ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ವತಿಯಿಂದ 2020-21 ನೇ ಸಾಲಿನ ಸಮೂದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹಾಗು ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ಕ್ಷೌರಿಕ ವೃತ್ತಿದಾರರಿಗೆ ಮತ್ತು ಮಂಗಳವಾದ್ಯ ಕಲಾವಿದರಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ತುಮಕೂರಿನ ಶಾಸಕರಾದ ಶ್ರೀ ಜಿ ಬಿ ಜ್ಯೋತಿ ಗಣೇಶ್ ರವರು ಮಾತನಾಡಿ ಸವಿತಾ ಸಮಾಜಕ್ಕೆ ಸಾಕಸ್ಟು ಅನುದಾನವನ್ನ ಕಟ್ಟಡ ಕಾಮಗಾರಿಗೆ ನೀಡಿದ್ದೆವೆ, ಇನ್ನು ಅನುದಾನವನ್ನ ಕೊಡುತ್ತೆವೆ. ಸವಿತಾ ಸಮೂದಾಯದವರು ಮುಖ್ಯವಾಯಿನಿಗೆ ಬರಬೇಕು ಸರ್ಕಾರದಿಂದ ಬರುವ ಸವಲತ್ತನ್ನ ನಿವೆಲ್ಲಾ ಪಡೆಯುವಂತರಾಗಿ ಎಂದರು. ನಂತರ ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ಅಧ್ಯಕ್ಷರಾದ ಕಟ್ ವೆಲ್ ರಂಗನಾಥ್ ರವರು ಮಾತನಾಡಿ ಸಮೂದಾಯದ ಮಕ್ಕಳಾದ ನೀವುಗಳು ಸಮಾಜಕ್ಕೆ ಕಿರ್ತೀ ತರುವಂತಾಗಬೇಕು. ಮುಂದಿನ ನಿಮ್ಮ ವಿದ್ಯಾಭ್ಯಾಸ ಉನ್ನತ ಮಟ್ಟದಲ್ಲಿ ಸಾಗಲಿ ಎಂದು ಹೇಳಿದರು. ಕ್ಷೌರಿಕ ವೃತ್ತಿ ಹಾಗು ಮಂಗಳವಾದ್ಯ ಇವೇರಡು ಸವಿತಾ ಸಮಾಜದ ಒಂದೇ ನಾಣ್ಯದ ಎರಡು ಮುಖಗಳು ನಿಮ್ಮಗಳ ಸೇವೆ ಸಾರ್ವಜನಿಕವಾಗಿ ಅಪಾರ , ವೃತ್ತಿಯನ್ನ ಮುಂದಿನ ದಿನಗಳಲ್ಲಿ ಆಧುನಿಕತೆಗೆ ತೆಗೆದುಕೊಂಡು ಹೋಗಬೇಕು. ಸಮಾಜದ ಬಂದುಗಳು ತಮ್ಮ ಮಕ್ಕಳಿಗೆ ಹೆಚ್ಚಿನದಾಗಿ ಶಿಕ್ಷಣಕ್ಕೆ ಹೊತ್ತು ಕೊಡಬೇಕು ಎಂದು ಮಾತನಾಡಿದರು. ಸ್ವದೇಶಿ ವಿಶ್ವಣ್ಣನವರು ಇತಿಹಾಸದ ಜೊತೆ ಜೊತೆಯಲಿ ಸಮಾಜ ಎಂಬ ವಿಚಾರವಾಗಿ ಮಾತನಾಡಿದರು. ಬೆಂಗಳೂರಿನ ನಾಮದೇವ್ ನಾಗರಾಜು ಇಂದಿನ ಆಧುನಿಕ ವೃತಿ ಕೌಶಲ್ಯದ ಬಗ್ಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪಾರ್ಥಸಾರಥಿ, ಜಿಲ್ಲಾ ಖಜಾಂಚಿಯಾದ ಮೇಲಾಕ್ಷಪ್ಪ, ಸಮಾಜದ ಸಂಪನ್ಮೂಲ ವ್ಯಕ್ತಿಗಳಾದ ಸ್ವದೇಶಿ ವಿಶ್ವಣ್ಣನವರು, ನಾಮದೇವ್ ನಾಗರಾಜು ರವರು, ಹಾಗು ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ಎಲ್ಲಾ ಪಧಾದಿಕಾರಿಗಳು ಸವಿತಾ ಸಮಾಜದ ಬಂಧುಗಳು ಹಾಜರಿದ್ದರು.