ಹೊಸ ತಂತ್ರಜ್ಞಾನ ಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು

ತುಮಕೂರು: ಹೊಸ ಹೊಸ ತಂತ್ರಜ್ಞಾನ ಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಪ್ರಗತಿಪರ ರೈತ ಜಯಸಿಂಹರಾವ್ ಪೋಕಾಳೆ ಹೇಳಿದರು. ನಗರದ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಪಾಂಡುರಂಗ ಭಜನಾ ಮಂಡಳಿ ಹಾಗೂ ಭಾವಸಾರ ಯುವ ಬ್ರಿಗೇಡ್ ಭಾನುವಾರ ಆಯೋಜಿಸಿದ್ದ ಪ್ರವಚನ, ಕೀರ್ತನೆ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯೊಂದಿಗೆ ಉಪ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕಾಭಿವೃದ್ಧಿ ಹೊಂದಬಹುದು ಎಂದರು.

ಕೀರ್ತನಕಾರ ಹ.ಭ.ಪ. ಡಿ ಎನ್ ತುಕಾರಾಮ್ ಗುರೂಜಿರವರು ಮಾತನಾಡಿ ಏಕಾದಶಿಯಂದು ತುಮಕೂರಿನ ಪಾಂಡುರಂಗ ಭಜನಾ ಮಂಡಳಿಯವರು ಹಾಗೂ ವಾರ್ಕರಿ ಸಮುದಾಯದವರು ಪಂಡರಾಪುರಕ್ಕೆ ಹೋಗಿ ದೇವರ ದರ್ಶನ ಪಡೆದು ಕೀರ್ತನೆ, ಪ್ರವಚನ ನಡೆಸಿಕೊಂಡು ಬರುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಯಮದಿಂದ ಪಂಡರಾಪುರದಲ್ಲಿ ದೇಗುಲ ದರ್ಶನಕ್ಕೆ ನಿಷೇದವಿದ್ದ  ಕಾರಣದಿಂದ ಈ ಭಾರಿ ತುಮಕೂರಿನಲ್ಲಿಯೇ ಕಾರ್ಯಕ್ರಮ ಆಯೋಜಿಸುವ ಮೂಲಕ ಪಾಂಡುರಂಗನ ದರ್ಶನ ಮಾಡಿಸಿದ್ದು ಶ್ಲಾಘನೀಯ ಎಂದರು.

ಭಾವಸಾರ ಯುವ ಬ್ರಿಗೇಡ್ ನಿಂದ ಹಲವು ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮ ಗಳು ನಡೆಯುತ್ತಿದ್ದು ಇವರ ಸೇವೆ ಹೀಗೆಯೇ ಮುಂದುವರಿಯಲಿ ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ 5ನೇ ವಾರ್ಡ್ ಪಾಲಿಕೆ ಸದಸ್ಯ ಟಿ.ಎಂ. ಮಹೇಶ್ ಹೇಳಿದರು.

ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಾಗೇಶ್ ವಿ.ಬಿ. ತೇಲ್ಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದು ಅವರಲ್ಲಿ ಧಾರ್ಮಿಕ ಭಾವನೆ ಮೂಡಿಸಲು ಇಂತಹ ಕಾರ್ಯಕ್ರಮ ಗಳು ಸಹಕಾರಿಯಾಗಿವೆ. ಕಿರ್ತನೆ, ಭಜನೆಯಂತಹ ಕಾರ್ಯಕ್ರಮ ಗಳನ್ನು ಉಳಿಸಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ವೇಷಭೂಷಣ ತೊಟ್ಟು ಭಾಗವಹಿಸಿದ್ದ ಮಕ್ಕಳಿಗೆ ಯುವ ಬ್ರಿಗೇಡ್ ನಿಂದ ಪ್ರಶಂಸನ ಪತ್ರ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!