ಉಡುಪುಗಳು ಮೈಮೇಲಿರುವಾಗ ಏಕೆ ಹೊಲಿಯಬಾರದು ?

ಅಖಂಡ ಬಟ್ಟೆಗಳು ಸಾತ್ತ್ವಿಕವಾಗಿರುತ್ತವೆ ಮತ್ತು ಅನೇಕ ಕಡೆಗಳಲ್ಲಿ ಹರಿದಿರುವ ಬಟ್ಟೆಗಳು ತೊಂದರೆದಾಯಕ ಸ್ಪಂದನಗಳಿಂದ ತುಂಬಿರುತ್ತವೆ. ಹರಿದಿರುವ ಬಟ್ಟೆಗಳನ್ನು ಹೊಲಿಯುವುದು ಬಟ್ಟೆಗೆ ಅಖಂಡತ್ವವನ್ನು ಪ್ರದಾನಿಸುವ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ ಹರಿದ ಬಟ್ಟೆಗಳನ್ನು ಹೊಲಿಯುವಾಗ ದೊಡ್ಡ ಪ್ರಮಾಣದಲ್ಲಿ ರಜ-ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿ ಕಾರಂಜಿಗಳಂತೆ ಪ್ರಕ್ಷೇಪಿಸುತ್ತಿರುತ್ತವೆ. ಆದುದರಿಂದ ಬಟ್ಟೆಗಳನ್ನು ಹೊಲಿಯುವಾಗ ಅವು ದೇಹದಿಂದ ಆದಷ್ಟು ದೂರವಿರಬೇಕು. ಇಲ್ಲವಾದರೆ ಈ ರಜ-ತಮಾತ್ಮಕ ಲಹರಿಗಳಿಂದ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಬಟ್ಟೆಗಳು ದೇಹದ ಮೇಲಿರುವಾಗ ಹೊಲಿಯಬಾರದು; ಅಂದರೆ ಬಟ್ಟೆಗಳನ್ನು ದೇಹದ ಸಮೀಪ ಹೊಲಿಯಬಾರದು.

ಹೊಲಿಯದಿರುವ (ಅಖಂಡ) ಬಟ್ಟೆಗಳನ್ನು ಧರಿಸುವುದರಿಂದ ಚೈತನ್ಯವು ದೊರಕಿ ಆಧ್ಯಾತ್ಮಿಕ ಉಪಚಾರವಾಗುತ್ತದೆ

ಅಖಂಡ ಬಟ್ಟೆಯಲ್ಲಿರುವ ಪ್ರತಿಯೊಂದು ದಾರವು ಅಖಂಡವಾಗಿರುವುದರಿಂದ ಅದರಿಂದ ಪ್ರವಹಿಸುವ ಚೈತನ್ಯ ಲಹರಿಗಳನ್ನು ಅದು ಸಂಪೂರ್ಣ ಬಟ್ಟೆಯಲ್ಲಿ ಹರಡಬಹುದು. ಆದುದರಿಂದ ಅಖಂಡ ಬಟ್ಟೆಗಳನ್ನು (ಉಡುಪುಗಳನ್ನು) ಧರಿಸುವುದರಿಂದ ದೇಹದಲ್ಲಿ ಚೈತನ್ಯವು ಹರಡಿ ಆಧ್ಯಾತ್ಮಿಕ ಉಪಚಾರವಾಗುತ್ತದೆ, ಉದಾ. ಸೀರೆಯನ್ನು ಉಟ್ಟುಕೊಳ್ಳುವುದರಿಂದ ಹೆಚ್ಚು ಪ್ರಮಾಣದಲ್ಲಿ ಆಧ್ಯಾತ್ಮಿಕ ಉಪಚಾರ ವಾಗುತ್ತದೆ. ಹೊಲಿದಿರುವ ಉಡುಪುಗಳನ್ನು ಧರಿಸುವುದರಿಂದ ಚೈತನ್ಯದ ಲಾಭವು ಕಡಿಮೆ ಪ್ರಮಾಣದಲ್ಲಾಗುತ್ತದೆ ಮತ್ತು ಆಧ್ಯಾತ್ಮಿಕ ಉಪಚಾರವೂ ಕಡಿಮೆ ಪ್ರಮಾಣದಲ್ಲಾಗುತ್ತದೆ, ಉದಾ. ಚೂಡೀದಾರ.

ಒಗೆದು ಸ್ವಚ್ಛಗೊಳಿಸಿದ ಬಟ್ಟೆಗಳನ್ನೇ ಏಕೆ ಧರಿಸಬೇಕು ?

ಒಗೆದ ಬಟ್ಟೆಗಳನ್ನು ಧರಿಸಿದ ಮೇಲೆ, ಒಗೆದ ಬಟ್ಟೆಗಳಲ್ಲಿರುವ ನೂಲಿನಲ್ಲಿ ವ್ಯಕ್ತಿಯ ಶರೀರದಲ್ಲಿನ ರಜ-ತಮ ಲಹರಿಗಳು ಆಕರ್ಷಿತ ವಾಗುತ್ತವೆ. ಬಟ್ಟೆಗಳನ್ನು ಒಗೆಯದೇ ಹಾಕಿಕೊಂಡರೆ ಬಟ್ಟೆಯಲ್ಲಿ ಆಕರ್ಷಿತವಾಗಿರುವ ರಜ-ತಮ ಲಹರಿಗಳಿಂದಾಗಿ ವ್ಯಕ್ತಿಯಲ್ಲಿನ ರಜ- ತಮವು ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯ ಸುತ್ತಲಿನ ವಾಯು ಮಂಡಲವು ಪ್ರದೂಷಿತವಾಗುತ್ತದೆ. ಇದರಿಂದ ವ್ಯಕ್ತಿ ಮತ್ತು ವ್ಯಕ್ತಿಯ ಬಟ್ಟೆಗಳ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಗಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಉಪಯೋಗಿಸಿದ ಬಟ್ಟೆಗಳನ್ನು ಒಗೆಯುವುದರಿಂದ ನೀರಿನಲ್ಲಿನ ಆಪತತ್ತ್ವಯುಕ್ತ ಈಶ್ವರೀ ಚೈತನ್ಯದಿಂದ ಬಟ್ಟೆಗಳ ಮೇಲೆ ಆಧ್ಯಾತ್ಮಿಕ ಉಪಚಾರವಾಗಿ ಅವುಗಳಲ್ಲಿನ ರಜ-ತಮವು ನಾಶವಾಗಿ ಸಾತ್ತ್ವಿಕತೆ ಹೆಚ್ಚಾಗುತ್ತದೆ.

ಇತರರು ಉಪಯೋಗಿಸಿದ ಉಡುಪುಗಳಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುತ್ತದೆ

ಇತರರು ಉಪಯೋಗಿಸಿದ ಉಡುಪುಗಳಲ್ಲಿ ಅವರ ದೇಹದಲ್ಲಿನ ಸೂಕ್ಷ್ಮ ರಜ-ತಮಾತ್ಮಕ ಸ್ಪಂದನಗಳು ಮತ್ತು ವಾಸನೆಯ ತೊಂದರೆದಾಯಕ ಸ್ಪಂದನಗಳಿರುತ್ತವೆ. ಈ ಸ್ಪಂದನಗಳು ಉಡುಪುಗಳ ಮಾಧ್ಯಮದಿಂದ ಇತರ ಜೀವಗಳಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಮೊದಲನೆಯ ಜೀವಕ್ಕೆ ಕೆಟ್ಟಶಕ್ತಿಗಳ ತೀವ್ರ ತೊಂದರೆಯಿದ್ದರೆ ಅವರ ಉಡುಪುಗಳನ್ನು ಉಪಯೋಗಿಸುವ ವ್ಯಕ್ತಿಗೂ ಈ ತೊಂದರೆಯಾಗುವ ಸಾಧ್ಯತೆಯಿರುತ್ತದೆ ಮತ್ತು ಇದರಿಂದ ಸಂಪೂರ್ಣ ಜೀವನ ಕೆಟ್ಟಶಕ್ತಿಗಳ ತೊಂದರೆಯಿಂದ ಪೀಡಿತವಾಗಿ ಹಾಳಾಗುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಶೇ. ೧೦೦ ರಷ್ಟು ಜೀವಗಳಿಗೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಿದೆ. ಆದುದರಿಂದ ಇತರರ ಉಡುಪುಗಳನ್ನು ಉಪಯೋಗಿಸಿ ಅವುಗಳಿಂದ ಅವರ ಹೆಚ್ಚುವರಿ ತೊಂದರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ.

 
(ಸಾತ್ತ್ವಿಕ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಓದಿ, ಸನಾತನ ಸಂಸ್ಥೆಯ ನಿರ್ಮಿಸಿದ ಗ್ರಂಥ ‘ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು ?’)

ಜಾಲತಾಣ : sanatanshop.com/

ಸಂಗ್ರಹ : ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299

Leave a Reply

Your email address will not be published. Required fields are marked *

error: Content is protected !!