ತುಮಕೂರು: ಗಾಂಧೀಜಿ ಸತ್ಯ, ಅಹಿಂಸೆ, ಶುಚಿತ್ವದ ಬಗ್ಗೆ ಹೆಚ್ಚು ಬೆಳಕು ಚೆಲ್ಲುವುದರೊಂದಿಗೆ ಗ್ರಾಮ ಸ್ವರಾಜ್ಯದ ಕನಸನ್ನು ಕಂಡು ಗ್ರಾಮಗಳು ಎಂದು ಉದ್ದಾರವಾಗುತ್ತವೋ ಅಂದು ದೇಶವು ಉದ್ದಾರವಾಗುತ್ತದೆ ಎಂದರು. ಗಾಂಧೀಜಿ ತಿಳಿಸಿದ ಹಾಗೆ ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿಯೇ ವ್ಯಾಪಾರವನ್ನು ಕಂಡು ಕೊಂಡರೆ ಗ್ರಾಮಗಳ ಉದ್ದಾರವಾಗುತ್ತದೆ ಭಾರತವನ್ನು ಒಂದು ಗೂಡಿಸುವಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪಾತ್ರ ಮಹತ್ವದ್ದು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧೀಜಿರವರ ಕುರಿತು ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯವನ್ನು ನೆನಪಿಸಿಕೊಂಡು ರೈತರು ಮತ್ತು ಸೈನಿಕರ ಬಗ್ಗೆ ಅವರೊಳಗಿದ್ದ ಕಾಳಜಿಯನ್ನು ಸ್ಮರಿಸಿದರು ಎಂದು ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯನವರು ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಗಿತ್ತು.
ಅವರು ಮಾತನಾಡುತ್ತಾ ದೇಶದ ಎಲ್ಲ ಜನರಿಗೂ ಸರ್ವಕಾಲಕ್ಕೂ ಸಲ್ಲಬಹುದಾದ ಬಾಪೂಜಿಯವರಂತಹ ಆದರ್ಶಮಯ ವ್ಯಕ್ತಿತ್ವ ಮತ್ತು ಚಿಂತನೆಗಳು ಯುವಜನತೆಗೆ ಸದ್ಯದಲ್ಲಿ ಅತ್ಯಂತ ಅವಶ್ಯವೆಂದ ಅವರು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಗಾಂಧೀಜಿಯವರ ಚಿಂತನೆಗಳ ಪ್ರಭಾವಿ ಚರ್ಚೆಗಳ ಮತ್ತು ಪ್ರಸಾರದ ಅಗತ್ಯತೆ ತೀವ್ರವಾಗಿ ಆಗಬೇಕಿದೆಯೆಂದರು.
ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.