲೆ ಮಾತನಾಡುತ್ತಿದ್ದು, ಇದು ಸರಿಯಲ್ಲ, ನಾಟಕೀಯವಾಗಿದೆ. ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಕೋರಿದರು.
ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಮಾಹಿತಿ ಪ್ರಕಾರ 1.50 ಲಕ್ಷ ಹೆಕ್ಟೇರ್ ಜಮೀನಿನ ಬೆಳೆ ಹಾಳಾಗಿದೆ. ಮಳೆ ಅನಾಹುತದಿಂದ ತೊಂದರೆಯಾಗಿರುವ ನಿವಾಸಿಗಳಿಗೆ-ರೈತರಿಗೆ ಜಿಲ್ಲಾಡಳಿತ ಕೇಂದ್ರ-ರಾಜ್ಯ ಸರ್ಕಾರಗಳು ತಕ್ಷಣವೇ ಪರಿಹಾರ ನೀಡಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣರವರು ಒತ್ತಾಯಿಸಿದರು.