ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿ ಜಾಗೃತವಾದರೆ ಆ ಶಕ್ತಿಯಲ್ಲಿಯೂ ಕಾರ್ಯಾನುರೂಪ ತಾರಕ ಅಥವಾ ಮಾರಕ ದೇವಿತತ್ತ್ವ ಆಕರ್ಷಿಸುವ ಪ್ರಚಂಡ ಕ್ಷಮತೆ ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದ ದೊರೆಯಲು ಸ್ತ್ರೀಯ ಭ್ರೂಮಧ್ಯದಲ್ಲಿ ಅಥವಾ ಇನ್ನೋರ್ವ ಸ್ತ್ರೀ ಕುಂಕುಮ ಹಚ್ಚುವುದರಿಂದ ಸ್ತ್ರೀಯಲ್ಲಿರುವ ತಾರಕ ಶಕ್ತಿತತ್ತ್ವದ ಸ್ಪಂದನ ಜಾಗೃತವಾಗಿ ವಾತಾವರಣದಲ್ಲಿರುವ ಶಕ್ತಿತತ್ತ್ವದ ಪಾವಿತ್ರ್ಯ ಆ ಸ್ತ್ರೀಯಲ್ಲಿ ಆಕರ್ಷಿಸುತ್ತದೆ.
ಮಂಗಳಸೂತ್ರ
೨ ಬಟ್ಟಲುಗಳ ರಚನೆಯಿಂದಾಗಿ ಮಂಗಳಸೂತ್ರದ ಹಿಂದಿನ ಟೊಳ್ಳಿನಲ್ಲಿ ನಿರ್ಮಾಣವಾಗುವ ಆಕರ್ಷಣಾಲಹರಿ ಯಿಂದಾಗಿ ಇತರ ಯಾವುದೇ ಅಲಂಕಾರದ ತುಲನೆಯಲ್ಲಿ ಮಂಗಳ ಸೂತ್ರದಲ್ಲಿ ಈಶ್ವರೀತತ್ತ್ವ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ.
ಬಳೆ
ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿಯಲಾಗುತ್ತದೆ. ಹಸಿರು ಬಳೆ ತೊಡುವುದು ಸುವಾಸಿನಿಯರ ಪತಿವ್ರತಾ ದರ್ಶಕ ಪ್ರಕಟ ಶಕ್ತಿರೂಪದ ಸಾಲಂಕೃತ ಪೂಜೆ ಮಾಡುವ ಪ್ರತೀಕವಾಗಿದೆ. ಬಳೆಯಲ್ಲಿ ಕಾರ್ಯನಿರತವಿರುವ ದೇವಿತತ್ತ್ವದ ಶಕ್ತಿಲಹರಿ ಮಣಿಗಂಟಿನಲ್ಲಿ ಗ್ರಹಣವಾಗಿ ಸಂಪೂರ್ಣ ಕೈಯಲ್ಲಿ ಹರಡುವುದರಿಂದ ಕೈಗೆ ಕಾರ್ಯ ಮಾಡುವ ಶಕ್ತಿ ದೊರೆಯುತ್ತದೆ. ವಿಧವಾ ಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ.
ಕಾಲುಂಗುರ
ಕಾಲುಂಗುರದ ಅಲಂಕಾರದಿಂದಾಗಿ ಸ್ತ್ರೀಗೆ ಅವಳ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮದ ಬಗ್ಗೆ ಸತತ ಅರಿವಿರುತ್ತದೆ. ಆದ್ದರಿಂದ ಸ್ತ್ರೀಯು ಸ್ವೇಚ್ಛಾಚಾರ ಮಾಡದೇ ಬಂಧನದಲ್ಲಿ ಸಿಲುಕಿರುತ್ತಾಳೆ ಮತ್ತು ಧರ್ಮಪಾಲನೆ ಮಾಡುತ್ತಾಳೆ.
ಆಭರಣಗಳಲ್ಲಿನ ತೇಜತತ್ತ್ವರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ನೀಡುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಕಡೆಗೆ ಒಯ್ಯುತ್ತದೆ : ಆಭರಣಗಳಲ್ಲಿನ ತೇಜತತ್ತ್ವವು ಸ್ತ್ರೀಯರಲ್ಲಿನ ರಜೋಗುಣದ ಕಾರ್ಯಕ್ಕೆ ಯೋಗ್ಯ ದಿಶೆಯನ್ನು ನೀಡಿ ಅವರನ್ನು ತಮ್ಮ ತೇಜದ ಬಂಧನದಲ್ಲಿ (ತೇಜಕ್ಕನುಸಾರ) ಕಾರ್ಯವನ್ನು ಮಾಡಿಸುವುದರಿಂದ ಅಲಂಕೃತ ಸ್ತ್ರೀಯರು ಸ್ವೇಚ್ಛಾಚಾರದಿಂದ ವರ್ತಿಸುವುದು ಅತ್ಯಲ್ಪವಾಗುತ್ತದೆ. ಸ್ವೇಚ್ಛಾಚಾರವು ಸ್ತ್ರೀಯನ್ನು ವ್ಯಭಿಚಾರಿಯನ್ನಾಗಿ ಮಾಡುತ್ತದೆ, ಆದರೆ ಆಭರಣಗಳಲ್ಲಿನ ತೇಜತತ್ತ್ವ ರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ಪ್ರದಾನಿಸುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಮಾರ್ಗಕ್ಕೆ ಒಯ್ಯುತ್ತದೆ.
ಸೌಭಾಗ್ಯಾಲಂಕಾರಗಳೆಂದರೆ ಸ್ತ್ರೀಯರಿಗೆ ಪಾತಿವ್ರತ್ಯದ ಅರಿವು ಮಾಡಿಸುವ ಮಾಧ್ಯಮಗಳು
೧. ಸ್ತ್ರೀಯರಿಗೆ ಸೌಭಾಗ್ಯಾಲಂಕಾರಗಳಿಂದ ಸತತವಾಗಿ ಆಗುವ ತೇಜಲಹರಿಗಳ ಸ್ಪರ್ಶವು, ಅವರಲ್ಲಿನ ಪಾತಿವ್ರತ್ಯದ ಅರಿವು ಮಾಡಿಕೊಡುತ್ತದೆ. ಇದಕ್ಕಾಗಿಯೇ ಈ ವ್ಯವಸ್ಥೆ ಮಾಡಲಾಗಿದೆ.
೨. ಸೌಭಾಗ್ಯಾಲಂಕಾರಗಳೆಂದರೆ ಅಸುರೀ ಶಕ್ತಿಗಳ ಭೋಗ ದೃಷ್ಟಿಯಿಂದ ರಕ್ಷಿಸಲು ಮಾಡಿರುವ ಒಂದು ಪ್ರಯತ್ನ : ಕಲಿಯುಗವು ರಜತಮ ಪ್ರಧಾನವಾಗಿರುವುದರಿಂದ ಈ ಕಾಲವು ಸ್ವೇಚ್ಛಾಚಾರಕ್ಕೆ ಅನುಕೂಲ ಮತ್ತು ಸಾಧನೆಗೆ ಪ್ರತಿಕೂಲವಾಗಿದೆ. ಈ ಯುಗದಲ್ಲಿ ಸ್ತ್ರೀಯರ ಪಾವಿತ್ರ್ಯಕ್ಕೆ ಅಥವಾ ಸೌಭಾಗ್ಯಕ್ಕೆ ಆಭರಣಗಳ ರೂಪದಲ್ಲಿ ತೇಜಸ್ಸಿನ ಬೇಲಿಯನ್ನು ಹಾಕಲಾಗಿದೆ. ಈ ತೇಜಸ್ಸಿನ ಬಲದಿಂದ ಅವಳ ಶೀಲದ ರಕ್ಷಣೆಯಾಗುತ್ತದೆ. ಸೌಭಾಗ್ಯವತಿ ಸ್ತ್ರೀಯರನ್ನು ಮಂಗಳಸೂತ್ರ, ಬಳೆ ಮತ್ತು ಕುಂಕುಮ ಮುಂತಾದ ಸೌಭಾಗ್ಯದ ಅಲಂಕಾರಗಳು ರಕ್ಷಿಸುತ್ತವೆ. ಈ ರೀತಿಯಲ್ಲಿ ಕಲಿಯುಗದಲ್ಲಿ ಅಸುರೀ ಶಕ್ತಿಗಳ ಭೋಗದೃಷ್ಟಿಯಿಂದ ರಕ್ಷಿಸಲು ಪ್ರಯತ್ನಿಸಲಾಗಿದೆ.
(ಆಧಾರ : ಸನಾತನದ ಗ್ರಂಥ ‘ಸ್ತ್ರೀಯರ ಆಭರಣಗಳ ಶಾಸ್ತ್ರ’)
ಜಾಲತಾಣ : sanatanshop.com
ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ, ಸಂಪರ್ಕ : 9342599299