ಮೇಷ: ದಾಂಪತ್ಯದಲ್ಲಿ ಸಮೃದ್ಧಿ ಹಾಗು ತೃಪ್ತಿ ದಾಯಕ, ಆಸ್ತಿ ಮತ್ತು ಧನಾಗಮನ, ಮದುವೆ ಚರ್ಚೆ ಸಂಭವ, ಸಂತಾನ ಫಲದ ಸಿಹಿಸುದ್ದಿ, ಮಕ್ಕಳಿಂದ ಧನಪ್ರಾಪ್ತಿ, ಕೋರ್ಟ್ ಕೇಸ್ ಜಯ, ಸಾಲದಿಂದ ಮುಕ್ತಿ, ನಿವೇಶನ ಖರೀದಿ ಸಾಧ್ಯತೆ, ಆರೋಗ್ಯ ಸುಧಾರಣೆ, ಹೊಸ ವಾಹನ ಖರೀದಿ.
ವೃಷಭ: ಮನೆಯಲ್ಲಿ ಇಂದು ಆಸ್ತಿ ವಿಚಾರವಾಗಿ ಕಲಹ ಉಂಟಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಎಣ್ಣೆಯಲ್ಲಿ ಕರಿದ, ಹೊರಗಿನ ಆಹಾರ ಸೇವನೆ ಬೇಡ. ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡುವ ನೀವು ಅತಿಯಾಗಿ ದಣಿಯಲಿದ್ದೀರಿ.
ಮಿಥುನ: ನಿಮ್ಮ ಪರಿಶ್ರಮದ ಕೆಲಸಕ್ಕೆ ಬೆಲೆ ಸಿಗದಿರುವುದು ಅಸಮಾಧಾನ ತರಿಸುತ್ತದೆ. ಕುಟುಂಬಸ್ಥರೊಡನೆ ಭಿನ್ನಾಭಿಪ್ರಾಯ ಕಂಡುಬರಲಿದೆ. ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಮಿತ್ರರಿಂದ ಸಹಕಾರ ಸಿಗಲಿದೆ. ಉದ್ಯಮದಲ್ಲಿ ನಷ್ಟ ಆವರಿಸಬಹುದು.
ಕಟಕ: ಕೆಲಸಕ್ಕಾಗಿ ಅಲೆದಾಟ ಮನಸ್ಸು ಕುಗ್ಗಲಿದೆ, ನಿಮಗೂ ಮತ್ತು ಅಧಿಕಾರಿ ನಡುವೆ ಮಾತಿನ ಚಕಮಕಿ ಸಂಭವ, ಹೂಡಿಕೆದಿಂದ ಹಣ ನಷ್ಟ ಸಂಭವ, ಪದೇಪದೇ ಆರೋಗ್ಯದಲ್ಲಿ ತೊಂದರೆ ಮಾನಸಿಕ ಖಿನ್ನತೆ ಹೆಚ್ಚಾಗಲಿವೆ, ದಾಂಪತ್ಯದಲ್ಲಿ ಅನುಮಾನ ಸೃಷ್ಟಿ.
ಸಿಂಹ: ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವುದು. ಹಳೆಯ ಮಿತ್ರರ ಒಡನಾಟ ಸಂತಸ ತರುವುದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಗಂಡ-ಹೆಂಡತಿ ಮಧ್ಯೆ ಇರುವ ಗೊಂದಲ ನಿವಾರಣೆ.
ಕನ್ಯಾ: ಮಾನಸಿಕ ಒತ್ತಡ ಹೆಚ್ಚಾಗಲಿದೆ, ಸಹೋದ್ಯೋಗಿಗಳ ಜೊತೆ ವ್ಯವಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಮಾತಾಪಿತೃ ಜೊತೆ ಭಿನ್ನಾಭಿಪ್ರಾಯ, ಲವ್ ಲೈಫ್ ವಿವಾದಾತ್ಮಕ ಮಾತುಕತೆಗಳು, ರಹಸ್ಯ ಶತ್ರುಗಳು ಮತ್ತು ಅಸೂಯೆ ಪಟ್ಟ ಜನರ ಬಗ್ಗೆ ಜಾಗೃತಿ ವಹಿಸಿ.
ತುಲಾ: ತಾಯಿಯ ಆರೋಗ್ಯ ಕ್ಷೀಣಿಸುವುದರಿಂದ ಇಂದು ನಿಮ್ಮ ಪಾಲಿಗೆ ಅತ್ಯಂತ ಆತಂಕದ ದಿನ ಎನಿಸಲಿದೆ. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಸಾಲ ಕೊಡುವುದು ಹಾಗೂ ಪಡೆಯುವುದನ್ನು ತಪ್ಪಿಸಿ.
ವೃಶ್ಚಿಕ: ಸಂಗಾತಿಯು ನಿಮಗೆ ಅತ್ಯಂತ ದುಬಾರಿ ಉಡುಗೊರೆಯನ್ನು ನೀಡಲಿದ್ದಾರೆ. ಇದರಿಂದ ನೀವು ತುಂಬಾನೇ ಸಂತಸಗೊಳ್ಳುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಕೋಪಬಂದಾಗ ಕೆಟ್ಟ ಪದಗಳ ಬಳಕೆ ಮಾಡಬೇಡಿ. ಇದರಿಂದ ದೊಡ್ಡ ಮನಸ್ತಾಪವೇ ಉಂಟಾಗಬಹುದು.
ಧನಸು: ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಸಾಧನೆ ಕಂಡುಬರುತ್ತದೆ. ಅವಿವಾಹಿತರಿಗೆ ಶುಭ ಕಾರ್ಯದ ಬಗ್ಗೆ ಸಕಾರಾತ್ಮಕ ಫಲಿತಾಂಶ ಕಂಡುಬರುತ್ತದೆ. ಮಿತ್ರರೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಿಸುವಿರಿ.
ಮಕರ: ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವುದು ಗುರುಸ್ತೋತ್ರ ಪಾರಾಯಣ ಮಾಡಿರಿ.
ಕುಂಭ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಸಭಾಸಮಾಜ ಕೀರ್ತಿ ಲಭಿಸುವುದು.
ಮೀನ: ಲೋಕೋಪಕಾರ ಮಾಡಲು ಹೋಗಿ ಮುಜುಗರರಾಗುವಿರಿ, ವ್ಯಾಪಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಜಾಗರೂಕರಾಗಿರಿ, ಗ್ರಾಹಕರೊಡನೆ ವಾದವಿವಾದ ಬೇಡ, ಸೌಜನ್ಯದಿಂದ ವರ್ತಿಸಿ ಲಾಭ ನಿಮಗಾಗಲಿ, ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕಾಗಿ ಅನಗತ್ಯ ತೊಂದರೆಗಳು ಎದುರಿಸುವಿರಿ.