ಕಡಮಲಕುಂಟೆ ಕೆರೆ ಸಂಪೂರ್ಣ ಭರ್ತಿ, ಹೆಚ್ಚುವರಿ ನೀರು ನಾಗಲಮಡಿಕೆಯತ್ತ ಪಯಣ
ಕಡಮಲಕುಂಟೆ ಗ್ರಾಮದ ಅಕ್ಕಮ್ಮನಕೆರೆ ಸುಮಾರು 30 ವರ್ಷದ ನಂತರ ಕೆರೆ ತುಂಬಿ ಕೋಡಿ ಹರಿಯುತ್ತಿರುವುದನ್ನ ವೀಕ್ಷಿಸಲು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಮಕ್ಕಳು ನೀರಲ್ಲಿ ಆಟವಾಡುತ್ತಾ ಸಂತಸಪಡುತ್ತಿದ್ದಾರೆ. ಯುವಕ ಯುವತಿಯರು ಕೆರೆ ಕೋಡಿ ಮೇಲೆ ನಿಂತು ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ.
ಎತ್ತ ನೋಡಿದರೂ ಕಾಣ ಸಿಗುವ ನೀರು, ನೀರಲ್ಲಿ ಆಟವಾಡುತ್ತಿರುವ ಸಾರ್ವಜನಿಕರು ಹಾಗು ಮಕ್ಕಳು ಅಕ್ಕಮ್ಮನ ಕೆರೆಯಲ್ಲಿ ದಶಕಗಳ ಬಳಿಕ ಈ ದೃಶ್ಯ ಕಾಣಸಿಗುತ್ತಿದೆ. ಇನ್ನೊಂದೆಡೆ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದೆ. ಜೊತೆಗೆ ಪಾವಗಡ ಪಟ್ಟಣದ ಅಗಸರಕುಂಟೆಯ ನೀರು ಕೂಡಾ ನಿರಂತರವಾಗಿ ಕೆರೆಗೆ ಹರಿದು ಬರ್ತಿದೆ.
ಇಂದು ಬೆಳಿಗ್ಗೆಯಿಂದಲೇ ಕೆರೆಯ ಎರಡೂ ಕಡೆಯ ಕೋಡಿಯಲ್ಲೂ ನೀರು ಹರಿದು ಮುಂದೆ ಸಾಗುತ್ತಿದೆ. ಸುಮಾರು 115 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ, ಈ ಮೊದಲು ಎತ್ತ ನೋಡಿದರೂ ಸೀಮೆ ಜಾಲಿ ಮರಗಳೇ ಕಂಡು ಬರುತ್ತಿದ್ದವು ಆದರೆ ಈಗ ಎತ್ತ ನೋಡಿದರೂ ನೀರು ಕಾಣಿಸುತ್ತದೆ
ಇದರಿಂದ ಸಂತಸರಾದ ಗ್ರಾಮದ ಮಹಿಳೆಯರು ಗಂಗಮ್ಮ ಪೂಜೆಯನ್ನು ನೆರವೇರಿಸಿದರು