ಪಾವಗಡ: ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಶಾಲೆಯ ನವೀಕರಣ ಕಾಮಗಾರಿಗೆ ಧನಸಹಾಯ ಮಾಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಗಿರೀಶ್ ಗೌಡ ರವರು ಮಕ್ಕಳು ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿಬಹುದು, ಹಳ್ಳಿಗಾಡಿನಲ್ಲಿ ಪ್ರತಿಭೆಗಳಿಗೆ ಕೂರತೆ ಇರುವುದಿಲ್ಲ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮುರುಗೇಶಗಚ್ಚಿನಮಠ,ಸಾದಿಕ್ ಉಲ್ಲಾ ಷರೀಫ್ ರವರು ಶಾಲೆಯ ಶೌಚಾಲಯಗಳಿಗೆ ಶೀಟ್ ಗಳನ್ನು ಒದಗಿಸಿದ ಗಿರೀಶ್ ಗೌಡ, ರವಿ, ಮತ್ತು ಮೊಹಮ್ಮದ್ ಕೈಫ್ ರವರುಗಳನ್ನು ಸನ್ಮಾನಿಸಿ ಸಮಾಜದಲ್ಲಿ ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್, ಮಮತ, ಕವಿತ ಶಾಲಾಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರುಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.