ದೀಪಾವಳಿ ಅಂದರೆ ಉತ್ಸಾಹ, ದೀಪಾವಳಿ ಅಂದರೆ ಆನಂದ ಹಾಗಾಗಿ ದೀಪಾವಳಿಯನ್ನು ಕೇವಲ ಆಚರಣೆಗೆ ಸೀಮಿತವಾಗಿಡದೆ ಇದರ ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನಲೆಯನ್ನು ತಿಳಿದು ಆಚರಣೆ ಮಾಡಬೇಕು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ದೀಪಾವಳಿ ನಿಮಿತ್ತ 31 ಅಕ್ಟೋಬರ್ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶೇಷ ಆನ್ಲೈನ್ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಸುಮಾರು ಸಾವಿರಕ್ಕೂ ಅಧಿಕ ಧರ್ಮಪ್ರೇಮಿಗಳು ಈ ಸತ್ಸಂಗದ ಲಾಭವನ್ನು ಪಡೆದುಕೊಂಡರು. ಸತ್ಸಂಗದ ಉದ್ದೇಶವನ್ನು ಕರ್ನಾಟಕ ರಾಜ್ಯದ ಧರ್ಮಪ್ರಚಾರಕರಾದ ಶ್ರೀ.ಕಾಶಿನಾಥ ಪ್ರಭು ಅವರು ತಿಳಿಸಿದರು.
ಪೂಜ್ಯ ರಮಾನಂದ ಗೌಡ ಇವರ ಮಾರ್ಗದರ್ಶನದ ಅಂಶಗಳು :
- ದೀಪಾವಳಿಯೆಂದರೆ ಅಂಧಕಾರದ ಮೇಲೆ ಬೆಳಕಿನ ವಿಜಯ, ಅಸತ್ಯದ ಮೇಲೆ ಸತ್ಯದ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾಧಿಸುವುದಾಗಿದೆ ಹಾಗಾಗಿ ನಾವೆಲ್ಲರೂ ಇಂದು ದೇಶದಲ್ಲಿ ರಾರಾಜಿಸುತ್ತಿರುವ ಅಧರ್ಮ, ಅನ್ಯಾಯ, ಧರ್ಮವಿರೋಧಿ ಕೃತ್ಯಗಳು, ಧರ್ಮಹಾನಿ ಮಾಡುವ ಘಟನೆಗಳ ವಿರುದ್ಧ ಧರ್ಮಶಕ್ತಿಯ ಆಧಾರದ ಮೇಲೆ ಹೋರಾಡಿ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡುವುದೇ ನಿಜವಾದ ದೀಪಾವಳಿಯಾಗಿದೆ.
- ನಾವು ವಾಸಿಸುವ ಮನೆಯನ್ನು ಎಷ್ಟು ಸಚ್ಛ್ಚವಾಗಿ ಇಟ್ಟುಕೊಳ್ಳುತ್ತೇವೆ. ಅಷ್ಟು ಪ್ರಮಾಣದಲ್ಲಿ ಮನೆಯ ಸಾತ್ತ್ವಿಕತೆ ಹೆಚ್ಚಾಗುತ್ತದೆ, ಅಲ್ಲಿ ದೇವತೆಗಳ ಶಕ್ತಿ ಹೆಚ್ಚು ಕಾರ್ಯನಿರತವಾಗಿರುತ್ತದೆ. ಅಸ್ವಚ್ಛ ಇರುವಲ್ಲಿ ಮನೆಯ ಸಾತ್ತ್ವಿಕತೆ ಕಡಿಮೆಯಾಗುತ್ತದೆ ಮತ್ತು ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ನಾವೆಲ್ಲರೂ ಮನೆ ಸ್ವಚ್ಛತೆ ಮಾಡಿ ಸಾತ್ತ್ವಿಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯತ್ನ ಮಾಡಬೇಕಿದೆ.
- ಹೇಗೆ ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದ ನಂತರ ವೇದಾಂತ ಸೊಸೈಟಿ ಮೂಲಕ ಹಿಂದೂ ಧರ್ಮದ ಪ್ರಸಾರ ಮಾಡಿದರೋ ಹಾಗೆಯೇ ಇಂದು ಸನಾತನ ಸಂಸ್ಥೆಯು “ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ”ದ ಮೂಲಕ ಜ್ಞಾನ ಪ್ರಸಾರ ಮಾಡುತ್ತಿದೆ. ಇದರಲ್ಲಿ ಎಲ್ಲರೂ ಸಹಭಾಗ ಮಾಡಬೇಕಿದೆ.
- ದೀಪಾವಳಿಯ ಸಂಧರ್ಭದಲ್ಲಿ ನಡೆಯುವ ದೇವತೆಗಳ ವಿಡಂಬನೆ ಮತ್ತು ಪಟಾಕಿಗಳ ಮೂಲಕ ಆಗುವ ವಾಯುಪ್ರದೂಷಣೆಯನ್ನು ತಡೆಗಟ್ಟಬೇಕಿದೆ.
ಸತ್ಸಂಗದ ಕೊನೆಯಲ್ಲಿ ಸದ್ಯ ಹಲಾಲ್ ಜಿಹಾದ್ ಮೂಲಕ ನಡೆಯುತ್ತಿರುವ ಭಾರತವನ್ನು ಇಸ್ಲಾಮಿಕ್ ರಾಷ್ಟವನ್ನಾಗಿಸುವ ಷಡ್ಯಂತ್ರವನ್ನು ಅರಿತುಕೊಳ್ಳಬೇಕಾಗಿದೆ, ಇದರ ಬಗ್ಗೆ ಜಾಗೃತರಾಗಿ ಈ ಬಾರಿಯ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿಯನ್ನಾಗಿ ಆಚರಿಸಲು ಕರೆ ನೀಡಿದರು.