ರಾಜ್ಯದ ಎಲ್ಲ ಪದವಿ ಪೂರ್ವ ದ್ವಿತೀಯ ವ?ದ ವಿದ್ಯಾರ್ಥಿಗಳ ಹಿತದ ವಿರುದ್ದದಲ್ಲಿ ಮದ್ಯಂತರ ತೀರ್ಮಾನ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಣಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿ?ತ್ ಖಂಡಿಸುತ್ತದೆ.
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇತ್ತಿಚೆಗೆಯ? ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮತ್ತು ಕೋವಿಡ್ ಭಯದ ಹಿನ್ನೆಲೆಯಲ್ಲಿ ಬೋಧನಾ ಕಾರ್ಯ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸಮರ್ಪಕವಾಗಿ ನಡೆದಿರುವುದಿಲ್ಲಾ ಆದರೆ ಪಿಯು ಇಲಾಖೆಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ವಿದ್ಯಾರ್ಥಿಗಳ ಭವಿ?ದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಇಲಾಖೆಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಏಕಕಾಲಕ್ಕೆ ಪರಿಕ್ಷೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿರುವುದರಿಂದ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪಕ್ಕೆ ಇಲಾಖೆಗೆ ಕಳುಹಿಸಿ ಅವುಗಳನ್ನು ಪಡೆದುಕೊಂಡು ಮೌಲ್ಯಮಾಪನ ಕಾರ್ಯಕ್ಕೆ ಅಧ್ಯಾಪಕರನ್ನು ತೊಡಗಿಸಿಕೊಂಡರೆ ಕೋವಿಡ್ ಪರಿಸ್ಥಿತಿಯಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡೋರು ಯಾರು? ಹೊಸ ನೀತಿಗಳನ್ನು ಖಂಡಿತವಾಗಿಯೂ ಜಾರಿಗೊಳಿಸಬೇಕು ಆದರೆ ಹೊಸ ಪದ್ಧತಿಯಿಂದ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯಲ್ಲಿ ನಕಾರಾತ್ಮಕವಾದ ಪರಿಣಾಮ ಬೀಳುತ್ತೆ ಎಂಬುವುದನ್ನು ಕೂಡ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕಿತ್ತು.
ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಈ ಸಾಲಿನ ದ್ವಿತೀಯ ವ?ದ ಮೌಲ್ಯಮಾಪನ ಕಾರ್ಯ ಮತ್ತು ಪರೀಕ್ಷೆಗಳು ಹಳೆಯ ಪದ್ಧತಿಯಂತೆಯೇ ನಡೆಯಬೇಕು, ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಧ್ಯಂತರ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಮುಂದೂಡಬೇಕು ಮತ್ತು ಪಿಯು ಇಲಾಖೆಯೂ ಅಧ್ಯಾಪಕರಿಗೆ ಭೋದನೆಯನ್ನು ಹೊರತು ಪಡಿಸಿ ಬೇರೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡದೆ ಭೋಧನೆಗೆ ಮೊದಲ ಆದ್ಯತೆ ಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿ?ತ್ ತುಮಕೂರು ಡಿಡಿ ಪಿಯು ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿತು.
ಈ ಹೋರಾಟದಲ್ಲಿ ಎಬಿವಿಪಿಯ ತುಮಕೂರು ವಿಭಾಗ ಕಾರ್ಯದರ್ಶಿ ಅಪ್ಪು ಪಾಟೀಲ್, ನಗರ ಕಾರ್ಯದರ್ಶಿ ಪ್ರತಾಪ್ ಸಿಂಹ, ನಗರ ವಿದ್ಯಾರ್ಥಿನಿ ಪ್ರಮುಖ್ ಅರ್ಪಿತಾ ಕೆ.ಸಿ., ಚೈತ್ರ, ಸಿದ್ಧಾರ್ಥ್, ಪವನ್ ಸೇರದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.