ಮೇಷ ರಾಶಿಯವರು ಎಲ್ಲರ ಹೊಗಳಿಕೆಗೆ ಪಾತ್ರರಾಗುವಿರಿ. ಹಣಕಾಸು ನಿವರ್ಹಣೆ ವಿಚಾರದಲ್ಲಿ ಜಾಗರುಕರಾಗಿರಬೇಕು. ಸಂಬಂಧಿಕರು, ಸ್ನೇಹಿತರಿಂದ ಶುಭ ಸುದ್ದಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.
ವೃಷಭ ರಾಶಿಯವರಿಗೆ ತಂದೆಯ ಸಹಕಾರದಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ.ಕೆಲಸ ಕಾರ್ಯಗಳು ಕೈಗೂಡಲಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.
ಮಿಥುನ ರಾಶಿಯವರು ಕೆಲಸ ಕಾರ್ಯದಲ್ಲಿ ಗೊಂದಲಕ್ಕೆ ಒಳಗಾಗುವಿರಿ. ಹಣಕಾಸು ವಿಚಾರದಲ್ಲಿ ಪರರಿಂದ ತೊಂದರೆಯಾಗಲಿದೆ. ಮದುವೆ ಪ್ರಸ್ತಾಪ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಸಿಗಲಿದೆ. ಆಯಾಸ ಉಂಟಾಗಲಿದೆ.
ಕಟಕ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರುವುದು ಉತ್ತಮ. ವ್ಯಾಪಾರ ವ್ಯವಹಾರದಲ್ಲಿ ಸ್ನೇಹಿತರು ಅಥವಾ ಇತರರ ಸಲಹೆ ಪಡೆಯುವಿರಿ. ವೃತ್ತಿ ಜೀವನದಲ್ಲಿ ಎಡವಟ್ಟುಗಳಾಗಲಿದ್ದು ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಉತ್ತಮ.
ಸಿಂಹ ರಾಶಿಯವರಿಗೆ ಆರೋಗ್ಯ ಚಿಂತೆ ಕಾಡಲಿದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಲಿದ್ದು ಸಾಲ ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದೆ. ಪ್ರೀತಿ ಪಾತ್ರರ ಮೆಚ್ಚುಗೆ ಗಳಿಸುವಿರಿ. ವೈವಾಹಿಕ ಜೀವನ ಉತ್ತಮವಾಗಿರಲಿದೆ.
ಕನ್ಯಾ ರಾಶಿಯವರು ಆಹಾರ ಸೇವನೆ ವಿಚಾರದಲ್ಲಿ ಜಾಗೃತ ವಹಿಸಬೇಕು. ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ವ್ಯಾಪಾರಿಗಳಿಗೆ ಲಾಭದ ದಿನ. ಕೆಲಸದ ಒತ್ತಡಗಳು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು.
ತುಲಾ ರಾಶಿಯವರಿಗೆ ಮಾನಸಿಕ ನೆಮ್ಮದಿ ಸಿಗಲಿದೆ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿ ಲಾಭದಾಯಕವಾಗಿರಲಿದೆ. ಮಡದಿ, ಮಕ್ಕಳೊಂದಿಗೆ ಸಂತಸದಿಂದ ದಿನ ಕಳೆಯುವಿರಿ. ಅನಿರೀಕ್ಷಿತ ಪ್ರಯಾಣವನ್ನು ಮುಂದೂಡುವಿರಿ.
ವೃಶ್ಚಿಕ ರಾಶಿಯವರಿಗೆ ಸಂತಸದ ದಿನ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ. ಹಣದ ಹರಿವು ಉತ್ತಮವಾಗಿರಲಿದೆ. ಬಾಳ ಸಂಗಾತಿಯೊಂದಿಗೆ ದಿನ ಕಳೆಯುವಿರಿ. ಮನೆಯ ವಾತಾವರಣ ಶಾಂತಿಯಿಂದ ಕೂಡಿರಲಿದೆ.
ಧನು ರಾಶಿಯವರು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಲಹೆ ಪಡೆಯುವುದು ಉತ್ತಮ. ಉದ್ಯೋಗದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಸಕಾರಾತ್ಮಕ ಆಲೋಚನೆಗಳಿಂದ ಸಮಸ್ಯೆ ಬಗೆಹರಿಯಲಿದೆ. ಒತ್ತಡ ಅಥವಾ ಆತಂಕ ನಿವಾರಣೆಯಾಗಲಿದೆ.
ಮಕರ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪರರಿಗೆ ಹಣದ ಸಹಾಯ ಮಾಡಲು ಮುಂದಾಗುವಿರಿ. ಮನೆಯ ಹಿರಿಯರಿಂದ ಶುಭ ಸಿಗುವುದರ ಜೊತೆಗೆ ಉಡುಗೊರೆ ಕೂಡ ಸಿಗಲಿದೆ. ಹೊಸ ಕೆಲಸಕ್ಕೆ ಕೈ ಹಾಕುವಿರಿ. ಸಂತಸದಿಂದ ದಿನ ಕಳೆಯುವಿರಿ.
ಕುಂಭ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಲಿದೆ. ವ್ಯಾಪಾರದಲ್ಲಿ ಉಂಟಾಗುವ ನಷ್ಟವನ್ನು ಚಾಕಚಕ್ಯತೆಯಿಂದ ಸರಿದೂಗಿಸುವಿರಿ. ಮನೆಯ ಹಿರಿಯರು ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ತೊಡಗಿದ್ದವರಿಗೆ ಕಳಂಕ ಬರಬಹುದು.
ಮೀನ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕುವಿರಿ. ಸ್ನೇಹಿತರ ನಿಮ್ಮ ಬಳಿ ಸಾಲ ಕೇಳಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಮನೆಯ ಹಿರಿಯರಿಂದ ವೈಯಕ್ತಿಕ ಸಮಸ್ಯೆಗಳು ಬಗೆಹರಿಯಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರವಾಗಿರಿ.